ಕರ್ನಾಟಕದಲ್ಲೂ ಜನಸಂಖ್ಯಾ ನೀತಿ ಜಾರಿಗೆ ಚಿಂತನೆ: ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು: ಜನಸಂಖ್ಯೆ ನಿಯಂತ್ರಣಕ್ಕಾಗಿ ಉತ್ತರಪ್ರದೇಶ ಮತ್ತು ಅಸ್ಸಾಂ ರಾಜ್ಯಗಳ ಮಾದರಿಯಲ್ಲೇ ಕರ್ನಾಟಕದಲ್ಲೂ ಹೊಸ ನೀತಿ ಅಳವಡಿಸಿಕೊಳ್ಳಲು ಬಗ್ಗೆ ಆಳವಾಗಿ ಮತ್ತು ವಿಸ್ತೃತವಾಗಿ ಚರ್ಚಿಸಿದ ಬಳಿಕ ನಿರ್ಧರಿಸಲಾಗುವುದು ಎಂದು ರಾಜ್ಯ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದೊಂದು ನಿಯಮ ರೂಪಿಸುವ ವಿಷಯವಾಗಿದೆ. ಇದರ ಬಗೆಗಿನ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಡೇಟಾವನ್ನು ಪರಿಶೀಲಿಸಬೇಕಾಗಿದೆ. ಅಗತ್ಯವಿದ್ದರೆ, ತಜ್ಞರೊಂದಿಗೆ ಸಮಾಲೋಚಿಸಿ, ಅಂತಹ ನಿರ್ದಿಷ್ಠ ನೀತಿಯನ್ನು ರೂಪಿಸಬೇಕಾಗಬಹುದು. ವಾಸ್ತವವಾಗಿ, ಇದು ತಜ್ಞರೊಂದಿಗೆ ಚರ್ಚಿಸಿದ ನಂತರ ಮತ್ತು ಅಧ್ಯಯನದ ನಂತರ ಅವಲಂಬಿಸಲಿದೆ. ನಾವು ಮುಂದಿನ ಹಂತದ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಉತ್ತರಪ್ರದೇಶ ಮತ್ತು ಆಸ್ಸಾಂ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ನೀತಿ ಜಾರಿಗೆ ತರಲಾಗುತ್ತಿದ್ದು ರಾಜ್ಯದಲ್ಲಿಯೂ ಜಾರಿಗೆ ತರುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕರೂ ಆಗಿರುವ ಸಿ.ಟಿ.ರವಿ ಟ್ವೀಟ್‌ ಮಾಡಿದ್ದರು. ಜನಸಂಖ್ಯೆ ಸ್ಫೋಟವಾದರೆ ಸೀಮಿತ ನೈಸರ್ಗಿಕ ಸಂಪತ್ತಿನಲ್ಲಿ ಪ್ರತಿಯೊಬ್ಬ ನಾಗರಿಕನ ಅಗತ್ಯಗಳನ್ನೂ ಪೂರೈಸುವುದು ತುಂಬ ಕಷ್ಟವಾಗುತ್ತದೆ. ಇದು ಅತ್ಯಂತ ಸೂಕ್ತ ಕಾಲ ಎಂದು ಪ್ರಕಟಿಸಿದ್ದರು.

ಇದನ್ನು ಓದಿ: ಮೂರನೇ ಅಲೆ ಸನ್ನಿಹಿತ : ಜಾಗೃತೆ ತಪ್ಪಿದರೆ ಅಪಾಯ ತಪ್ಪಿದ್ದಲ್ಲ – ಐಎಂಎ ಎಚ್ಚರಿಕೆ

ಕರ್ನಾಟಕ ಆರ್ಥಿಕ ಸಮೀಕ್ಷೆ 2020-21ರ ಪ್ರಕಾರ, ರಾಜ್ಯದ ಒಟ್ಟು ಫಲವತ್ತತೆ ದರ (ಟಿಎಫ್‌ಆರ್) – ಜನಸಂಖ್ಯೆಯ ನಿಯಂತ್ರಣವನ್ನು ಅಳೆಯುವ ಮಾಪನ – 2020 ರಲ್ಲಿ 1.7 ರಷ್ಟಿತ್ತು. 2025 ರ ವೇಳೆಗೆ ರಾಷ್ಟ್ರೀಯ ಗುರಿ 2.1ಕ್ಕೆ ನಿಗದಿಪಡಿಸಲಾಗಿದೆ, ಕರ್ನಾಟಕದ ಟಿಎಫ್‌ಆರ್ 1999 ರಲ್ಲಿ 2.5 ರಿಂದ 2020 ರಲ್ಲಿ 1.7ಕ್ಕೆ ಸ್ಥಿರ ಕುಸಿತ ಕಂಡಿದೆ. ಇದು ಕೇವಲ ಟಿಎಫ್‌ಆರ್ ಬಗ್ಗೆ ಮಾತ್ರವಲ್ಲ, ಜನನ ನಿಯಂತ್ರಣ ಪದ್ಧತಿ ಅಳವಡಿಸಿಕೊಂಡಾಗಲೂ ಕರ್ನಾಟಕವು ಉತ್ತಮವಾಗಿ ಕಾರ್ಯನಿರ್ವಹಿಸುವ ರಾಜ್ಯವಾಗಿದೆ.

2020-21ರ ಅವಧಿಯಲ್ಲಿ ನವೆಂಬರ್‌ವರೆಗೆ, ಒಟ್ಟು ಸಂತಾನಹರಣ 1,02,227 ಮತ್ತು ಐಯುಡಿ (ಗರ್ಭಾಶಯದ ಸಾಧನ)ಅಳವಡಿಕೆ 1,33,412 ಆಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆರ್ಥಿಕ ಸಮೀಕ್ಷೆಯಲ್ಲಿ ಹೇಳುತ್ತದೆ. 1,000 ಜನಸಂಖ್ಯೆಗೆ ಕರ್ನಾಟಕದ ಜನನ ಪ್ರಮಾಣವು 2019 ರಲ್ಲಿ 14.51 ಆಗಿತ್ತು. 2015 ಮತ್ತು 2016 ರ ನಡುವೆ 1.8 ರಷ್ಟಿದ್ದ ಟಿಎಫ್‌ಆರ್ 2019 ಮತ್ತು 2011 ರ ನಡುವೆ 1.7 ಕ್ಕೆ ಇಳಿದಿದೆ ಎಂದು ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *