ಕೇಂದ್ರ-ರಾಜ್ಯ ಬಜೆಟ್‌ ಶ್ರೀಮಂತರ ಪರವಾದದ್ದು; ಸಿಐಟಿಯ ಕಾರ್ಯದರ್ಶಿ ಚಂದ್ರಶೇಖರ್‌

ಉಡುಪಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಜೆಟ್ ಗಳು ಶ್ರೀಮಂತ ಉದ್ದಿಮೆದಾರರ ಪರವಾಗಿದ್ದು ಸಾಮಾನ್ಯ ಜನರಿಗೆ ಸಂಕಷ್ಟ ತರಲಿದೆ ಎಂದು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು), ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್‌ ತಿಳಿಸಿದರು.

ಅವರು, ಇತ್ತೀಚಿಗೆ ಸಿಐಟಿಯು ಉಡುಪಿ ಮತ್ತು ಬ್ರಹ್ಮಾವರ ತಾಲ್ಲೂಕು ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮತ್ತು ಕೇಂದ್ರ ಸರಕಾರಗಳ ಬಜೆಟ್ – 2023 ಕುರಿತು ವಿಮಾ ನೌಕರರ ಸಂಘದ ಕಛೇರಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನು ಓದಿ: ರಾಜ್ಯ ಸರ್ಕಾರದ ಕಾರ್ಖಾನೆಗಳ ಕಾಯ್ದೆ ತಿದ್ದುಪಡಿ ವಿರೋಧಿಸಿ ಒಂದು ದಿನದ ಕೈಗಾರಿಕಾ ಮುಷ್ಕರ ಕಾರ್ಮಿಕ ಸಂಘಟನೆಗಳ ಕರೆ

ಚಂದ್ರಶೇಖರ್‌, ಜನಸಾಮಾನ್ಯರ ಬದುಕಿನ ಮೇಲೆ ಆಗುವಂತಹ ಸಮಸ್ಯೆಗಳ ಬಗ್ಗೆ ವಿವರಿಸಿದರು ಮತ್ತು ರಾಜ್ಯ ಬಜೆಟ್ ಅಧಿವೇಶನದ ಕೊನೆಯ ದಿನ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಿದ ಮಸೂದೆಯನ್ನು ಖಂಡಿಸಿದರು. ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷಗಳಲ್ಲದೆ, ಬಿಜೆಪಿಯ ಶಾಸಕರೊಬ್ಬರ ತೀವ್ರ ವಿರೋಧದ ನಡುವೆಯೂ ಮಸೂದೆಯನ್ನು ಅಂಗೀಕರಿಸಲಾಗಿದೆ. ಇದು ಅತ್ಯಂತ ಸ್ಪಷ್ಟವಾಗಿ ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದು ಹೇಳಿದರು.

ವಿಮಾ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಂದರ್ ಮಾತನಾಡಿ, ಬಜೆಟ್ ಎಂಬ ಸಮುದ್ರ ಮಥನದಲ್ಲಿ ಅಮೃತವನ್ನು ಆಳುವವರಿಗೂ ವಿಷವನ್ನು ದುಡಿಯುವ ಜನರಿಗೂ ಹಂಚಲಾಗಿದೆ ಎಂದರು.

ಇದನ್ನು ಓದಿ: ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ ಮಾಡಿದ ರಾಜ್ಯ ಸರಕಾರದ ವಿರುದ್ಧ ಸಿಐಟಿಯು ರಾಜ್ಯಾದ್ಯಂತ ಪ್ರತಿಭಟನಾ ಪ್ರದರ್ಶನ

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮತ್ತು ಜಿಲ್ಲಾ ಖಜಾಂಜಿ ಶಶಿಧರ ಗೊಲ್ಲ ಸಭೆಯಲ್ಲಿ ಮಾತನಾಡಿದರು.

ಸಂವಾದ ಕಾರ್ಯಕ್ರಮದ ಅಂತಿಮದಲ್ಲಿ ಜನ ವಿರೋಧಿ ಬಜೆಟ್ ಹಾಗೂ ಕೆಲಸದ ಅವಧಿ ಹೆಚ್ಚಿಸಿದುದನ್ನು ವಿರೋಧಿಸಿ ಜನರ ನಡುವೆ ಪ್ರಚಾರ ನಡೆಸಬೇಕೆಂದು ಕರೆ ನೀಡಲಾಯಿತು.

ಸಭೆಯ ಅಧ್ಯಕ್ಷತೆ ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ವಾಮನ ಪೂಜಾರಿ ವಹಿಸಿದ್ದರು. ಉಡುಪಿ ತಾಲೂಕು ಸಮಿತಿಯ ಸಹ ಸಂಚಾಲಕ ಉಮೇಶ್ ಕುಂದರ್ ಸ್ವಾಗತಿಸಿ, ಬ್ರಹ್ಮಾವರ ತಾಲೂಕು ಸಮಿತಿ ಸಂಚಾಲಕ ರಾಮ ಕಾರ್ಕಡ ವಂದಿಸಿದರು.

ನಳಿನಿ, ಸಂಜೀವ ನಾಯಕ್, ಅಣ್ಣಪ್ಪ ಪೂಜಾರಿ, ಸುಭಾಸ್ ನಾಯಕ್, ರಂಗನಾಥ ಮತ್ತು ದಯಾನಂದ ಕೊರ್ರಂಗ್ರಪಾಡಿ, ಸಯ್ಯದ್, ರಮೇಶ್, ಮುರುಳಿ, ರಮೇಶ್ ಪೂಜಾರಿ ಮತ್ತಿತರರು ಭಾಗವಹಿಸಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *