ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ 2022-23 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ. ಯಾವೆಲ್ಲಾ ಕ್ಷೇತ್ರಕ್ಕೆ ಮೊದಲ ಬಜೆಟ್ ಬಜೆಟ್ನಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಆದ್ಯತೆ ಯನ್ನು ನೀಡಿದೆ ಎಂಬದರ ಬಗ್ಗೆ ವಿವರಗಳು ಹೀಗಿವೆ.
ಮುಂಬರುವ ಚುನಾವಣೆ, ಕೋವಿಡ್ ಸಾಂಕ್ರಾಮಿಕತೆಯಿಂದಾಗಿ ಹದಗೆಟ್ಟ ಆರ್ಥಿಕ ಪರಿಸ್ಥಿತಿ ಯನ್ನು ಗಮನದಲ್ಲಿರಿಸಿ ಈ ಬಾರಿಯ ಬಜೆಟ್ ಮಂಡನೆಯಾಗುತ್ತಿದೆ. ರಾಜ್ಯ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅದರಂತೆ, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಕೋಟಿ ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಿಲಾಗಿದೆ.
ಕೃಷ್ಣಾ, ಕಾವೇರಿ, ಮಹದಾಯಿ, ಗೋದಾವರಿ, ಭದ್ರಾ ಮೇಲ್ದಂಡೆ ಜಲಾನಯನ ಪ್ರದೇಶಗಳು, ಪಾಲಾರ್ ಮತ್ತು ಪೆನ್ನಾರ್ ಉಪ ಜಲಾನಯನ ಪ್ರದೇಶಗಳು, ಎತ್ತಿನಹೊಳೆ ಯೋಜನೆ ಮತ್ತು ನದಿಗಳ ಜೋಡಣೆಯಲ್ಲಿ ಸರ್ಕಾರದ ಆದ್ಯತೆಯಿಂದ ಕ್ರಮಕೈಗೊಳ್ಳುತ್ತದೆ ಎಂಬ ಭರವಸೆಯನ್ನು ಬಜೆಟ್ ಮೂಲಕ ತಿಳಿಸಿದ್ದಾರೆ.
ಯಾವ ಯೋಜನೆಗೆ ಎಷ್ಟು ಅನುದಾನ…?
- ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಂತ-3… 5,000 ಕೋಟಿ ರೂಪಾಯಿ ಅನುದಾನ
- ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗೆ 1000 ಕೋಟಿ ರೂಪಾಯಿ ಅನುದಾನ
- ಭದ್ರಾ ಮೇಲ್ದಂಡೆ ಯೋಜನೆಗೆ 3,000 ಕೋಟಿ ರೂಪಾಯಿ ಅನುದಾನ
- ಮೇಕದಾಟು ಯೋಜನೆ 3,000 ಕೋಟಿ ರೂಪಾಯಿ ಅನುದಾನ
- ತುಂಗಭದ್ರಾ ಜಲಾಶಯ ನೀರು ಸಂಗ್ರಹಣೆ ಕೊರತೆ ಸರಿದೂಗಿಸಲು ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ 1,000 ಸಾವಿರ ಕೋಟಿ ರೂಪಾಯಿ ಅನುದಾನ
- ಕೇಂದ್ರ ಸರ್ಕಾರದ ಪಿಎಂಕೆಎಸ್‌ವೈ_ಎಐಬಿಪಿ ಅಡಿಯಲ್ಲಿ ಸನ್ನತಿ ಏತ ನೀರಾವರಿ ಯೋಜನೆ ಹಾಗೂ ಕೃಷ್ಣಾ ಮೇಲ್ದೆಂಡೆ ಯೋಜನೆ ಹಂತ-1 ಮತ್ತು 2ರಲ್ಲಿ ಬೂದಿಹಾಳ ಪೀರಾಪುರ, ನಂದವಾಡಗಿ, ನಾರಾಯಣಪುರ ಬಲದಂಡೆ (9ಎ)ಕಾಲುವೆ ವಿಸ್ತರಣೆ ಯೋಜನೆ ಅನುಷ್ಠಾನಕ್ಕೆ ಕ್ರಮ.
- ಪ್ರಗತಿಯಲ್ಲಿರುವ 14 ನೀರಾವರಿ ಯೋಜನೆ ಪೂರ್ಣಗೊಳಿಸಿ, 35,319 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ.
- ನದಿಗಳಿಗೆ ಹಿಮ್ಮುಖವಾಗಿ ನುಗ್ಗುವ ಉಪ್ಪು ನೀರು ತಡೆಗಟ್ಟಲು ಖಾರ್ಲ್ಯಾಂಡ್ ಯೋಜನೆ ಅನುಷ್ಠಾನ.
- ರಾಜ್ಯದ ಕೆರೆಗಳ ಅಭಿವೃದ್ಧಿಗೆ 500 ಕೋಟಿ ರೂಪಾಯಿ ಕ್ರಿಯಾ ಯೋಜನೆ.. ಪ್ರವಾಹದಿಂದ ಹಾನಿಯಾದ ಕೆರೆಗಳ ದುರಸ್ತಿಗೆ 200 ಕೋಟಿ ರೂಪಾಯಿ.
- ಕಾಳಿ ನದಿ ನೀರು ಬಳಸಿಕೊಂಡು ಉತ್ತರ ಕರ್ನಾಟಕದ 5 ಜಿಲ್ಲೆಗಳ ಕುಡಿಯುವ ನೀರಿನ ಯೋಜನೆ ರೂಪಿಸಲು ಕ್ರಮ.