ಕಾರವಾರ|ಡಾ. ವಿಠ್ಠಲ ಭಂಡಾರಿ ನೆನಪಿನ ಉಪನ್ಯಾಸ ಕಾರ್ಯಕ್ರಮ

ಕಾರವಾರ: ಡಾ. ವಿಠ್ಠಲ ಭಂಡಾರಿ ನೆನಪಿನ ಉಪನ್ಯಾಸ  ಕಾರ್ಯಕ್ರಮವು ದಿ.19-11-2023, ಬೆಳಿಗ್ಗೆ 10.30 ಕ್ಕೆ ಕಾರವಾರ ರಾಬಿಯಾ ಪ್ಲಾಜಾ಼ದಲ್ಲಿ ನಡೆಯಲಿದೆ.

ನಾಡಿನ ಜನರ ಗಮನಸೆಳೆಯುತ್ತಿರುವ ಸಮಕಾಲೀನ ಪ್ರಮುಖ ವಿಚಾರವಾದಬಿಕ್ಕಟ್ಟಿನಲ್ಲಿ ಪ್ರಜಾಪ್ರಭುತ್ವ; ಜನಚಳುವಳಿಗಳ ಪಾತ್ರಕುರಿತು ಖ್ಯಾತ ಚಿಂತಕ ಪ್ರೊ. ರಾಜೇಂದ್ರ ಚೆನ್ನಿಯವರು ಡಾ. ವಿಠ್ಠಲ ಭಂಡಾರಿಯವರ ನೆನಪಿನ ಎರಡನೇ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡಲಿದ್ದಾರೆ.

ಇಡೀ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ವಿಮರ್ಶಕರಾದ ಡಾ. ಎಂಜಿ ಹೆಗಡೆ ವಹಿಸಲಿದ್ದಾರೆ. ಬಾರಿಯಿಂದಪ್ರೀತಿಪದ ಸಮ್ಮಾನಪ್ರಾರಂಭಿಸಲಾಗುತ್ತಿದೆ. ಮುಖ್ಯ ಸಮ್ಮಾನವನ್ನು, ಪ್ರೀತಿಪದಗಳ ಪಯಣದ ಒಡನಾಡಿ, ಸಂವಿಧಾನ ಓದು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ, ದಮನಿತ ತಳಸಮುದಾಯದ ಧ್ವನಿಯಾಗಿಯೂ ಜನಚಳುವಳಿಗಳ ಜೊತೆಗಾರರೂ ಆಗಿರುವ ನಿವೃತ್ತ ಪ್ರಾಚರ್ಯರಾದ ಜಿ.ಡಿ. ಮನೋಜೆಯವರಿಗೆ ನೀಡಲಾಗುತಿದೆ ಎಂದು ಪ್ರೀತಿಪದದ ಬಿ.ಎನ್. ವಾಸರೆ, ಯಮುನಾ ಗಾಂವ್ಕರ್‌ರವರು ತಿಳಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣ | ಆಡಳಿತರೂಢ ಬಿಆರ್‌ಎಸ್ ಶಾಸಕನ ನಿವಾಸದ ಮೇಲೆ ಐಟಿ ದಾಳಿ

ಪ್ರೀತಿಪದ ವಿದ್ಯಾರ್ಥಿ ಸಮ್ಮಾನವನ್ನು ವಿವಿಧ ವಿಷಯ ಓದುತ್ತಿರುವ ಎಂಟು ವಿದ್ಯಾರ್ಥಿಗಳಿಗೆ ನೀಡಲಾಗುವುದು. ಕಾರ್ಯಕ್ರಮದಲ್ಲಿ ಪ್ರೀತಿಪದ ಜಾಲತಾಣಕ್ಕೆ ಚಾಲನೆ, ಪುಸ್ತಕ ಬಿಡುಗಡೆ, ಶ್ರಮಜೀವಿ ಸಾಂಸ್ಕೃತಿಕ ಅಭಿವ್ಯಕ್ತಿ ನಡೆಯಲಿದೆ ಎಂದು ಸಂಘಟಿಕರು ತಿಳಿಸಿದ್ದಾರೆ.   

ವಿಡಿಯೋ ನೋಡಿ: ಮಾನವೀಯತೆ ಜಾಗಕ್ಕೆ ಮತೀಯತೆ ಬಂದಿದೆ – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *