ಬೆಂಗಳೂರು: KSRTC ಕಂಡಕ್ಟರ್ ಮೇಲೆ ಕನ್ನಡ ಮಾತಾಡಿ ಎಂದಿದ್ದಕ್ಕೆ ಹಲ್ಲೆ ನಡೆದ ಘಟನೆಯ ನಂತರ ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಕೊಂಚ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಬೆಂಗಳೂರು
ಮರಾಠಿ ಹಾಗೂ ಕನ್ನಡ ಭಾಷಿಕರ ನಡುವೆ ಹೊಡೆದಾಟ ಶುರುವಾಗಿ ಸರ್ಕಾರಿ ಬಸ್‌ಗಳಿಗೆ ಹಾನಿ ಮಾಡಿದ್ದಲ್ಲದೆ ಚಾಲಕರು ನಿರ್ವಾಹಕರಿಗೆ ಮಸಿ ಬಳಿದು ಆಕ್ರೋಶ ಹೊರಹಾಕಲಾಗಿತ್ತು.
ಇದನ್ನೂ ಓದಿ: ಜಾಲಹಳ್ಳಿ| ಕೃಷಿ ವಿರೋಧಿ ನೀತಿಯ ವಿರುದ್ದ ಚಳವಳಿ: ವಿಜು ಕೃಷ್ಣನ್
ಈ ಘಟನೆಗಳ ನಂತರ ಮಹಾರಾಷ್ಟ್ರದಕ್ಕೆ ಕರ್ನಾಟಕದ ಬಸ್ ಪ್ರವೇಶ ಬಂದ್ ಮಾಡಲಾಗಿತ್ತು. ಇದೀಗ ಪರಿಸ್ಥಿತಿ ಹತೋಟಿಗೆ ಬಂದ ನಂತರ ಮತ್ತೆ ಮಹಾರಾಷ್ಟ್ರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಪುನಾರಂಭವಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಹಾರಾಷ್ಟ್ರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಪುನಾರಂಭವಾಗಿದೆ. ಕಂಡಕ್ಟರ್ ವಿರುದ್ಧ ದಾಖಲಿಸಿದ ಪೋಕ್ಸೋ ಕೇಸ್ ಹಿಂಪಡೆಯಲಾಗಿದ್ದು, ದೂರು ಕೊಟ್ಟ ಕುಟುಂಬಸ್ಥರಿಗೆ ತಪ್ಪಿನ ಅರಿವಾಗಿದೆ. ಎಲ್ಲವೂ ಸುಖಾಂತ್ಯಗೊಂಡು ಪರಿಸ್ಥಿತಿ ತಿಳಿಗೊಂಡ ಹಿನ್ನೆಲೆಯಲ್ಲಿ ಈಗ ಬಸ್ ಸಂಚಾರ ಪ್ರಾರಂಭ ಮಾಡಿದ್ದೇವೆ ಎಂದರು.
ಇದನ್ನೂ ನೋಡಿ: ತ್ರಿಭಾಷ ಸೂತ್ರ ಮತ್ತು ಕಲಿಕಾ ಮಾಧ್ಯಮ – ನಿರಂಜನಾರಾಧ್ಯ.ವಿ.ಪಿJanashakthi Media