ಹತ್ಯೆಗೀಡಾದ ವಿದ್ಯಾರ್ಥಿ ಕಾರ್ಯಕರ್ತನ ಮನೆಗೆ ಕೇರಳ ಮುಖ್ಯಮಂತ್ರಿ ಭೇಟಿ

ಕಣ್ಣೂರು: ಕೇರಳ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜನವರಿಯಲ್ಲಿ ಇಡುಕ್ಕಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಹತ್ಯೆಗೀಡಾದ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಕಾರ್ಯಕರ್ತನ ಮನೆಗೆ ಭಾನುವಾರ ಭೇಟಿ ನೀಡಿದ್ದರು.

ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ‌ʻತಮ್ಮ ಮಗನ ಸಾವಿನ ಬಗ್ಗೆ ಇನ್ನೂ ಸಹಜ ಸ್ಥಿತಿಗೆ ಬರದಿರುವ ಪೋಷಕರನ್ನು ಭೇಟಿ ಮಾಡಿದ್ದೇನೆ ಮತ್ತು ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಬೆಂಬಲವನ್ನುನೀಡುವುದಾಗಿ ಅವರಿಗೆ ಭರವಸೆ ನೀಡಿದ್ದೇನೆʼ ಎಂದು ತಿಳಿಸಿದ್ದಾರೆ.

ಜನವರಿ 10 ರಂದು ಮಧ್ಯಾಹ್ನ ಕಣ್ಣೂರು ನಿವಾಸಿ ಧೀರಜ್ ರಾಜೇಂದ್ರನ್(21) ಮತ್ತು ಇತರ ಇಬ್ಬರಾದ ಅಭ್ಜಿತ್ ಮತ್ತು ಅಮಲ್ ಮೇಲೆ ದಾಳಿ ನಡೆಸಲಾಗಿತ್ತು. ಯುವ ಕಾಂಗ್ರೆಸ್ ಜಿಲ್ಲಾ ಮುಖಂಡ ನಿಖಿಲ್ ಪೈಲಿ ಎಂಬಾತ ಹೊರಗಿನ ತಂಡದೊಂದಿಗೆ ಕಾಲೇಜಿಗೆ ಆಗಮಿಸಿ ಧೀರಜ್ ಮತ್ತು ಇತರರನ್ನು ಇರಿದು ಕ್ಯಾಂಪಸ್‌ನಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಧೀರಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತೊಡುಪುಳ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಮೊದಲ ಆರೋಪಿ ಯುವ ಕಾಂಗ್ರೆಸ್ ವಾಜತೊಪ್ಪು ಕ್ಷೇತ್ರದ ಅಧ್ಯಕ್ಷ ನಿಖಿಲ್ ಪೈಲಿ ಆಗಿದ್ದಾನೆ. ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಶುಕ್ರವಾರ ನಡೆದ ಜಾಮೀನು ಅರ್ಜಿ ವಿಚಾರಣೆಯಲ್ಲಿ ನ್ಯಾಯಾಧೀಶ ಎಸ್.ಸಶಿಕುಮಾರ್ ಎರಡರಿಂದ ಆರು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

Donate Janashakthi Media

Leave a Reply

Your email address will not be published. Required fields are marked *