ಬೆಂಗಳೂರು: ರಾಜ್ಯ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರಪತಿಗಳ ಅನುಮತಿ ಮೇರೆಗೆ ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆ ಆದೇಶ ಹೊರಡಿಸಿದೆ.
ಈ ಕುರಿತು ಅಧಿಸೂಚನೆ ಹೊರಡಿಸಿರುವ ಸಚಿವಾಲಯ ಸರ್ಕಾರದ ಪರ ವಕೀಲರಾಗಿದ್ದ ವಿಜಯಕುಮಾರ್ ಎ.ಪಾಟೀಲ್ ಹಾಗೂ ಹೈಕೋರ್ಟ್ ವಕೀಲ ರಾಜೇಶ್ ರೈ ಕಲ್ಲಂಗಳ ಅವರಿಗೆ ನ್ಯಾಯಮೂರ್ತಿ ಸ್ಥಾನಕ್ಕೆ ಪದನ್ನೋತಿ ನೀಡಿದೆ.
ಇದನ್ನು ಓದಿ: ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ–ನ್ಯಾಯಧೀಶರಾಗಿ ವಿಕ್ಟೋರಿಯಾ ಗೌರಿ ಪ್ರಮಾಣ ವಚನ ಸ್ವೀಕಾರ
ಇಬ್ಬರೂ ನ್ಯಾಯಮೂರ್ತಿಗಳು 2 ವರ್ಷಗಳ ಕಾಲ ಕೆಲಸ ನಿರ್ವಹಿಸಲಿದ್ದು ನಂತರ ಅವರ ಸೇವೆ ಕಾಯಂಗೊಳ್ಳಲಿದೆ ಎಂದು ಸೂಚಿಸಲಾಗಿದೆ. ವಿಜಯಕುಮಾರ್ ಎ.ಪಾಟೀಲ್ ಹಾಗೂ ರಾಜೇಶ್ ರೈ ಕಲ್ಲಂಗಳ ಅವರ ನೇಮಕದಿಂದ ಈಗ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ 53ಕ್ಕೆ ಏರಿದೆ.
ಬೆಂಗಳೂರಿನ ಪ್ರಧಾನಪೀಠ ಸೇರಿ ಧಾರವಾಡ ಮತ್ತು ಕುಲಬುರಗಿ ಪೀಠಗಳಿಗೆ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿದ್ದು, ಸದ್ಯ 53 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 2023ರ ಮೇ 21ಕ್ಕೆ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ನಿವೃತ್ತಿ ಹೊಂದಲಿದ್ದರೆ, ಮೇ 31ಕ್ಕೆ ನ್ಯಾಯಮೂರ್ತಿ ಬಿ.ವೀರಪ್ಪ ನಿವೃತ್ತಿ ಹೊಂದಲಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ