ಕಟ್ಟಡ ಕಾರ್ಮಿಕರ ಎರಡನೇ ದಿನದ ಹೋರಾಟ: ರಾಜ್ಯದ ಹಲವೆಡೆ ಪ್ರತಿಭಟನೆ

ಬೆಂಗಳೂರು: ಕರ್ನಾಟಕ ರಾಜ್ಯ ಕಟ್ಟಡ ‌ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ನೇತೃತ್ವದಲ್ಲಿ ಇಂದು ಕೂಡ ಅಖಿಲ ಭಾರತ ಮುಷ್ಕರದ ಅಂಗವಾಗಿ ರಾಜ್ಯದಾದ್ಯಂತ ನಿರ್ಮಾಣ ಕಾರ್ಮಿಕರು ಪ್ರತಿಭಟನೆಗಳನ್ನು ನಡೆಸಿದರು. ಎರಡನೇ ದಿನದ ಹೋರಾಟದಲ್ಲಿ ರಾಜ್ಯದಲ್ಲಿ ಸಾವಿರಾರು ಕಾರ್ಮಿಕರು ಭಾಗವಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸುವ ಮೂಲಕ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ ‌ನೀತಿಗಳನ್ನು ಬಯಲುಗೊಳಿಸಿದ್ದಾರೆ.

ಕೋವಿಡ್ ಮತ್ತು ಕೋವಿಡೋತ್ತರ ಕಾಲಾವಧಿಯಲ್ಲಿ ಕಾರ್ಮಿಕರಿಗೆ ನೆರವು ನೀಡುವ ನೆಪದಲ್ಲಿ ನೂರಾರು ‌ಕೋಟಿ ಹಣ ಲೂಟಿ ಮಾಡಿರುವ ಕಾರ್ಮಿಕ ಸಚಿವರ, ಅಧಿಕಾರಿಗಳ ಭ್ರಷ್ಟತೆಯ ವಿರುದ್ಧ ತಮ್ಮ ಧ್ವನಿಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ನಿರ್ಮಾಣ ಸಾಮಗ್ರಿ ಬೆಲೆ ಏರಿಕೆ ವಿರುದ್ಧ-ಕಾನೂನುಗಳ ಉಳಿವಿಗಾಗಿ ರಾಜ್ಯದ್ಯಾಂತ ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ

1996 ಕಟ್ಟಡ ಕಾರ್ಮಿಕ ಕಾನೂನು, ಸೆಸ್‌ ಕಾನೂನು ಹಾಗೂ ಅಂತರಾಜ್ಯ ವಲಸೆ ಕಾರ್ಮಿಕ ಕಾನೂನು1979. ಉಳಿಯಬೇಕು.‌ಕಟ್ಟಡ ಸಾಮಾಗ್ರಿಗಳ ಮೇಲೆ ವಿಧಿಲಾಗುವ ಜಿ.ಎಸ್.ಟಿ.‌‌ ರದ್ದು ಮಾಡಬೇಕು ತೈಲೋತ್ಪನ್ನಗಳ ಬೆಲೆ ನಿಯಂತ್ರಿಸಬೇಕು ಹಾಗೂ ಕೋವಿಡ್‌ ಸಮಯದಲ್ಲಿ ಆಗಿರುವ‌ ಮಂಡಳಿಯ ಎಲ್ಲ ಖರೀದಿಗಳು ತನಿಖೆಯಾಗಬೇಕು ಹಾಗೂ ಮಂಡಳಿ ಘೋಷಿಸಿರುವ ‌ಎಲ್ಲ ಸೌಲಭ್ಯಗಳನ್ನು ‌ಸಮರ್ಪಕವಾಗಿ ಜಾರಿಗೊಳಿಸಬೇಕು ಎನ್ನುವ ಬೇಡಿಕೆಗಳಿಗಾಗಿ ಎರಡು ದಿನಗಳ ನಿರ್ಮಾಣ ಕಾರ್ಮಿಕರ ಮುಷ್ಕರಕ್ಕೆ ಕರೆ ನೀಡಿದ್ದರು.

ಬೆಂಗಳೂರಿನ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಮುಂದೆ ಬೆಂಗಳೂರು ದಕ್ಷಿಣ ಮತ್ತು ಉತ್ತರ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿ ಮಂಡಳಿಯ ಕಾರ್ಯದರ್ಶಿ ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಮಂಡಳಿ ಜಂಟಿ ಕಾರ್ಯದರ್ಶಿ ಡಾ ಶಿವಪುತ್ರ ಬಾಬುರಾವ್, ಹಿರಿಯ ಅಧಿಕಾರಿಗಳಾದ ಜಾನ್ ಸನ್, ಆಂಜಿನಪ್ಪ ಉಪಸ್ಥಿತರಿದ್ದರು. ಸಂಘಟನೆ ಮುಖಂಡರಾದ ರಾಜ್ಯ ಅಧ್ಯಕ್ಷ ಎನ್‌.ವೀರಸ್ವಾಮಿ, ದಕ್ಷಿಣ‌ ಜಿಲ್ಲಾ ಅಧ್ಯಕ್ಷ ಕೆ.ಎಲ್ ಲಕ್ಷ್ಮೀ, ಕಾರ್ಯದರ್ಶಿ ಲಿಂಗರಾಜ್, ಉತ್ತರ ಜಿಲ್ಲಾ ಕಾರ್ಯದರ್ಶಿ ಹರೀಶ ಕುಮಾರ್, ಖಜಾಂಚಿ ಹನುಮಂತ ರಾವ್ ಹವಾಲ್ದಾರ್, ಉಪಾಧ್ಯಕ್ಷ ರಮೇಶ್ ಮೊದಲಾದವರಿದ್ದರು.

ಕಲುಬರಗಿ ಜಿಲ್ಲಾಧಿಕಾರಿಗಳ ಕಚೇರಿ ಎಂದು ನಿರ್ಮಾಣ ಕಾರ್ಮಿಕರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಚ ಶ್ರೀಮಂತ ಬಿರಾದಾರ, ಪ್ರಧಾನ ಕಾರ್ಯದರ್ಶಿ ನಾಗಯ್ಯಸ್ವಾಮಿ, ಜಂಟಿ ಕಾರ್ಯದರ್ಶಿ ಹನುಮಂತ ಪೂಜಾರಿ, ಯಶವಂತ ಪಾಟೀಲ ಬಾಬು ಹೊನ್ನಳ್ಳಿ ಭಾಗವಹಿಸಿದ್ದರು.

ಇದನ್ನು ಓದಿ: ಡಿ. 2-3ರಂದು ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರ ದೇಶವ್ಯಾಪಿ ಮುಷ್ಕರ

ವಿಜಯನಗರ ಜಿಲ್ಲಾಧಿಕಾರಿಗಳ ಚಲೋ  ಹೋರಾಟದಲ್ಲಿ ನೂರಾರು ಕಾರ್ಮಿಕರು ಭಾಗವಹಿಸಿ ಕಾರ್ಮಿಕ ನಿರೀಕ್ಷಕ  ಭೂಪಾಲ್ ಅವರಿಗೆ ಮನವಿ ಸಲ್ಲಿಸಿದರು. ‌ಜಿಲ್ಲಾಧ್ತಕ್ಷ ಯಲ್ಲಾಲಿಂಗ, ತಾಲೂಕು ಅಧ್ಯಕ್ಷ ಗೋಪಾಲ್, ಕಾರ್ಯದರ್ಶಿ ರಾಮಾಂಜಿ ದಲಿತ ಹಕ್ಕುಗಳ‌ಸಮಿತಿಯ ನಾಯಕ ಜಂಭಯ್ಯ ನಾಯಕ, ಡಿವೈಎಫ್‌ಐ ನಾಯಕ ರಮೇಶ್, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್  ಮೊದಲಾದವರು ಮಾತನಾಡಿದರು.

ಕೊಪ್ಪಳ ಜಿಲ್ಲೆಯಲ್ಲಿ ನೂರಾರು ಕಾರ್ಮಿಕರು ಜಿಲ್ಲಾಧಿಕಾರಿಗಳ ಮನವಿ ಸಲ್ಲಿಸಿದರು ರಾಜ್ಯ ಸಹ ಕಾರ್ಯದರ್ಶಿ ಕಾಶಿಂಸಾಬ್ ಸರ್ಧಾರ್ ಸೇರಿ ಹಲವಾರು ಭಾಗವಹಿಸಿದ್ದರು.

ರಾಯಚೂರು ಜಿಲ್ಲೆ ಸಿಂಧನೂರು, ದಾವಣಗೆರೆ ‌ಉತ್ತರ ‌ಕನ್ನಡ ಜಿಲ್ಲೆ ಹಳಿಯಾಳ, ಅಂಕೋಲ ಉಡುಪಿಯ ಬ್ರಹ್ಮಾವರ, ಸೇರಿ ಹಲವಾರು ಕಡೆ ನೂರಾರು ಕಾರ್ಮಿಕರಿಗೆ ‌ಪ್ರತಿಭಟನೆ ನಡೆಸಿದ್ದಾರೆ. ಎರಡು ದಿನಗಳ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲ ಕಾರ್ಮಿಕರಿಗೂ ಸಿಐಟಿಯು ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ರಾಜ್ಯ ಸಮಿತಿಯು ಅಭಿನಂದನೆ ಸಲ್ಲಿಸಿದ್ದು, ಮುಂಬರುವ ದಿನಗಳಲ್ಲಿ ನಡೆಯಲಿರುವ ಹೋರಾಟಗಳನ್ನು ಯಶಸ್ವಿಗೊಳಿಸಿ, ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *