ಕಸವು ಕಸದ ತೊಟ್ಟಿಗೇ ಹೋಗಿದೆ’ – ರೋಹಿಣಿ ಆಚಾರ್ಯ

ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ರ ಪುತ್ರಿ ರೋಹಿಣಿ ಆಚಾರ್ಯ, ‘ಕಸವು ಕಸದ ತೊಟ್ಟಿಗೇ ಹೋಗಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಈ ಮೂಲಕ ನಿತೀಶ್‌ ಹಾಗೂ ಬಿಜೆಪಿಯನ್ನು ಕಸ ಹಾಗೂ ಕಸದ ತೊಟ್ಟಿಗೆ ಹೋಲಿಸಿದ್ದಾರೆ. ಕಸವು

ಈ ಕುರಿತು ಟ್ವೀಟ್‌ ಮಾಡಿರುವ ರೋಹಿಣಿ, ಮೋದಿ ಮತ್ತು ನಿತೀಶ್‌ ಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತ್ತೊಂದೆಡೆ, ‘2024ರ ಅಂತ್ಯದ ವೇಳೆಗೆ ಜೆಡಿಯು ಸಂಪೂರ್ಣ ನಿರ್ನಾಮವಾಗಲಿದೆ’ ಎಂದು ಲಾಲೂ ಕಿರಿಯ ಪುತ್ರ, ನಿರ್ಗಮಿತ ಡಿಸಿಎಂ ತೇಜಸ್ವಿ ಯಾದವ್‌ ಭವಿಷ್ಯ ನುಡಿದಿದ್ದಾರೆ. ನಿತೀಶ್‌ಗೆ ‘ಊಸರವಳ್ಳಿ ರತ್ನ’ ಕೊಡಬೇಕು ಎಂದು ಲಾಲೂ ಹಿರಿಮಗ, ನಿರ್ಗಮಿತ ಸಚಿವ ತೇಜ್‌ ಪ್ರತಾಪ್‌ ಯಾದವ್‌ ಹೇಳಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ್ದು,  ‘ನಿತೀಶ್‌ ಕುಮಾರ್‌ ಇಂಡಿಯಾ ಮೈತ್ರಿಕೂಟ ಬಿಡುವ ಬಗ್ಗೆ ನನಗೆ ಲಾಲೂ ಮತ್ತು ತೇಜಸ್ವಿ ಮೊದಲೇ ಮಾಹಿತಿ ನೀಡಿದ್ದರು. ಅದೀಗ ನಿಜವಾಗಿದೆ. ನಾವು ಮೈತ್ರಿಕೂಟವನ್ನು ಕಾಪಾಡುವ ನಿಟ್ಟಿನಲ್ಲಿ ಮೊದಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಲಿರಲ್ಲ’ ಎಂದರು. ಕಸವು

ಇದನ್ನೂ ಓದಿಬಿಹಾರದಲ್ಲಿ ಜೆಡಿಯು-ಬಿಜೆಪಿ ಹೊಸ ಸರ್ಕಾರ ಅಸ್ತಿತ್ವಕ್ಕೆ : ಸಿಎಂ ಆಗಿ ‘ನಿತೀಶ್ ಕುಮಾರ್’ ಪ್ರಮಾಣ ವಚನ ಸ್ವೀಕಾರ

ಪದೇ ಪದೇ ಬಣ್ಣ ಬದಲಾಯಿಸುವ ಮೂಲಕ ನಿತೀಶ್‌ ಕುಮಾರ್‌ ಗೋಸುಂಬೆಗಳಿಗೆ ತೀವ್ರ ಸ್ಪರ್ಧೆ ನೀಡಿದ್ದಾರೆ. ದ್ರೋಹದ ತಜ್ಞನನ್ನು ಮತ್ತು ಅವರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿರುವವರನ್ನು ಬಿಹಾರದ ಜನತೆ ಎಂದಿಗೂ ಕ್ಷಮಿಸಲಾರರು. ರಾಹುಲ್‌ ಗಾಂಧಿ ಅವರ ಭಾರತ್‌ ನ್ಯಾಯ್‌ ಜೋಡೋ ಯಾತ್ರೆಯ ಕಡೆಗಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಇಂಥ ಯತ್ನ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಜೈರಾಂ ರಮೇಶ್‌ ಟೀಕಿಸಿದ್ದಾರೆ.

ನಿತೀಶ್‌ ಕುಮಾರ್‌ ಅವರಂಥ ಅವಕಾಶವಾದಿಗಳಿಗೆ ರಾಜ್ಯದ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ. ನಿತೀಶ್‌ ಮತ್ತೆ ರಾಜಕೀಯ ಪಲ್ಟಿ ಹೊಡೆದಿದ್ದಾರೆ ಎಂದು ಟಿಎಂಸಿ ಸಂಸದ ಸೌಗತಾ ರಾಯ್‌ ಟೀಕಿಸಿದ್ದಾರೆ. ಕಸವು

ಈ ವಿಡಿಯೋ ನೋಡಿ : ಗಣತಂತ್ರ 75| ಸಂವಿಧಾನ ನೀಡಿದ ಸಮಾನತೆ – ದಕ್ಕಿರುವುದೆಷ್ಟು- ಮಿಕ್ಕಿರುವುದೆಷ್ಟು ವಿಶ್ಲೇಷಣೆ : ಮೀನಾಕ್ಷಿ ಬಾಳಿ

 

 

 

Donate Janashakthi Media

Leave a Reply

Your email address will not be published. Required fields are marked *