ಅಮರೇಶ್ ನುಗಡೋಣಿಯವರ `ದಡ ಸೇರಿಸು ತಂದೆ’ ಕೃತಿಗೆಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ

ಬೆಂಗಳೂರು: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಗೌರವ ಲಭಿಸಿದ್ದು, ಪ್ರಸಿದ್ಧ ಕಥೆಗಾರ ಅಮರೇಶ್ ನುಗಡೋಣಿ ಅವರ ‘ದಡ ಸೇರಿಸು ತಂದೆ’ ಕಥಾಸಂಕಲನಕ್ಕೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಲಾಗಿದೆ. ಅಮರೇಶ್

ಅಕಾಡೆಮಿಯು ದೇಶದ ವಿವಿಧ ಭಾಷೆಗಳಲ್ಲಿನ ಉತ್ತಮ ಕೃತಿಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಕನ್ನಡ ವಿಭಾಗದಲ್ಲಿ ನುಗಡೋಣಿ ಅವರ ಕೃತಿ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ. ‘ದಡ ಸೇರಿಸು ತಂದೆ’ ಕಥಾಸಂಕಲನವು ಇತ್ತೀಚಿನ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದು, ಸಮಾಜದ ಸಂಕೀರ್ಣತೆಗಳನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುವ ಕೃತಿಯಾಗಿ ಗುರುತಿಸಿಕೊಂಡಿದೆ.

ಈ ಸಂಕಲನದಲ್ಲಿ ಒಟ್ಟು ಎಂಟು ಕಥೆಗಳು ಸೇರಿದ್ದು, ಗ್ರಾಮೀಣ ಬದುಕಿನ ವಿವಿಧ ಮುಖಗಳು, ಸಾಮಾಜಿಕ ಅಸಮಾನತೆಗಳು, ಮರ್ಯಾದೆಗೇಡು ಹತ್ಯೆ  ಮತ್ತು ಗುಂಪು ಹಿಂಸಾಚಾರ (mob lynching) ಮೊದಲಾದ ಸೂಕ್ಷ್ಮ ಹಾಗೂ ತೀವ್ರ ವಿಷಯಗಳನ್ನು ಲೇಖಕರು ಆಳವಾಗಿ ಚರ್ಚಿಸಿದ್ದಾರೆ. ಮಾನವೀಯ ಸಂಬಂಧಗಳ ನಾಜೂಕು, ಸಮಾಜದ ಒಳಗುಳಿದ ಸಂಘರ್ಷಗಳು ಮತ್ತು ಬದಲಾಗುತ್ತಿರುವ ಮೌಲ್ಯ ವ್ಯವಸ್ಥೆಯನ್ನು ಕಥೆಗಳ ಮೂಲಕ ಪ್ರತಿಬಿಂಬಿಸಿರುವುದು ಈ ಕೃತಿಯ ಪ್ರಮುಖ ವೈಶಿಷ್ಟ್ಯವಾಗಿದೆ.

ಇದನ್ನೂ ಓದಿ : ಕರ್ನಾಟಕ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಹಂಚಿಕೆಗಾಗಿ ಹೊಸ ನಿಯಮಗಳು ಜಾರಿ

‘ದಡ ಸೇರಿಸು ತಂದೆ’ ನುಗಡೋಣಿ ಅವರ ಆರನೇ ಕಥಾಸಂಕಲನವಾಗಿದ್ದು, ಅವರ ಬರವಣಿಗೆಯ ಪರಿಪಕ್ವತೆ ಮತ್ತು ಸಾಮಾಜಿಕ ಬದ್ಧತೆಯನ್ನು ಈ ಕೃತಿ ಸ್ಪಷ್ಟವಾಗಿ ತೋರಿಸುತ್ತದೆ ಎಂದು ಸಾಹಿತ್ಯ ವಲಯದ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ಕಾಲಘಟ್ಟದ ಸಾಮಾಜಿಕ-ರಾಜಕೀಯ ವಾತಾವರಣವನ್ನು ಸಾಹಿತ್ಯದ ಮೂಲಕ ಪ್ರತಿನಿಧಿಸುವಲ್ಲಿ ಈ ಸಂಕಲನ ಯಶಸ್ವಿಯಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಭಾಗವಾಗಿ ರೂ.1 ಲಕ್ಷ ನಗದು ಬಹುಮಾನ, ಪ್ರಶಸ್ತಿ ಫಲಕ ಮತ್ತು ಗೌರವಪತ್ರ ನೀಡಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ನವದೆಹಲಿನಲ್ಲಿ ನಡೆಯಲಿದ್ದು, ದಿನಾಂಕವನ್ನು ಅಕಾಡೆಮಿ ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.

ಈ ಪ್ರಶಸ್ತಿ ಮೂಲಕ ಅಮರೇಶ್ ನುಗಡೋಣಿ ಅವರು ಕನ್ನಡ ಕಥಾಸಾಹಿತ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದು, ಹೊಸ ಪೀಳಿಗೆಯ ಬರಹಗಾರರಿಗೆ ಪ್ರೇರಣೆಯಾಗಿದ್ದಾರೆ ಎಂದು ಸಾಹಿತ್ಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ನೋಡಿ :ಓದು ಕಾರ್ಯಾಗಾರ | ವಿದ್ಯಾರ್ಥಿಗಳ ಕಣ್ಣಲ್ಲಿ ಕುವೆಂಪು Janashakthi Media

Donate Janashakthi Media

Leave a Reply

Your email address will not be published. Required fields are marked *