ಕಾವೇರಿ ಆರತಿ ಕೈ ಬಿಡಲು ಆಗ್ರಹಿಸಿ ಪ್ರಗತಿಪರ ಸಂಘಟನೆ ಪ್ರತಿಭಟನೆ

ಮಂಡ್ಯ: ಗಂಗಾರತಿ ಮಾದರಿಯಲ್ಲಿ 92ಕೋಟಿ ರೂಪಾಯಿ ವೆಚ್ಚದಲ್ಲಿ ಕಾವೇರಿ ಆರತಿ ಮಾಡುವುದಾಗಿ ರಾಜ್ಯ ಸರ್ಕಾರ ಅದರಲ್ಲೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುತುವರ್ಜಿಯಲ್ಲಿ ತೀರ್ಮಾನಿಸಿದೆ. ಬಿಜೆಪಿಗಿಂತ ತಾವು ಹೆಚ್ಚು ಶ್ರದ್ಧಾವಂತ ಹಿಂದುತ್ವವಾದಿಗಳು ಎಂದು ಬಿಂಬಿಸಿಕೊಳ್ಳುವ ಅಪಾಯಕಾರಿ ಮತ್ತು ಮೌಢ್ಯದ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ಇದಕ್ಕೆ ಮಂಡ್ಯ ಜಿಲ್ಲೆಯ ಪ್ರಗತಿಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ ಮುಖ್ಯಮಂತ್ರಿಗಳು ಮಂಡ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿ ಸಲ್ಲಿಸಿ ಕಾವೇರಿ ಆರತಿ ಎಂಬ ಅವೈಜ್ಞಾನಿಕ ಕಾರ್ಯಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದೇವು. ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತಂದಿರುವ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯ ನವರು, ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಸಭೆ ಕರೆದು ತೀರ್ಮಾನಿಸುವುದಾಗಿ ತಿಳಿಸಿದದರು . ತದನಂತರ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಕರೆದು ವಿರೋಧ ವ್ಯಕ್ತವಾಗಿದೆ ನಿಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿ ಸರ್ಕಾರ ತೀರ್ಮಾನ ಮಾಡುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು | ಪೊಲೀಸ್ ಪೇದೆ ಹುದ್ದೆ ಮತ್ತು ಪೊಲೀಸ್ ಇಲಾಖೆಯ ನೇಮಕಾತಿಗಳಲ್ಲಿ ವಯೋಮಿತಿ ಸಡಿಲಿಕೆಗೆ ಎಸ್ಎಫ್ಐ ಒತ್ತಾಯ

ನಂತರ ಎಲ್ಲಾ ಪ್ರಗತಿಪರ ಸಂಘಟನೆಗಳು ಸಮಾಲೋಚನಾ ಸಭೆ ನಡೆಸಿ ಜೊತೆಗೆ ಕಾನೂನು ಹೋರಾಟಕ್ಕೂ ಮುಂದಾಗಬೇಕೆಂದು ತೀರ್ಮಾನಿಸಿ ಹೈಕೋರ್ಟ್ನಲ್ಲಿ ತಡೆ ಆಜ್ಞೆ ತರಲಾಯಿತು ಈ ದಸರಾ ನೆಪ ಮಾಡಿಕೊಂಡು ಕಾವೇರಿ ಆರತಿ ಮಾಡೇತ್ತೀರುತ್ತೆನೆಂದು ಹಠಕ್ಕೆ ಬಿದ್ದು ತನ್ನ ವ್ಯಾಪಾರ ವ್ಯವಹಾರ ಕುದುರಿಸಿಕೊಳ್ಳಲು ಹೊರಟಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಡೆ ಆಜ್ಞೆ ಉಲ್ಲಂಘಿಸಿ ಕಾವೇರಿ ಆರತಿ ಮಾಡಿದ್ದಾರೆ ಇದನ್ನು ನಿಲ್ಲಿಸಬೇಕೆಂದು ರಸ್ತೆಯಲ್ಲಿ ಕುಳಿತು ಹೋರಾಟ ಮಾಡುವಾಗಕೆ.ಆರ್.ಎಸ್‌ ಬಳಿ ಅಮ್ಯೂಜ್ಮೆಂಟ್ ಪಾರ್ಕ್: ಕೆಆರ್ ಎಸ್ ಅಣೆಕಟ್ಟು ಬಳಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಮ್ಯೂಜ್ಮೆಂಟ್ ಪಾರ್ಕ್ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಇದನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದೆ.

ಆದರೆ 120 ಅಡಿ ಎತ್ತರದ ಕಾವೇರಿ ಪ್ರತಿಮೆ ಅಂದರೆ ಅದರ ಆಳಕ್ಕೆ ಪಿಲ್ಲರ್ ಕೂರಿಸುವಾಗ ಡ್ಯಾಂಗೆ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚು ಒಂದೆಡೆ ನದಿ ನೀರು ಮಲಿನ ಆಗುತ್ತೆ, ವ್ಯಾಪಕ ಮೌಢ್ಯ ಬಿತ್ತುವ, ಕಾರ್ಪೊರೇಟ್ ಕುಳಗಳಿಗೆ ಲಾಭ ತಂದುಕೊಡುವ ಹುನ್ನಾರವಿದೆ ಎಂದು ಖಂಡಿಸಿ ಹೋರಾಟ ನಡೆಸಲಾಯಿತು. ಪೊಲೀಸ್ ರು ನೂರಾರು ಹೋರಾಟಗಾರರನ್ನು ಬಂಧಿಸಿ ಬಿಡುಗಡೆಗೊಳಿಸಿದರು. ಕರ್ನಾಟಕ ರಾಜ್ಯ ರೈತ ಸಂಘ , ರೈತ ಹಿತರಕ್ಷಣಾ ಸಮಿತಿ CITU , ಕನ್ನಡ ಸಂಘಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಇದನ್ನೂ ನೋಡಿ: ಮುಸುಕುಧಾರಿ ಭೀಮ ಆಗಿದ್ದಾಗ ನಿಜ ಹೇಳಿದ, ಚಿನ್ನಯ್ಯ ಆದ ಮೇಲೆ ಸುಳ್ಳು ಹೇಳಿದ – ಎಸ್‌ ಬಾಲನ್‌ Janashakthi Media

Donate Janashakthi Media

Leave a Reply

Your email address will not be published. Required fields are marked *