ಬೆಂಗಳೂರು : ಕೊರೊನಾ ಸೋಂಕಿನ ಭೀತಿ ನಡುವೆಯೂ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶವನ್ನು ಇಂದು (ಸೋಮವಾರ) ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು ಎಂದು ಎಸ್.ಎಸ್.ಎಲ್.ಸಿ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಹಿನ್ನಲೆಯಲ್ಲಿ ಇತರೆ ರಾಜ್ಯಗಳಂತೆ, ಕರ್ನಾಟಕವು ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ರದ್ದುಗೊಳಿಸಲಿಲ್ಲ. ಬದಲಿಗೆ ಆಫ್‍ಲೈನ್ ಮೋಡ್‍ನಲ್ಲಿ ನಡೆಸಿತು. ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಜೂನ್19 ಹಾಗೂ ಜೂನ್ 22ರಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲಾಗಿತ್ತು.
ಈ ಬಾರಿ 8.71 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡುವುದಾಗಿ ಈ ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದರು. ಆದರೆ ವಿ.ಸುಮಂಗಲಾ ರವರು ಪಾಸ್ ಆಗಲು ಅಂಕಗಳನ್ನು ನಿಗದಿ ಮಾಡಿರುವುದು ವಿದ್ಯಾರ್ಥಿ – ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.
ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ವಿದ್ಯಾರ್ಥಿಗಳು ಒಟ್ಟು ಶೇ.35 ಅಥವಾ 600 ರಲ್ಲಿ 210 ಅಂಕಗಳನ್ನು ಪಡೆಯಬೇಕು. ಪಾಸ್ ಸರ್ಟಿಫಿಕೇಟ್ ಪಡೆಯಲು, ಅವರು ಭಾಷಾ ಪರೀಕ್ಷೆಯಲ್ಲಿ ಕನಿಷ್ಠ 70 ಅಂಕಗಳನ್ನು ಪಡೆಯಬೇಕು ಎಂದು ವಿ. ಸುಮಂಗಲಾ ತಿಳಿಸಿದ್ದಾರೆ.
ಮರುಮೌಲ್ಯಮಾಪನಕ್ಕೆ ಅವಕಾಶ: ಫಲಿತಾಂಶದ ಬಗ್ಗೆ ಅಸಮಾಧಾನವಿದ್ದಲ್ಲಿ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಮರುಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ಎರಡನೇ ಬಾರಿಗೆ ಅರ್ಜಿ ಸಲ್ಲಿಸಬಹುದು. ಅದಕ್ಕೆ ಶಿಕ್ಷಕರ ಸಹಾಯ ಪಡೆದು ಅಗತ್ಯವಿರುವ ದಾಖಲೆಗಳನ್ನು ಭರ್ತಿ ಮಾಡಿ ಮನವಿ ಮಾಡಬಹುದಾಗಿದೆ.
ಫಲಿತಾಂಶಕ್ಕಾಗಿ ಈ ವೆಬ್ಸೈಟ್ ಬಳಸಿ : ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ನೀವು http://kseeb.kar.nic.in ಅಥವಾ http://karresults.nic.in ವೆಬ್ಸೈಟ್ನಲ್ಲಿ ವೀಕ್ಷಿಸಬಹುದು. ಇದಷ್ಟೇ ಅಲ್ಲದೆ, http://examresults.net ಮತ್ತು http://indiaresults.com ವೆಬ್ಸೈಟ್ನಲ್ಲಿ ಕೂಡ ರಿಸಲ್ಟ್ ನೋಡಬಹುದು.
ವೆಬ್ಸೈಟ್ನಲ್ಲಿ ರಿಸಲ್ಟ್ ವೀಕ್ಷಿಸಲು ಹೀಗೆ ಮಾಡಿ.
- ವೆಬ್ಸೈಟ್ ಓಪನ್ ಮಾಡಿ ನಂತರ ಹೋಂ ಪೇಜ್ನಲ್ಲಿ ಎಸ್‍ಎಸ್‍ಎಲ್‍ಸಿ ರಿಸಲ್ಟ್ ಎಂಬ ಆಯ್ಕೆಯನ್ನು ಒತ್ತಿ.
- ನಿಮ್ಮ ಪರೀಕ್ಷೆಯ ರೋಲ್ ನಂಬರ್ ಮತ್ತು ಪೇಜ್ನಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಿ.
- ಹಾಲ್ ಟಿಕೆಟ್ನ ಮಾಹಿತಿಯನ್ನು ವೆಬ್ಸೈಟ್ನಲ್ಲಿ ವೇರಿಫೈ ಮಾಡಿಕೊಳ್ಳಿ.
- ಆಗ ನಿಮ್ಮ ಪರೀಕ್ಷೆ ಫಲಿತಾಂಶ ಸಿಗುತ್ತದೆ.
- ನಂತರ ಆ ಫಲಿತಾಂಶವನ್ನು ಪಿಡಿಎಫ್ ಫಾರ್ಮಾಟ್ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಬಹುದು.