ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ : 625ಕ್ಕೆ 625 ಅಂಕಗಳನ್ನು ಪಡೆದು ಅಂಕಿತಾ ರಾಜ್ಯಕ್ಕೆ ಟಾಪರ್

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿಯು ಇಂದು (ಮೇ 9) ಪ್ರಕಟಿಸಿದೆ. ಕೆಎಸ್‌ಇಎಬಿ 10 ನೇ ತರಗತಿಯ ರಿಸಲ್ಟ್‌ ನಲ್ಲಿ ಜಿಲ್ಲಾವಾರು ಫಲಿತಾಂಶ ಗಮನಿಸುವಾಗ, ಉಡುಪಿ ಮೊದಲ ಸ್ಥಾನಕ್ಕೆ, ದಕ್ಷಿಣ ಕನ್ನಡ ಎರಡನೇ ಸ್ಥಾನಕ್ಕೆ ಏರಿದೆ. ಶಿವಮೊಗ್ಗ ಜಿಲ್ಲೆ 28ರಿಂದ 3ನೇ ಸ್ಥಾನಕ್ಕೆ ಏರಿಕೆ ಕಂಡಿದೆ.

ನಗರ ಪ್ರದೇಶದ ಒಟ್ಟು 4,93,900 ವಿದ್ಯಾರ್ಥಿಗಳು 10 ನೇ ತರಗತಿಯ ಅಂತಿಮ ಪರೀಕ್ಷೆಯನ್ನು ತೆಗೆದುಕೊಂಡರು. ಇವರಲ್ಲಿ 3,59,703 ಮಂದಿ ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳ ಉತ್ತೀರ್ಣತೆಯು ಶೇಕಡಾ 72.83 ರಷ್ಟಿದೆ. ಗ್ರಾಮೀಣ ಪ್ರದೇಶದಲ್ಲಿ 3,66,067 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 2,71,501, ಅಂದರೆ ಶೇ.74.17ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ.

ಅಧಿಕೃತ ಪೋರ್ಟಲ್‌ಗಳ http://slc.karnataka.gov.in, kseeb.kar.nic.in, karnataka.gov.in, and karresults.nic.in ಮೂಲಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.

ಬಾಗಲಕೋಟೆಯ ಅಂಕಿತಾ ಬಸಪ್ಪ ಕರ್ನಾಟಕ ಎಸ್‌ಎಸ್‌ಎಲ್‌ಸಿ 2024 ರ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರಿನ ಮೇದಾ ಪಿ.ಶೆಟ್ಟಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ವರ್ಷ 625ಕ್ಕೆ 625 ಅಂಕಗಳನ್ನು ಒಬ್ಬಳೇ ವಿದ್ಯಾರ್ಥಿನಿ ಪಡೆದಿರುವುದು ಎಂಬುದು ಗಮನಾರ್ಹವಾಗಿದೆ. ಹಾಗೆಯೇ 624 ಅಂಕಗಳನ್ನು 7 ವಿದ್ಯಾರ್ಥಿಗಳು, 623 ಅಂಕಗಳನ್ನು 14 ವಿದ್ಯಾರ್ಥಿಗಳು ಪಡೆದಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ದಂಧೆಗೆ ಕಡಿವಾಣ ಹಾಕಿ: ಆಮ್ ಆದ್ಮಿ ಪಾರ್ಟಿ ಒತ್ತಾಯ

ಈ ವರ್ಷ ಹುಡುಗರಿಗಿಂತ ಹುಡುಗಿಯರು ಉತ್ತಮ ಪ್ರದರ್ಶನ ನೀಡಿದ್ದಾರೆ. .ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯವನ್ನು ಏಪ್ರಿಲ್ 15 ರಿಂದ 24 ರವರೆಗೆ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ 237 ಮೌಲ್ಯಮಾಪನ ಕೇಂದ್ರಗಳಲ್ಲಿ ಒಟ್ಟು 61160 ಮೌಲ್ಯಮಾಪಕರೊಂದಿಗೆ ನಡೆಸಲಾಯಿತು. ಈ ಪರೀಕ್ಷೆಗೆ 859967 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಈ ವರ್ಷ, ಒಟ್ಟು 6,31,204 ವಿದ್ಯಾರ್ಥಿಗಳು 10 ನೇ ತರಗತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.

-ಬಾಲಕರ ತೇರ್ಗಡೆ ಪ್ರಮಾಣ: 2,87,416 (65.90%)

-ಬಾಲಕಿಯರ ಶೇಕಡಾವಾರು: 3,43,788 (81.11%)

5906 ಸರ್ಕಾರಿ ಶಾಲೆಗಳಿಂದ ಪರೀಕ್ಷೆ ಬರೆದ 3,36,533 ವಿದ್ಯಾರ್ಥಿಗಳ ಪೈಕಿ 243,851 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 6144 ಅನುದಾನರಹಿತ ಶಾಲೆಗಳ ಪೈಕಿ ಪರೀಕ್ಷೆ ಬರೆದ 2,58,753 ವಿದ್ಯಾರ್ಥಿಗಳ ಪೈಕಿ, 2,23,720 ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. 3606 ಅನುದಾನಿತ ಶಾಲೆಗಳ ಪೈಕಿ 2,07,821 ವಿದ್ಯಾರ್ಥಿಗಳ ಪೈಕಿ 1,50,094 ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ.

ಕಳೆದ ವರ್ಷ, ಎಸ್‌ಎಸ್‌ಎಲ್‌ಸಿ 10 ನೇ ತರಗತಿ ಬೋರ್ಡ್ ಪರೀಕ್ಷೆಗಳು ಮಾರ್ಚ್ 31 ರಿಂದ ಜೂನ್ 19 ರವರೆಗೆ ನಡೆದವು ಮತ್ತು ಫಲಿತಾಂಶಗಳನ್ನು ಮೇ 8 ರಂದು ಪ್ರಕಟಿಸಲಾಯಿತು. ಒಟ್ಟಾರೆ ಉತ್ತೀರ್ಣ ಶೇಕಡಾ 83.89 ರಷ್ಟಿತ್ತು.

ಜಿಲ್ಲಾವಾರು ಫಲಿತಾಂಶ ಈ ರಿತಿ ಇದೆ.

1) ಉಡುಪಿ ಶೇ 94 (89.49)

 

2) ದಕ್ಷಿಣ ಕನ್ನಡ ಶೇ 92.12 (89.47)

 

3) ಶಿವಮೊಗ್ಗ ಶೇ 88.67 (84.04)

 

4) ಕೊಡಗು ಶೇ 88.67 (93.19)

 

5) ಉತ್ತರ ಕನ್ನಡ ಶೇ 86.54 (90.53)

 

6) ಹಾಸನ ಶೇ 86.28 (96.68)

 

7) ಮೈಸೂರು ಶೇ 85.5 (89.75)

 

8) ಶಿರಸಿ ಶೇ 84.64 (87.39)

 

9) ಬೆಂಗಳೂರು ಗ್ರಾಮಾಂತರ ಶೇ 83.67 (96.48)

 

10) ಚಿಕ್ಕಮಗಳೂರು ಶೇ 83.39 (89.69)

 

11) ವಿಜಯಪುರ ಶೇ 79.82 (91.23)

 

12) ಬೆಂಗಳೂರು ದಕ್ಷಿಣ ಶೇ 79 (78.95)

 

13) ಬಾಗಲಕೋಟೆ ಶೇ 77.92 (85.14)

 

14) ಬೆಂಗಳೂರು ಉತ್ತರ ಶೇ 77.09 (80.93)

 

15) ಹಾವೇರಿ ಶೇ 75. 85 (89.11)

 

16) ತುಮಕೂರು ಶೇ 75.16 (89.43)

 

17) ಗದಗ ಶೇ 74.76 (86.51)

 

18) ಚಿಕ್ಕಬಳ್ಳಾಪುರ ಶೇ 73.61 (96.15)

 

19) ಮಂಡ್ಯ ಶೇ 73.59 (96.74)

 

20 ) ಕೋಲಾರ ಶೇ 73.57 (94.6)

 

21) ಚಿತ್ರದುರ್ಗ-72.85 (96.8)

 

22) ಧಾರವಾಡ-72.67 (86.55)

 

23) ದಾವಣಗೆರೆ-72.49 (90.43)

 

24) ಚಾಮರಾಜನಗರ-71.59 (94.37)

 

25) ಚಿಕ್ಕೋಡಿ-69.82 (91.07)

 

26) ರಾಮನಗರ-69.53 (89.42)

 

27) ವಿಜಯನಗರ-65.61 (91.41)

 

28) ಬಳ್ಳಾರಿ-64.99 (81.54)

 

29) ಬೆಳಗಾವಿ-64.93 (85.85)

 

30) ಮಧುಗಿರಿ-62.44 (93-23)

 

31) ರಾಯಚೂರು-61.2 (84.02)

 

32) ಕೊಪ್ಪಳ-61.16 (90.27)

 

33) ಬೀದರ್-57.52 (78.73)

 

34) ಕಲಬುರಗಿ-53.04 (84.51)

 

35) ಯಾದಗಿರಿ-50.59 (75.49)

 

ಇದನ್ನೂ ನೋಡಿ: ಮೋದಿ ಅವರ ತೀರ್ಮಾನಗಳು ಕಾರ್ಪೊರೇಟ್‌ ಕಂಪನಿಗಳ ಪರ, ಕರ್ಮಿಕರ ಪರ ಅಲ್ಲ – ಬಾಬು ಮ್ಯಾಥ್ಯೂ ಆರೋಪ Janashakthi Media

Donate Janashakthi Media

Leave a Reply

Your email address will not be published. Required fields are marked *