ರಾಜ್ಯದಲ್ಲಿ ಮೊದಲ ಝೀಕಾ ವೈರಲ್ ಸೋಂಕು ಪತ್ತೆ : ಏನಿದು ಝೀಕಾ ವೈರಸ್‌?

ಬೆಂಗಳೂರು: ರಾಜ್ಯದಲ್ಲಿ ಮೊದಲ ಝೀಕಾ ವೈರಲ್ ಸೋಂಕು ವರದಿಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನ ಆರೋಗ್ಯಸೌಧದಲ್ಲಿ ಮಾತನಾಡಿದ ಅವರು, ರಾಯಚೂರು ಜಿಲ್ಲೆಯ ಐದು ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ಪುಣೆ ವೈರಾಲಜಿ ಲ್ಯಾಬ್‌ನಿಂದ ಪಾಸಿಟಿವ್ ರಿಪೋರ್ಟ್‌ ಬಂದಿದೆ. ಝೀಕಾ ವೈರಸ್‌ ಸೋಂಕಿನ ಬಾಲಕಿ ಮೇಲೆ ತೀವ್ರ ನಿಗಾ ವಹಿಸಿದ್ದೇವೆ. ಇನ್ನು ಝೀಕಾ ಸೋಂಕು ಪತ್ತೆಯಾದ ಬಾಲಕಿ ಟ್ರಾವೆಲ್ ಹಿಸ್ಟರಿ ಈವರೆಗೂ ಲಭ್ಯವಾಗಿಲ್ಲ ಎಂದರು.

ಬಾಲಕಿ ಕಳೆದ 15 ದಿನಗಳಿಂದ ಜ್ವರ, ವಾಂತಿ, ಭೇದಿಯಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ನವೆಂಬರ್ 13ರಂದು ಜ್ವರ ಕಾಣಿಸಿಕೊಂಡಿತ್ತು. ಮೊದಲು ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಡೆಂಘೀ ಜ್ವರ ದೃಢಪಟ್ಟ ಹಿನ್ನೆಲೆ ವಿಜಯನಗರದ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ವೈದ್ಯರು ಬಾಲಕಿಯ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಿದ್ದು ಡಿಸೆಂಬರ್ 9ರಂದು ಪಾಸಿಟಿವ್ ಬಂದಿತ್ತು ಎಂದರು.

ಇನ್ನು ಸೋಂಕು ಕಾಣಿಸಿಕೊಂಡಿರುವುದರಿಂದ ರಾಯಚೂರು ಹಾಗೂ ನೆರೆಯ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.

ಝೀಕಾ ವೈರಸ್ ಸೋಂಕು ಕುರಿತಂತೆ ಯಾರೂ ಆತಂಕಪಡುವ ಅಗಕತ್ಯವಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಸಂಜೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಜಿಕಾ ವೈರಸ್ ಎಂದರೇನು? : ಜಿಕಾ ವೈರಸ್ ಕಾಯಿಲೆ ಸೊಳ್ಳೆಗಳ ಮೂಲಕ ವಾಹಕಗಳಾಗಿ ಹರಡುತ್ತದೆ. ಈ ಈಡಿಸ್ ಈಜಿಪ್ಟಿ, ಫ್ಲೇವಿ ವೈರಸ್‌ ಸಾಗಿಸುವ ಸೊಳ್ಳೆಗಳು ಮನುಷ್ಯರನ್ನು ಕಚ್ಚಿದಾಗ, ವೈರಸ್ ಮನುಷ್ಯರಿಗೆ ಹರಡುತ್ತದೆ. ಈ ಈಡಿಸ್ ಸೊಳ್ಳೆಗಳು ಹಗಲಿನ ವೇಳೆಯಲ್ಲಿ ಕಚ್ಚುತ್ತವೆ ಹಾಗೂ ಹೆಚ್ಚಾಗಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಜಿಕಾ ವೈರಸ್ ಕೇವಲ ಸೊಳ್ಳೆ ಕಡಿತದಿಂದ ಮಾತ್ರವಲ್ಲ, ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಮುಂತಾದ ದೇಹದ ದ್ರವಗಳ ವಿನಿಮಯದ ಮೂಲಕವೂ ಸೋಂಕಿತ ಪಾಲುದಾರರ ನಡುವೆ ಹರಡುತ್ತದೆ. ಹಾಗೂ, ಕೇವಲ ಸೊಳ್ಳೆ ಕಡಿತದಿಂದ ಮಾತ್ರವಲ್ಲ, ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಮುಂತಾದ ದೇಹದ ದ್ರವಗಳ ವಿನಿಮಯದ ಮೂಲಕವೂ ಸೋಂಕಿತ ಪಾಲುದಾರರ ನಡುವೆ ಹರಡುತ್ತದೆ ಮತ್ತು ಇನ್ನೊಬ್ಬರು ಸೋಂಕಿಗೆ ಒಳಗಾಗುವುದಿಲ್ಲ. ಗರ್ಭಿಣಿಗೆ ಝೀಕಾ ವೈರಸ್ ಸೋಂಕಿಗೆ ಒಳಗಾಗಿದ್ದರೆ ಹುಟ್ಟಲಿರುವ ಮಗುವಿಗೆ ಸೋಂಕು ಬರಬಹುದು ಎಂದು ತಜ್ಞರು ಹೇಳುತ್ತಾರೆ.

ಜಿಕಾ ವೈರಸ್ ಅನ್ನು ವಿಶ್ವದಲ್ಲಿ ಮೊದಲು ಎಲ್ಲಿ ಪತ್ತೆಹಚ್ಚಲಾಯಿತು..?
ಜಿಕಾ ವೈರಸ್‌ನ್ನು ಮೊದಲು ಉಗಾಂಡಾದಲ್ಲಿ 1947 ರಲ್ಲಿ ಕೋತಿಗಳಲ್ಲಿ ಪತ್ತೆ ಹಚ್ಚಲಾಯಿತು ಎಂದು WHO ತಿಳಿಸಿತ್ತು. ನಂತರ ಇದು, 1952 ರಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಪತ್ತೆಯಾಗಿತ್ತು. 2015 ರಲ್ಲಿ 70 ಕ್ಕೂ ಹೆಚ್ಚು ದೇಶಗಳಲ್ಲಿ 1.5 ದಶಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾದ ವಿಶ್ವದಾದ್ಯಂತ ಗಂಭೀರ ಜಿಕಾ ವೈರಸ್ ಹರಡಿತ್ತು. ಆ ವೇಳೆ ಭಾರತದಲ್ಲಿ ಪ್ರಕರಣಗಳು ಪತ್ತೆಯಾಗಿರಲಿಲ್ಲ.

ಜಿಕಾ ವೈರಸ್ ಕಾಯಿಲೆಯ ಚಿಹ್ನೆಗಳು ಮತ್ತು ಲಕ್ಷಣಗಳು
– ಸೌಮ್ಯ ಜ್ವರ
– ಕೆಂಪು ಕಣ್ಣು ಅಥವಾ ಕಾಂಜಂಕ್ಟಿವಿಟಿಸ್
– ಸ್ನಾಯು ಮತ್ತು ಕೀಲು ನೋವು
– ತಲೆನೋವು
– ಆಯಾಸ ಅಥವಾ ಅಸ್ವಸ್ಥತೆಯ ಸಾಮಾನ್ಯ ಭಾವನೆ
– ಹೊಟ್ಟೆ ನೋವು

Donate Janashakthi Media

Leave a Reply

Your email address will not be published. Required fields are marked *