ಬೆಂಗಳೂರು : ಏಪ್ರಿಲ್ 10 ರಿಂದ 20 ರವರೆಗೆ ಕೆಲವು ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿಯಾಗಲಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಾರ್, ಪಬ್, ರೆಸ್ಟೋರೆಂಟ್ ಗಳು ಬಂದ್ ಆಗಲಿವೆ. ರಾಜ್ಯದ ಕೆಲವು ಜಿಲ್ಲೆಗಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತದೆ. ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಭಾಷಣದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿದ್ದು, ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಕಲಬುರಗಿ, ಮೈಸೂರು, ತುಮಕೂರು, ಬಳ್ಳಾರಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತದೆ ಎಂದಿದ್ದಾರೆ.
ನೈಟ್ ಕರ್ಫ್ಯೂ ಎಂದರೆ ಇನ್ನು ಮುಂದೆ ಕೊರೊನಾ ಕರ್ಫ್ಯೂ, ಮಾಸ್ಕ್ ಧರಿಸದವರಿಗೆ ದಂಡ ಹಾಕಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಈ ಜಿಲ್ಲೆಗಳಿಗೆ ನನ್ನ ಮನವಿ. ನಾವು ಲಾಕ್ಡೌನ್ ಮಾಡ್ತಿಲ್ಲ. ಅಂಥದ್ದು ಆಗಬಾರದು ಅಂದ್ರೆ ಜನರು ಸಹಕರಿಸಬೇಕು. ಪ್ರಧಾನಿ ಕೊಟ್ಟ ಸಲಹೆಯನ್ನು ನಾವು ಅನುಷ್ಠಾನಕ್ಕೆ ತರ್ತಿದ್ದೀವಿ. ಮಾಸ್ಕ್ ಹಾಕದವರಿಗೆ 250 ದಂಡವನ್ನು ಬಿಗಿಮಾಡ್ತೀವಿ. ರಾಜ್ಯದ ಜನರು ಸಹಕಾರ ಕೊಟ್ರೆ ಇದು ಹರಡುವುದನ್ನು ತಪ್ಪಿಸಬಹುದು. ಇದು ಕಂಟ್ರೋಲ್ಗೆ ಬರದಿದ್ರೆ ಇಡೀ ರಾಜ್ಯಕ್ಕೆ ವಿಸ್ತರಿಸಬೇಕಾಗುತ್ತೆ. ಕೊರೊನಾ ಕರ್ಫ್ಯೂ ಸಂದರ್ಭದಲ್ಲಿ ಎಲ್ಲ ಅಗತ್ಯ ಸೇವೆಗಳು ಇರುತ್ತವೆ ಎಂದು ಸಿಎಂ ತಿಳಿಸಿದ್ದಾರೆ.