ಕೆಲಸ ಸಿಗದೆ ಮನನೊಂದು ಅತಿಥಿ ಉಪನ್ಯಾಸಕಿ ಉಮೆಯಾನಿ ಆತ್ಮಹತ್ಯೆ

ಬೇಲೂರು: ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ವೋದಯ ಕಾಲೇಜಿನಲ್ಲಿ ಕಳೆದ 4 ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಉಮೆಯಾನಿ (30) ಮಂಗಳವಾರ ರಾತ್ರಿ ತಮ್ಮ ತಾಯಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರಿನವರಾದ ಉಮೆಯಾನಿ ಕಳೆದ ಒಂದು ವರ್ಷದಿಂದ ಬೇಲೂರಿನ ವೈಡಿಡಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ವೋದಯ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಸರ್ಕಾರ ಉಪನ್ಯಾಸಕರ ಆಯ್ಕೆಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಕರೆದಿದ್ದು, ಇವರು ಸಹ ಅರ್ಜಿ ಸಲ್ಲಿಸಿದ್ದರು. ಆದರೆ, ಇವರು ಆಯ್ಕೆಯಾಗಿರಲಿಲ್ಲ. ಇದರಿಂದ ಮನನೊಂದು ಚಿಕ್ಕಮಗಳೂರಿನ ತಮ್ಮ ತಾಯಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಅತಿಥಿ ಉಪನ್ಯಾಸಕರ ತಮ್ಮ ಮೂಲಭೂತ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ದೀರ್ಘಕಾಲದ ಹೋರಾಟ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಹೆಚ್ಚುವರಿ ಕೆಲಸ ಹೊರೆಯನ್ನು ಉಪನ್ಯಾಸಕ ಮೇಲೆ ಹಾಕುತ್ತಿದೆ. 2021-22 ಸಾಲಿನಲ್ಲಿ 17106 ಉಪನ್ಯಾಸಕರು ಕೆಲಸ ನಿರ್ವಹಿಸುತ್ತಿದ್ದರು. ಅದರಲ್ಲಿ 7 ಸಾವಿರ ಉಪನ್ಯಾಸಕರಿಗೆ ಕೆಲಸ ಸಿಕ್ಕಿದೆ, ಉಳಿದ 10 ಸಾವಿರ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ಕೈಬಿಡಲಾಗಿದೆ ಎಂದು ಅತಿಥಿ ಉಪನ್ಯಾಸಕರು ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *