KEA ಸರ್ವರ್ ಡೌನ್: UGCET ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬ! ಅಭ್ಯರ್ಥಿಗಳು ಗಮನಿಸಿ, ಕೊನೆ ದಿನ ವಿಸ್ತರಣೆ

ಬೆಂಗಳೂರು: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET or UGCET-25) ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ವಿವಿಧ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಗೆ, ಆಪ್ಷನ್ ಆಯ್ಕೆಗೆ ಆಹ್ವಾನಿಸಲಾಗಿತ್ತು. ದಾಖಲೆ ಪರಿಶೀಲನೆಗೆ ದಿನಾಂಕ ಪ್ರಕಟಿಸಲಾಗಿತ್ತು. ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸರ್ವರ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ.

ಈ ಸಂಬಂಧ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ಅಭ್ಯರ್ಥಿಗಳಿಗೆ ಮಹತ್ವ ಅಪ್ಡೇಟ್ ನೀಡಿದ್ದಾರೆ. KEA ಸರ್ವರ್ ಡೌನ್ ಆಗಿತ್ತು. ಸಮಸ್ಯೆ ಕಾಣಿಸುತ್ತಿದ್ದಂತೆ ಪರಿಹರಿಸಲಾಗುತ್ತಿದೆ. ಸರ್ವರ್ ಸಮಸ್ಯೆ ಸಹಜ ಸ್ಥಿತಿಗೆ ಮರಳುತ್ತಿದೆ. ಸರ್ವರ್ ಸಮಸ್ಯೆ ಕಾರಣಕ್ಕೆ ಲಾಗಿನ್ ಆಗಿ ಆಪ್ಷನ್ಸ್ ಎಂಟ್ರಿ ಮಾಡಲು ಕೊಂಚ ವಿಳಂಬವಾಗುತ್ತಿದೆ.

ಇದನ್ನೂ ಓದಿ: ನಟ ದರ್ಶನ್‌ಗೆ ಸ್ವಿಟ್ಜರ್‌ಲ್ಯಾಂಡ್ ವೀಸಾ ನಿರಾಕರಣೆ

ಇದನ್ನು ಪರಿಗಣಿಸಿ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಆಪ್ಷನ್ ಎಂಟ್ರಿ ದಿನಾಂಕವನ್ನು ಜುಲೈ 15ರಿಂದ ಜುಲೈ 18ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಯುಜಿಸಿಇಟಿ 2025 ಪರೀಕ್ಷಾ ಅಭ್ಯರ್ಥಿಗಳು ಎಂಜಿನಿಯರಿಂಗ್, ಪಶು ವೈದ್ಯಕೀಯ ಮತ್ತು ಪಶುಸಂಗೋಪನೆ, ಕೃಷಿ ವಿಜ್ಞಾನ, ಬಿ.ಪಿ.ಟಿ. ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳಿಗೆ ಸೀಟು ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಈ ಪ್ರಕ್ರಿಯೆ ಪೂರೈಸಲು ಈ ಅವಕಾಶ ಬಳಸಿಕೊಳ್ಳಬೇಕು.

ಸೀಟು ಹಂಚಿಕೆ ಲಿಂಕ್ ಬಿಡುಗಡೆ, ಜುಲೈ 15 ಕೊನೆ ದಿನ.. ಅಭ್ಯರ್ಥಿಗಳು, ಕಾಲೇಜುಗಳು ಮತ್ತು ಕೋರ್ಸುಗಳ ಪಟ್ಟಿಯನ್ನು ಆದ್ಯತೆಯ ಕ್ರಮದಲ್ಲಿ (ಕಾಲೇಜ್ ಕೋಡ್ ಮತ್ತು ಕೋರ್ಸ್ ಕೋಡ್) ಬಿಳಿ ಕಾಗದದಲ್ಲಿ ಮುಂಚಿತವಾಗಿಯೇ ಬರೆದು ಸಿದ್ದಪಡಿಸಿಕೊಂಡು ನಂತರ ಪೋರ್ಟಲ್ ನಲ್ಲಿ ಆಪ್ಷನ್ ಎಂಟ್ರಿ ನಮೂದಿಸಬೇಕು.

ಹೀಗೆ ಮಾಡುವುದರಿಂದ ಒಮ್ಮೆಲೇ ಅಧಿಕ ಸಂಖ್ಯೆಯ ಅಭ್ಯರ್ಥಿಗಳು ಪೋರ್ಟಲ್ ಅನ್ನು ದೀರ್ಘ ಸಮಯದವರೆಗೆ ಸಕ್ರಿಯ ಅವಸ್ಥೆಯಲ್ಲಿ ಇರಿಸುವುದು ತಪ್ಪುತ್ತದೆ. ಇತರ ಅಭ್ಯರ್ಥಿಗಳಿಗೆ ಪೋರ್ಟಲ್ ಲಭ್ಯತೆಯನ್ನು ಇದು ಸುಲಭಗೊಳಿಸುತ್ತದೆ ಎಂದು ಅವರು ವಿವರಿಸಿದರು.

ಇದನ್ನೂ ನೋಡಿ: ಸಾರ್ವತ್ರಿಕ ಮುಷ್ಕರ | ಕೇಂದ್ರ – ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಸಿಡಿದೆದ್ದ ರೈತ – ಕಾರ್ಮಿಕರು Janashakthi

Donate Janashakthi Media

Leave a Reply

Your email address will not be published. Required fields are marked *