ಮುಂಡರಗಿ ಫೆ ೦6: ತಾಲೂಕಿನ ಡೋಣಿ ಗ್ರಾಮದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಡೋಣಿ ಗ್ರಾಮ ಘಟಕದ ನೇತೃತ್ವದಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಿದ ಆಹಾರ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಮಲ್ಲೇಶ ಹೊಸಮನಿ ಕಾರ್ಮಿಕರಿಗೆ ಕಿಟ್ ವಿತರಿಸಿ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಳೇದ ಮಾರ್ಚ 24 ರಂದು ತುರ್ತಾಗಿ ಕೋರೋನಾ ವೈರಸ್ ಮಹಾಮಾರಿ ಹರಡುತ್ತದೆ ಅಂತ ಲಾಕ್ ಡೌನ್ ಘೋಷಿಸಿತು ಈ ವೇಳೆ ಸಾವಿರಾರು ಜನ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ತಲುಪಲಾಗಿದೆ ಪ್ರಾಣ ಕಳೆದುಕೊಂಡರು ಸರ್ಕಾರ ಆಗ ಅವರ ಸಂಕಷ್ಟಕ್ಕೆ ಸಹಕರಿಸಲು ಕೋರೋನಾ ಪರಿಹಾರ ಘೋಷಣೆ ಮಾಡಿತು ಘೋಷಣೆಯಾಗಿ 9 ತಿಂಗಳು ಕಳೆದರೂ ಆ ಪರಿಹಾರ ನಮ್ಮ ತಾಲುಕಿನಲ್ಲಿ %80 ಕಾರ್ಮಿಕರಿಗೆ ತಲುಪಿರುವುದಿಲ್ಲ ಮುಂದಾದರೂ ಸರ್ಕಾರ ಘೋಷಿಸಿದ ಕೋರೋನಾ ಪರಿಹಾರ ನೀಡಬೇಕೆಂದು ಹೇಳಿದರು.
ಸಿಐಟಿಯು ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ ಮಾತನಾಡಿ ಮುಂಡರಗಿ ತಾಲೂಕಿನಲ್ಲಿ ಸುಮಾರು 4600 ಜನ ನೊಂದಾಯಿತ ಕಟ್ಟಡ ಕಾರ್ಮಿಕರು ಇದ್ದು ಕಲ್ಯಾಣಿ ಮಂಡಳಿಯಿಂದ ಕೇವಲ 1000 ಆಹಾರ ಕಿಟ್ಟಗಳು ಬಂದಿದ್ದು ಇವುಗಳನ್ನು 4600 ಜನ ಕಟ್ಟಡ ಕಾರ್ಮಿಕರಿಗೆ ವಿತರಣೆ ಮಾಡುವುದು ಹೇಗೆ? ಸರ್ಕಾರ ನೊಂದಾಯಿತ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಸಮರ್ಪಕವಾಗಿ ಕೊರೋನಾ ಸಂಕಷ್ಟದ ಪರಿಹಾರ ಆಹಾರದ ಕಿಟ್ ಗಳನ್ನು ನೀಡಬೇಕೆಂದು ಆಗ್ರಹಿಸಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಡೋಣಿ ಗ್ರಾಮ ಘಟಕದ ಅಧ್ಯಕ್ಷ ಮುತ್ತಪ್ಪ ಚಲವಾದಿ ಅಧ್ಯಕ್ಷತೆ ವಹಿಸಿದ್ದರು ಗ್ರಾಮ ಪಂಚಾಯತ ಅಧ್ಯಕ್ಷ ಪ್ರಕಾಶ ಓಲಿ ಉಪಾಧ್ಯಕ್ಷೆ ಹುಲಿಗೆಮ್ಮ ಅಳವಂಡಿ, ಗ್ರಾಮಪಂಚಾಯತ ಸದಸ್ಯರಾದ ಭರಮಗೌಡ ಪಾಟಿಲ ರತ್ನವ್ವ ನಾಗಪ್ಪ ವಡ್ಡರ ಕಾರ್ಮಿಕರ ಮುಖಂಡರಾದ ಫಕೀರಪ್ಪ ವಡ್ಡರ ಲಕ್ಷ್ಮಣ್ಣ ಗಂಗಮ್ಮನವರ ಗ್ರಾಮಘಟಕದ ಪ್ರಧಾನಕಾರ್ಯದರ್ಶಿ ಲಕ್ಷ್ಮಣ ಭೋವಿ ವಡ್ಡರ, ಸಹಕಾರ್ಯದರ್ಶಿ ಮಂಜು ಚಲವಾದಿ ದೇವಪ್ಪ ಎಲಿಬೆಳ್ಳಿ, ಲಕ್ಷ್ಮಣ ಬಂಡಿವಡ್ಡರ ಉಪಸ್ಥಿತರಿದ್ದರು.
ವರದಿ: ದಾವಲಸಾಬ ತಾಳಿಕೋಟಿ