ಕರ್ನಾಟಕ ಲೋಕಸಭೆ | ಬಿಜೆಪಿಗೆ ಆಘಾತ, ಕೈಗೆ ಹೊಡೆತ!

ಬೆಂಗಳೂರು :ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮತ ಎಣಿಕೆ ಮುಗಿದಿದ್ದು ಅಂತಿಮವಾಗಿ ಬಿಜೆಪಿ-ಜೆಡಿಎಸ್ ಮೈತ್ರಿ 19 ಸ್ಥಾನಗಳನ್ನು ಗೆದ್ದು ಬೀಗಿದೆ. ಅದರಲ್ಲಿ 17 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು, ಅದರ ಮಿತ್ರಪಕ್ಷವಾದ ಜೆಡಿಎಸ್ 2 ಸ್ಥಾನಗಳಲ್ಲಿ ಜಯ ಸಾಧಿಸುವಲ್ಲಿ ಯಶಸ್ಲಿಯಾಗಿದೆ. . ಇದೇವೇಳೆ ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ 1 ಸ್ಥಾನವನ್ನಷ್ಟೇ ಗೆಲ್ಲಲು ಸಫಲವಾಗಿದ್ದ ಕಾಂಗ್ರೆಸ್ ಈ ಬಾರಿ 9 ಸ್ಥಾನಗಳನ್ನು ಗೆದ್ದು ಚೇತರಿಕೆ ಕಂಡಿದೆ.

ಬಾಗಲಕೋಟೆ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮೀಣ, ಬೆಂಗಳೂರು ದಕ್ಷಿಣ, ಬೆಳಗಾವಿ, ಬಿಜಾಪುರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಕ್ಷಿಣ ಕನ್ನಡ, ಧಾರವಾಡ, ಹಾವೇರಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ- ಚಿಕ್ಕಮಗಳೂರು, ಉತ್ತರ ಕನ್ನಡಗಳಲ್ಲಿ ಬಿಜೆಪಿ ಗೆದ್ದಿದ್ದರೆ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದು ಬೀಗಿದೆ. ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕೋಡಿ, ದಾವಣಗೆರೆ, ಗುಲ್ಬರ್ಗಾ, ಹಾಸನ, ಕೊಪ್ಪಳ ಮತ್ತು ರಾಯಚೂರು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ.

ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ತೋರಿದ್ದರೆ, ಉತ್ತರ ಭಾಗದಲ್ಲಿ ಕಾಂಗ್ರೆಸ್ ಬಹಳ ಚೇತರಿಕೆ ಕಂಡಿದೆ. 2004ರಿಂದ ಫಲಿತಾಂಶಗಳನ್ನು ಗಮನಿಸಿದಾಗ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಯುಪಿಎ ಸರ್ಕಾರ ಇದ್ದಾಗಲೂ ರಾಜ್ಯದಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟಿನ ಯಶಸ್ಸನ್ನು ಕಂಡಿರಲಿಲ್ಲ. ಕಳೆದ ಬಾರಿಯಂತೂ ಮೋದಿ ಅಲೆಯಲ್ಲಿ ಕೊಚ್ಚಿ ಹೋದ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನಷ್ಟೇ ಗೆದ್ದುಕೊಳ್ಳಲು ಸಫಲವಾಗಿತ್ತು.

ಗೆದ್ದವರು, ಸೋತವರ ಪಟ್ಟಿ ಇಲ್ಲಿದೆ.

ಕ್ರ.ಸಂ ಕ್ಷೇತ್ರ ಗೆಲುವು ಸೋಲು
1 ಬೆಳಗಾವಿ ಜಗದೀಶ್ ಶೆಟ್ಟರ್ (ಬಿಜೆಪಿ) ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್)
2 ಚಿಕ್ಕೋಡಿ ಪ್ರಿಯಾಂಕಾ ಜಾರಕಿಹೊಳಿ (ಕಾಂಗ್ರೆಸ್) ಅಣ್ಣಾ ಸಾಹೇಬ್ ಜೊಲ್ಲೆ(ಬಿಜೆಪಿ)
3 ವಿಜಯಪುರ ರಮೇಶ್ ಜಿಗಜಿಣಗಿ (ಬಿಜೆಪಿ) ಎಚ್‌ಆರ್ ರಾಜು ಆಲಗೂರ (ಕಾಂಗ್ರೆಸ್)
4 ಬೀದರ್ ಸಾಗರ್ ಖಂಡ್ರೆ (ಕಾಂಗ್ರೆಸ್) ಭಗವಂತ ಖೂಬಾ (ಬಿಜೆಪಿ)
5 ಬಾಗಲಕೋಟೆ ಪಿಸಿ ಗದ್ದಿಗೌಡರ್ (ಬಿಜೆಪಿ) ಸಂಯುಕ್ತಾ ಪಾಟೀಲ್ (ಕಾಂಗ್ರೆಸ್)
6 ಬಳ್ಳಾರಿ ಇ. ತುಕಾರಾಂ (ಕಾಂಗ್ರೆಸ್) ಬಿ. ಶ್ರೀರಾಮುಲು (ಬಿಜೆಪಿ)
7 ಕೊಪ್ಪಳ ರಾಜಶೇಖರ್ ಹಿಟ್ನಾಳ್ (ಕಾಂಗ್ರೆಸ್) ಡಾ. ಬಸವರಾಜ ಕವಟೂರು (ಬಿಜೆಪಿ)
8 ರಾಯಚೂರು ಜಿ. ಕುಮಾರ ನಾಯಕ್ (ಕಾಂಗ್ರೆಸ್) ರಾಜಾ ಅಮರೇಶ್ವರ ನಾಯಕ(ಬಿಜೆಪಿ)
9 ಉತ್ತರ ಕನ್ನಡ ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) ಡಾ. ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್‌)
10 ಕಲಬುರಗಿ ಡಾ. ರಾಧಾಕೃಷ್ಣ ದೊಡ್ಡಮನಿ (ಕಾಂಗ್ರೆಸ್) ಡಾ. ಉಮೇಶ್ ಜಾಧವ್ (ಬಿಜೆಪಿ)
11 ಹಾವೇರಿ ಬಸವರಾಜ ಬೊಮ್ಮಾಯಿ (ಬಿಜೆಪಿ) ಆನಂದಸ್ವಾಮಿ ಗಡ್ಡದೇವರಮಠ (ಕಾಂಗ್ರೆಸ್‌)
12 ಧಾರವಾಡ ಪ್ರಹ್ಲಾದ್ ಜೋಶಿ (ಬಿಜೆಪಿ) ವಿನೋದ್ ಅಸೂಟಿ (ಕಾಂಗ್ರೆಸ್)
13 ದಾವಣಗೆರೆ ಪ್ರಭಾ ಮಲ್ಲಿಕಾರ್ಜುನ್ (ಕಾಂಗ್ರೆಸ್) ಗಾಯತ್ರಿ ಸಿದ್ದೇಶ್ವರ (ಬಿಜೆಪಿ)
14 ತುಮಕೂರು ವಿ. ಸೋಮಣ್ಣ (ತುಮಕೂರು) ಮುದ್ದಹನುಮೇ ಗೌಡ (ಕಾಂಗ್ರೆಸ್)
15 ಶಿವಮೊಗ್ಗ ಬಿ. ವೈ. ರಾಘವೇಂದ್ರ (ಬಿಜೆಪಿ) ಗೀತಾ ಶಿವರಾಜ್ ಕುಮಾರ್ (ಕಾಂಗ್ರೆಸ್)
16 ಉಡುಪಿ-ಚಿಕ್ಕಮಗಳೂರು ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ) ಜಯಪ್ರಕಾಶ್ ಹೆಗಡೆ (ಕಾಂಗ್ರೆಸ್)
17 ದಕ್ಷಿಣ ಕನ್ನಡ ಕ್ಯಾಪ್ಟನ್ ಬ್ರಿಜೇಶ್ ಚೌಟಾ (ಬಿಜೆಪಿ) ಪದ್ಮರಾಜ್ (ಕಾಂಗ್ರೆಸ್)
18 ಚಾಮರಾಜನಗರ ಸುನೀಲ್ ಬೋಸ್ (ಕಾಂಗ್ರೆಸ್) ಎಸ್. ಬಾಲರಾಜು (ಬಿಜೆಪಿ)
19 ಮೈಸೂರು-ಕೊಡಗು ಯದುವೀರ್ ಒಡೆಯರ್ (ಬಿಜೆಪಿ) ಎಂ. ಲಕ್ಷ್ಮಣ (ಕಾಂಗ್ರೆಸ್)
20 ಮಂಡ್ಯ ಎಚ್. ಡಿ. ಕುಮಾರಸ್ವಾಮಿ (ಜೆಡಿಎಸ್) ಸ್ಟಾರ್ ಚಂದ್ರು (ಕಾಂಗ್ರೆಸ್)
21 ಬೆಂಗಳೂರು ಗ್ರಾಮಾಂತರ ಡಾ. ಸಿ. ಎನ್. ಮಂಜುನಾಥ್ (ಬಿಜೆಪಿ) ಡಿ. ಕೆ. ಸುರೇಶ್ (ಕಾಂಗ್ರೆಸ್)
22 ಬೆಂಗಳೂರು ಉತ್ತರ ಶೋಭಾ ಕರಂದ್ಲಾಜೆ (ಬಿಜೆಪಿ) ಪ್ರೊ. ರಾಜೀವ್ ಗೌಡ (ಕಾಂಗ್ರೆಸ್)
23 ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ (ಬಿಜೆಪಿ) ಸೌಮ್ಯಾ ರೆಡ್ಡಿ (ಕಾಂಗ್ರೆಸ್)
24 ಬೆಂಗಳೂರು ಕೇಂದ್ರ ಪಿ. ಸಿ. ಮೋಹನ್ (ಬಿಜೆಪಿ) ಮನ್ಸೂರ್ ಅಲಿ ಖಾನ್ (ಕಾಂಗ್ರೆಸ್)
25 ಹಾಸನ ಶ್ರೇಯಸ್ ಪಟೇಲ್ (ಕಾಂಗ್ರೆಸ್) ಪ್ರಜ್ವಲ್ ರೇವಣ್ಣ (ಜೆಡಿಎಸ್)
26 ಚಿಕ್ಕಬಳ್ಳಾಪುರ ಡಾ. ಕೆ. ಸುಧಾಕರ್ (ಬಿಜೆಪಿ) ರಕ್ಷಾ ರಾಮಯ್ಯ (ಕಾಂಗ್ರೆಸ್)
27 ಕೋಲಾರ ಮಲ್ಲೇಶ್ ಬಾಬು (ಜೆಡಿಎಸ್) ಕೆ. ವಿ. ಗೌತಮ್ (ಕಾಂಗ್ರೆಸ್)
28 ಚಿತ್ರದುರ್ಗ ಗೋವಿಂದ ಕಾರಜೋಳ (ಬಿಜೆಪಿ) ಬಿ. ಎನ್. ಚಂದ್ರಪ್ಪ (ಕಾಂಗ್ರೆಸ್)
Donate Janashakthi Media

Leave a Reply

Your email address will not be published. Required fields are marked *