ದೇವದುರ್ಗ: ತಾಂಡಾದ ಸುಮಾರು 60 ರಿಂದ 80 ಮನೆಗಳಿಗೆ ಇವತ್ತಿಗೂ ರಾತ್ರಿಯಾದರೆ ನೂರೆಂಟು ಸಮಸ್ಯೆಗಳು ಎದುರಾಗಲಿದೆ. ಇಲ್ಲಿನ ಜನರು ಬೆಳಕು ಇಲ್ಲದೆ ಕತ್ತಲಲ್ಲಿ ಬದುಕುತ್ತಿದ್ದಾರೆ. ಇದೆಲ್ಲಕ್ಕಿಂತ ವಿಪರ್ಯಾಸ ಸಂಗತಿಯೆಂದರೆ, ಕಳೆದ 12 ವರ್ಷಗಳಿಂದ ಸಾಕಷ್ಟು ಬಾರಿ ಸರ್ಕಾರಕ್ಕೆ ಸಮಸ್ಯೆಯ ಬಗ್ಗೆ ಗಮನಕ್ಕೆ ತಂದರೂ ಸಹ ಕ್ಯಾರೆ ಎನ್ನುತ್ತಿಲ್ಲ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಬರುವ ಬೂಮಲಗುಂಡ ಆಶ್ರಮ ಶಾಲೆಯಿಂದ ಸೀತಾ ನಾಯಕ್ ತಾಂಡದ ಮಲ್ಲಪೂರ್ ದೊಡ್ಡಿ, ಕಲ್ಮಿಗೇರ ದೊಡ್ಡಿ, ಕಂಬಾರ್ದೊಡ್ಡಿ, ಭಾಗಮದೊಡ್ಡಿ, ಮುಲಗಿನವರದೊಡ್ಡಿ, ಎಸ್‌ಸಿ. ಬೆರಿದೊಡ್ಡಿ ಇನ್ನು ಅನೇಕ ಗ್ರಾಮಸ್ಥರು ಬೆಳಕು ಕಾಣದೇ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ದಿನವೊಂದಕ್ಕೆ ಹಗಲಿನಲ್ಲಿ ಕೇವಲ ಒಂದು ಗಂಟೆ ಮಾತ್ರ ವಿದ್ಯುತ್ ಸಂಪರ್ಕ ಚಾಲ್ತಿಯಾಗುವುದು ಬಿಟ್ಟರೇ ರಾತ್ರಿ ಪೂರ್ತಿ ಕತ್ತಲಲ್ಲೇ ಬದುಕು ದೂಡುತ್ತಿದ್ದಾರೆ.
ಇದನ್ನು ಓದಿ: ರಾಮಸಮುದ್ರದಲ್ಲಿ ಭೀಮ ಸಂದೇಶ ಯಾತ್ರೆಗೆ ಹ.ರಾ.ಮಹೇಶ್ ಚಾಲನೆ
ಚುನಾವಣೆಗಳು ಬಂತು ಅಂತ ಅಂದ್ರೆ ಸಮಸ್ಯೆ ಪರಿಹರಿಸಿಕೊಡುತ್ತೇವೆ ಎಂದು ವರ್ಷಗಳಿಂದ ನೆಪವೊಡ್ಡುತ್ತಿದ್ದಾರೆ ವಿನಃ ಇವತ್ತಿಗೂ ಈ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಆಗೇ ಇಲ್ಲ. ತಾಂಡಾದಲ್ಲಿ ಸಂಪೂರ್ಣ ಕತ್ತಲು ಆವರಿಸಿರುವುದಿರಂದ ಸಾವು ನೋವುಗಳ ಸಹ ಸಂಭವಿಸುತ್ತಾ ಇವೆ. ರಾತ್ರಿಯಾದರೆ ಹಾವು ಚೋಳಿನ ಕಾಟ ಅತಿಯಾಗಿದೆ. ಇತ್ತೀಚಿಗೆ ಹಾವು ಕಡಿತದಿಂದ ಬಾಲಕಿಯೊಬ್ಬಳು ಸಾವಿಗೀಡಾದ ಘಟನೆಯೂ ನಡೆದಿದೆ.
ವಿದ್ಯುತ್ ಸಂಪರ್ಕವನ್ನು ಕಲ್ಪಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ರೂಪಾ ಶ್ರೀನಿವಾಸ್ ನಾಯಕ ಮಾತನಾಡಿ, ಜನರನ್ನು ಕತ್ತಲಲ್ಲಿ ದೂಡಿರುವ ಸರ್ಕಾರದ ಪ್ರತಿನಿಧಿಗಳು ಜನರ ಜೀವದೊಂದಿಗೆ ಆಟ ಆಡವಾಡುತ್ತಿದ್ದಾರೆ. ಸರ್ಕಾರದ ಇಂತಹ ನಡೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿ: ಹಾಸ್ಟೇಲ್ ನರಕ : ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?!
ಇಲ್ಲಿನ ಪ್ರತಿನಿಧಿಗಳಾದ ರಾಜ್ಯ ಆಡಳಿತ ಪಕ್ಷ ಬಿಜೆಪಿ ಪಕ್ಷದವರೇ ಆದ ರಾಯಚೂರು ಸಂಸದ ರಾಜಾ ಅಮರೇಶ್ ನಾಯಕ, ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ ಹಾಗೂ ಬೂಮಲಗುಂಡ ಪಂಚಾಯತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವವರು ತಮ್ಮ ವ್ಯಾಪ್ತಿಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಬದಲಾಗಿ ರಾಜಕಾರಣದಲ್ಲಿ ಮುಳುಗಿ ತಮಗೆ ಬೇಕಾದವರಿಗೆ ಮಾತ್ರ ಅನುಕೂಲತೆಗಳನ್ನು ಮಾಡಿಕೊಡುತ್ತಿದ್ದಾರೆ. ಆದರೆ, ಸೀತಾ ನಾಯಕ್ ತಾಂಡದ ಗ್ರಾಮಸ್ಥರಿಗೆ ಸಮರ್ಪಕ ವಿದ್ಯುತ್ ವ್ಯವಸ್ಥೆ ಕಲ್ಪಿಸದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜನರ ಬಗ್ಗೆ ಯಾಕೆ ಇಂತಹ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಎಂದು ತಿಳಿಯುತ್ತಿಲ್ಲ. ಕರ್ನಾಟಕ ರಾಜ್ಯ ರೈತ ಸಂಘದ ಮೂಲಕ ಸರ್ಕಾರದ ಗಮನಕ್ಕೆ ತಂದು 7 ದಿನ ಕಳೆದರೂ ಸಹ ಯಾರೊಬ್ಬರೂ ಸಂಬಂಧ ಪಟ್ಟ ಅಧಿಕಾರಿಗಳು ಭೆಟಿ ನೀಡಿಲ್ಲ, ಪರಿಶೀಲನೆಗೆ ಒಳಪಡಿಸಿಲ್ಲ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಸರ್ಕಾರದ ಇಂತಹ ಧೋರಣೆ ವಿರುದ್ಧ ಮಲ್ಲಾಪುರ್ ದೊಡ್ಡಿಯಿಂದ ಕಾಲ್ನಡಿಗೆಯಲ್ಲಿ ಭೂಮಲಗುಂಡ ಪಂಚಾಯತಿವರೆಗೆ ಮೆರವಣಿಗೆ ಸಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡೆವು. ವಿದ್ಯುತ್ ಸಮಸ್ಯೆಯನ್ನು 15 ದಿನದಲ್ಲಿ ಬಗೆಹರಿಸದಿದ್ದಲ್ಲಿ ರೈತ ಸಂಘಟನೆ ಕಡೆಯಿಂದ ತಾಲೂಕ ವಿದ್ಯುತ್ ಇಲಾಖೆಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ರೂಪಾ ಶ್ರೀನಿವಾಸ್ ನಾಯಕ ಎಚ್ಚರಿಸಿದ್ದಾರೆ.
ವರದಿ: ಭೀಮನಗೌಡ ಸುಂಕೇಶ್ವರಹಾಳ