- ಸ್ವಪಕ್ಷದ ನಡೆಯನ್ನು ಕುಟುಕಿದ ಹಳ್ಳಿಹಕ್ಕಿ
- ರೋಹಿತ್ ಚಕ್ರವರ್ತಿ ಪ್ರಾಧ್ಯಾಪಕ ಅಲ್ಲ. ಒಬ್ಬ ಖಾಸಗಿ ತರಬೇತುದಾರ
ಮೈಸೂರು: “ಏನ್ರೀ ಇದು ಒಬ್ಬ ಪ್ರೈವೇಟ್ ಕೋಚಿಂಗ್ ಸೆಂಟರ್ ನಡೆಸ್ತಿರೋನಿಗೆ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಮಾಡಿದ್ದಾರೆ..ಬುದ್ದಿ ಏನಾದ್ರೂ ಇದೇಯಾ ಸರ್ಕಾರಕ್ಕೆ? ಸುರೇಶ್ ಕುಮಾರ್ ಮಾಡಿ ಹೋಗಿದ್ದಂತೆ ಇದು..ನೋಡಿ ಮಾತನಾಡುತ್ತಿಲ್ಲ ಮನುಷ್ಯಾ ಇವತ್ತು..” ಹೀಗೆ ಸುರೇಶ್ ಕುಮಾರ್, ಬಿಜೆಪಿ ಸರ್ಕಾರ ಹಾಗೂ ರೋಹಿತ್ ಚಕ್ರತೀರ್ಥ ವಿರುದ್ಧ ಸ್ವತಃ ಬಿಜೆಪಿ ಎಂಎಲ್‌ಸಿ ಎಚ್ . ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ 9 ಜನ ಇದ್ದಾರೆ. ಯಾರು ಇವರು? ಇವರ ಶೈಕ್ಷಣಿಕಗಳ ಹಿನ್ನೆಲೆ ಏನು? ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರಾ? ಟೀಚರ್ ಆಗಿ ಕೆಲಸ ಮಾಡಿದ್ದೀರಾ? ಪೋಷಕರ ಆಗಿ ಕೆಲಸ ಮಾಡಿದ್ದೀರಾ? ಯಾರೀ ಇವ್ರು..? ಅದರಲ್ಲೂ 9 ಜನಗಳಲ್ಲಿ 8 ಜನರು ಒಂದೇ ಜಾತಿಗೆ ಸೇರಿದವರು .. ಎಲ್ಲದ್ರು ಉಂಟೆನ್ರೀ..? ಎಂದು ಖಾರವಾಗಿ ಪ್ರಶ್ನಿಸಿದರು.
ಇನ್ನು ಆ ಕಮಿಟಿಯಲ್ಲಿ ಎಲ್ಲರೂ ಇರಬೇಕು. ಹಿಂದೂಗಳು, ಮುಸ್ಲಿಂ , ಕ್ರಿಶ್ಚಿಯನ್ನರು, ಹಿಂದುಳಿದ ವರ್ಗದವರು, ದಲಿತರು ಎಲ್ಲರೂ ಈ ಕಮಿಟಿಯಲ್ಲಿರಬೇಕು. ಆದರೆ ಈಗ ಯಾರೀದಾರೆ ಎಂದು ಪ್ರಶ್ನಿಸಿದರು. ಹೀಗಾಗಿ ಈ ವರ್ಷ ಹಳೆಯ ಪಠ್ಯ ಕ್ರಮವನ್ನೇ ಮುಂದುವರಿಸಬೇಕು. ಹೀಗಾಗಲೇ ಮುದ್ರಣವಾಗಿ ವಿತರಣೆಯಾಗಿದ್ದರೂ ಅದನ್ನು ವಾಪಸ್ ಪಡೆಯಬೇಕು. ಇದರಿಂದ ಸರಕಾರಕ್ಕೆ ನಷ್ಟವಾದರೂ ಪರವಾಗಿಲ್ಲ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ : ನನ್ನ ಪಾಠ ಕೈ ಬಿಡಿ – ಜಿ. ರಾಮಕೃಷ್ಣ ಆಗ್ರಹ
ಕಳೆದ ಬಾರಿಯ ಪಠ್ಯಕ್ರಮವನ್ನೇ ಮುಂಬರುವ ಶೈಕ್ಷಣಿಕ ವರ್ಷಕ್ಕೂ ಮುಂದುವರಿಸಬೇಕು. ಮುಂಬರುವ ಶೈಕ್ಷಣಿಕ ವರ್ಷಕ್ಕೆ ಸರ್ವರೂ ಒಪ್ಪುವ ಪಠ್ಯಕ್ರಮವನ್ನು ಜಾರಿಗೆ ತರಬೇಕು. ವಿವಿಧ ವಲಯಗಳ ತಜ್ಞರು, ಪೋಷಕರನ್ನು ಒಳಗೊಂಡ ಸಮಿತಿ ರಚಿಸಿ ನೂತನ ಪಠ್ಯ ಕ್ರಮವನ್ನು ಅಳವಡಿಸಬೇಕು ಎಂದು ಎಚ್ ವಿಶ್ವನಾಥ್ ಹೇಳಿದರು.
‘ದುರ್ಯೋಧನ, ದುಶ್ಯಾಸನರಂತಹವರಿಗೆ ಪಾಠ ಕಲಿಸಲೆಂದು ನಾವು ವಿವಿಧ ಪಕ್ಷಗಳಿಂದ ಹೊರ ಬಂದೆವು. ಈಗ ಜನರು ತಪ್ಪು ಮಾಡಿದಿರಿ ಎನ್ನುತ್ತಿದ್ದಾರೆ. ಇದು ಪಶ್ಚಾತ್ತಾಪವೋ, ತಾಪವೋ ಎಂಬುದು ಮುಂದೆ ಗೊತ್ತಾಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.