ಕೆಂದ್ರ ಬಜೆಟ್ 2021 : ICDS ಗೆ ಹಣ ಕಡಿತ ವಿರೋಧಿಸಿ ಪ್ರತಿಭಟನೆ

ಬೆಂಗಳೂರು;ಫೆ.3 : ICDS ಯೋಜನೆಗೆ 30% ಹಣ ಕಡಿತ ಮಾಡಿರುವ, ಬಿಸಿಯೂಟಕ್ಕೆ 1400 ಕೋಟಿ ರೂ ಬಜೆಟ್ ಕಡಿತ ಮಾಡಿರುವ ಹಾಗೂ ವೇತನ ಹೆಚ್ಚಳ ಮಾಡದ ಕೇಂದ್ರ ಬಜೆಟ್ ವಿರೋಧಿಸಿ CITU ನಿಂದ  ಇಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ದೇಶದಲ್ಲಿ ಅಪೌಷ್ಠಿಕತೆ ಹೆಚ್ಚುತ್ತಿರುವಾಗ ICDS ಗೆ 30%  ಬಿಸಿಯೂಟ 1400 ಕೋಟಿ ಬಜೆಟ್ ನ್ನು ಕಡಿತ ಮತ್ತು ಕೊರೋನಾ ಹಾಗೂ ಅಪೌಷ್ಠಿಕತೆಯ ವಿರುದ್ಧ ಕೆಲಸ ಮಾಡಿದವರಿಗೆ ವೇತನ ಹೆಚ್ಚಳ ಮಾಡದಿರುವದನ್ನು ಸೆಂಟರ್ ಆಫ್ ಇಂಡಿಯನ್ ಯೂನಿಯನ್ (ಸಿಐಟಿಯು) ಕರ್ನಾಟಕ ರಾಜ್ಯ ಸಮಿತಿ ವಿರೋಧವನ್ನು ವ್ಯಕ್ತಪಡಿಸಿದೆ.

ಹೋರಾಟವನ್ನುದ್ದೇಶಿಸಿ ಸಿಐಟಿಯುನ ರಾಜ್ಯಾಧ್ಯಕ್ಷರಾದ ಎಸ್.ವರಲಕ್ಷ್ಮಿ ರವರು ಮಾತನಾಡುತ್ತಾ ICDS  ಮತ್ತು ಬಿಸಿಯೂಟ ಯೋಜನೆಗಳು ಮೂಲತಃ ಕೇಂದ್ರ ಸರ್ಕಾರದ ಯೋಜನೆಗಳಾಗಿವೆ. ಈ ಯೋಜನೆಗಳನ್ನು ಖಾಯಂ ಮಾಡುವ ಬದಲಿಗೆ ಬಜೆಟ್ ನಲ್ಲಿ ನಿರಂತರವಾಗಿ ಅನುದಾನಗಳಲ್ಲಿ ಕಡಿತ ಮಾಡುವ ಮುಖಾಂತರ ಈ ಯೋಜನೆಯನ್ನು ಹಂತ ಹಂತವಾಗಿ ಬಲಹೀನಗೊಳಿಸುತ್ತಿದೆ.  2020-21 ರಲ್ಲಿ 28557.38 ಕೋಟಿಯನ್ನು 2021-22 ರಲ್ಲಿ ಸಾಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಎಂದು ಬದಲಾಯಿಸಿ ಇದಕ್ಕಾಗಿ 20.105 ಕೋಟಿ ರೂ. ಗೆ ಇಳಿಸಿದೆ ಸಾಧನೆ ಎಂಬತೆ ದೊಡ್ಡ ಪ್ರಚಾರ ಮಾಡುತ್ತಿದೆ. ಆದರೆ ಇದರಲ್ಲಿ 8452.38 ಕೋಟಿ ಹಣ ಕಡಿತಮಾಡಿರುವುದನ್ನು ಮರೆಮಾಚುತ್ತಿದೆ. ಅಲ್ಲದೇ ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ 2014-19ರ ಅವಧಿಯಲ್ಲಿ ಅಪೌಷ್ಠಿಕತೆ ಹೆಚ್ಚಳವಾಗಿದೆ. ಈ ಸಮಸ್ಯೆಯನ್ನು ತುರ್ತಾಗಿ ಸರ್ಕಾರ ಗಮನಿಸಬೇಕಿದೆ ಎಂದು ಎಸ್.ವರಲಕ್ಷ್ಮಿ ರವರು ಆಗ್ರಹಿಸಿದ್ದಾರೆ.

ಇದನ್ನು ಓದಿ : 2021-22 ಕೇಂದ್ರ ಬಜೆಟ್ : ಜನ ವಿರೋಧಿ ಬಜೆಟ್ – ಹಲವರ ವಿರೋಧ

ಯೂನಿಸೆಫ್ ಭಾರತ ಸರ್ಕಾರಕ್ಕೆ  ದೇಶದ ಬಡತನ, ಹಸಿವು ಮತ್ತು ಅಪೌಷ್ಠಿಯಿಂದ 5 ವರ್ಷದೊಳಗಿನ 3 ಲಕ್ಷ ಮಕ್ಕಳು ಸಾವನಪ್ಪುವ ಮುನ್ಸೂಚನೆಯನ್ನು ನೀಡಿದೆ. ಅಲ್ಲದೆ ಭಾರತದ 8.8 ಕೋಟಿ ಮಕ್ಕಳ ತುಂಬಾ ದುರ್ಬಲವಾಗುತ್ತಿದ್ದಾರೆ ಎಂದು ಅದು ತಿಳಿಸಿದೆ. ಆರ್ಥಿಕತೆಯ ಅಭಿವೃದ್ಧಿ ಬಗ್ಗೆ ಮಾತನಾಡುವ ಸರ್ಕಾರ 2020-21 ರಲ್ಲಿ ಬಿಸಿಯೂಟ ಯೋಜನೆಗೆ ಖರ್ಚು ಮಾಡುವುದರ ಬದಲು ಅದರಲ್ಲಿಯೇ ಈಗ 1400 ಕೋಟಿ ಹಣ ಕಡಿತ ಮಾಡಿದೆ. ಕೋರೊನಾ ಫ್ರಂಟ್ ಲೈನ್ ಕಾರ್ಯಕರ್ತರಾಗಿ ದುಡಿದ ಅಂಗನವಾಡಿ, ಆಶಾಕಾರ್ಯಕರ್ತೆಯರಿಗೆ ಒಂದು ನಯಾ ಪೈಸೆ ಖರ್ಚು ಮಾಡಿಲ್ಲ. ಸುಮಾರು 10 ವರ್ಷಗಳಿಂದ ಕೇಂದ್ರ ಸರ್ಕಾರ ಬಿಸಿಯೂಟ ನೌಕರರಿಗೆ ಕೇವಲ 600 ರೂ ಕೊಟ್ಟು ದುಡಿಸಿಕೊಳ್ಳುತ್ತಿದೆ. ಅಲ್ಲದೇ ಬೆಲೆ ಏರಿಕೆ, ಇಂಧನ ತೈಲ ಬಲೆ ಏರಿಕೆ ಮಾಡಿದ್ದಾರೆ, 1 ಕೋಟೊಯಷ್ಟು ಸ್ಕೀಮ್ ನೌಕರರಿದ್ದಾರೆ ಅವರೆಲ್ಲ ಹೇಗೆ ಬದುಕಬೇಕು ? ಅವರು ಎಲ್ಲವನ್ನು ಹೇಗೆ ನಿಭಾಯಿಸಬೇಕು ಎಂದು ಸಿಐಟಿಯು ಉಪಾಧ್ಯಕ್ಷರಾದ ಟಿ.ಲೀಲಾವತಿ ಕೇಂದ್ರ ಸರ್ಕಾರಕ್ಕೆ ಪ್ರಶ್ನೆಮಾಡಿದ್ದಾರೆ.

ಈ ಹೋರಾಟದಲ್ಲಿ ಸಿಐಟಿಯುನ ರಾಜ್ಯ ಸಮಿತಿಯ ಸದಸ್ಯರಾದ ಬಿ.ಎಸ್. ನಾಗರತ್ನ,  ಲಕ್ಷ್ಮೀ ದೇವಮ್ಮ, ಮುಖಂಡರಾದ ಸೌಭಾಗ್ಯ, ನಾಗರತ್ನ,  ಸುಮಿತ್ರಾ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021- 22 ರಲ್ಲಿ ಏನಿದೆ? ಏನಿಲ್ಲ? ಹೋರಾಟಗಾರರು, ಹೇಳುವುದೇನು?

Donate Janashakthi Media

Leave a Reply

Your email address will not be published. Required fields are marked *