ಕರ್ನಾಟಕದ ಚುನಾವಣಾ ಫಲಿತಾಂಶಕ್ಕೆ ತಮಿಳುನಾಡಿನಲ್ಲಿ ಸಂತಸ…

                                                                                                                                                                              – ಎಚ್.ಆರ್. ನವೀನ್ ಕುಮಾರ್, ಹಾಸನ

 

ಕಾಫಿ ಬೆಳೆಗಾರರ ತಮಿಳುನಾಡು ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಲು ಕೊಡೆಕೆನ್ ಗೆ ಹೋಗಿದ್ದೆ. ಬೆಂಗಳೂರಿನಿಂದ ತೂತುಕುಡಿ ಎಕ್ಸ್‌ಪ್ರೆಸ್‌ ರೈಲಿನ ಮೂಲ ದಿಂಡಿಗಲ್ ತಲುಪಿದೆ. ದಿಂಡಿಗಲ್ ರೈಲ್ವೆ ನಿಲ್ದಾಣದಿಂದ ನನ್ನನ್ನು ಎಸ್‌ಎಫ್‌ಐ  ಕಾರ್ಯಕರ್ತರೊಬ್ಬರು ಬೈಕ್ ಮೂಲಕ ಜನಚಳುವಳಿ  ಕಛೇರಿಗೆ ಕರೆದೊಯ್ದರು. ಕಛೇರಿಗೆ ಪ್ರವೇಶ ಪಡೆಯುತ್ತಿದ್ದಂತೆ ಇಲ್ಲಿದ್ದವರು ನನಗೆ ಕೈಕೊಟ್ಟು, ಕೆಲವರು ತಬ್ಬಿಕೊಂಡು ಶುಭಾಶಯಗಳನ್ನು ತಿಳಿಸಿದರು.

ಮೊದಲಿಗೆ ನನಗೂ ಆಶ್ಚರ್ಯವಾಯಿತು. ಇದೇನಿದು ಯಾವ ಕಾರಣಕ್ಕಾಗಿ ನನಗೆ ಶುಭಕೋರುತ್ತಿದ್ದಾರೆ ಎಂದು ತಿಳಿಯದೆ ಸುಮ್ಮನೆ ನಿಂತಿದ್ದೆ. ತಕ್ಷಣ ಪಕ್ಕದಲ್ಲಿದ್ದ ಒಬ್ಬ ಹಿರಿಯ ಸಂಗಾತಿ ಕರ್ನಾಟಕದ ಜನ ನೀವು ಗ್ರೇಟ್, ಬಿಜೆಪಿ ಯನ್ನು ಹೀನಾಯವಾಗಿ ಸೋಲಿಸಿ ಅಧಿಕಾರದಿಂದ ದೂರವಿಟ್ಟು ಸರಿಯಾಗಿ ಬುದ್ದಿಕಲಿಸಿದ್ದೀರಿ… ಇದರಿಂದ ತಮಿಳುನಾಡಿನ ಜನ ಕನ್ನಡಿಗರ ಬಗ್ಗೆ ಹೆಮ್ಮೆಯಿಂದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು. ಆಗ ನನಗೆ ಎಲ್ಲವೂ ಕಣ್ಣಮುಂದೆ ಬಂತು.

ಈ ಭಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಭಾರತದ ರಾಜ್ಯಗಳು ಮತ್ತು ದೇಶವೇ ಅತ್ಯಂತ ಕುತೂಹಲದಿಂದ ನೋಡುತ್ತಿತ್ತು.

ಬಹುಮತದಿಂದ ಅಧಿಕಾರದ ಚುಕ್ಕಾಣಿಯನ್ನ ಹಿಡಿದೇ ಹಿಡಿಯುತ್ತೇವೆಂದು ಶತಾಯಗತಾಯ ಸರ್ಕಸ್ ಮಾಡಿ ಇಡೀ ಕೇಂದ್ರ ಸರ್ಕಾರವನ್ನೇ ಕರ್ನಾಟಕಕ್ಕೆ ತಂದು ಮೋದಿ, ಶಾ, ನಡ್ಡಾ ನೇತೃತ್ವದಲ್ಲಿ ಚುನಾವಣೆಯನ್ನು ನಡೆಸಿದ ಬಿಜೆಪಿಯನ್ನು ಕೇವಲ 65 (224 ರಲ್ಲಿ) ಸ್ಥಾನಗಳಿಗೆ ಕಟ್ಟಿ ಹಾಕಿದ ಕರ್ನಾಟಕದ ಜಾಗೃತ ಮತದಾರರ ಬಗ್ಗೆ ಮತ್ತೊಮ್ಮೆ ಹೆಮ್ಮೆ ಎನಿಸಿತು.

ಈ ಮಾತುಕತೆ ಮುಗಿಸಿ ಕಾಫಿ ಬೆಳೆಗಾರರ ರಾಜ್ಯ ಸಮ್ಮೇಳನ ನಡೆಯುವ ಕೊಡೆಕೆನಾಲ್ ಗೆ ಹೊರೆಟೆವು. ಅದಕ್ಕೂ ಮೊದಲು ದಿಂಡಿಗಲ್ ನಲ್ಲಿ ತಿಂಡಿ ತಿನ್ನಲು ಮೀನಾಕ್ಷಿ ಹೋಟೆಲ್ ಗೆ ಹೋದೆವು.‌ ಬೆಳಗಿನ ತಿಂಡಿ ಸವಿಯಲು ಜನವೋ ಜನ… ನಾವು 5 ಮಂದಿ ಇದ್ದೆವು ಸ್ವಲ್ಪದರಲ್ಲೇ ಒಂದು ಟೇಬಲ್ ನಲ್ಲಿ ಜಾಗಸಿಕ್ಕಿತು. ಇಡ್ಲಿ ಆರ್ಡರ್ ಮಾಡಿದೆವು. ದೊಡ್ಡದಾದ ಸ್ಟೀಲ್ ತಟ್ಟೆಯೊಂದರಲ್ಲಿ ಬಾಳೆ ಎಲೆ ಇಟ್ಟು ಅದರ ಮಾದ್ಯಕ್ಕೆ ಶುಭ್ರ ಬಿಳಿ ಬಣ್ಣದ 2 ಮೃದುವಾದ ಇಡ್ಲಿ ಮತ್ತು ಅದರ ಸುತ್ತಲೂ 5 ತರದ ಚಟ್ನಿ ಜೊತೆ ಸಾಂಬಾರ್ ಕೂಡ ಕೊಟ್ಟಿದ್ದರು.. ಕರ್ನಾಟಕದ ಹೋಟೆಲ್ ಗಳಲ್ಲಿ ಕೊಡುವಂತೆ ಇಡ್ಲಿ ತಿನ್ನಲು ಚಮಚ ಕೊಡುತ್ತಾರೆಂದು ಕಾಯುತ್ತಿದ್ದ ನನಗೆ ಆಶ್ಚರ್ಯವಾಯಿತು. ಯಾರಿಗೂ ಚಮಚ ಇಲ್ಲ… ಸುತ್ತಲೂ ಎಲ್ಲಾ ಟೇಬಲ್ಗಳನ್ನ ಒಮ್ಮೆ ಕಣ್ಣಾಡಿಸಿದೆ ಎಲ್ಲರೂ ತಮ್ಮದೇ ಸ್ವಂತ ಕೈಗಳಲ್ಲಿ ಮನೆಯಲ್ಲಿ ಕುಳಿತು ತಿನ್ನುವ ಹಾಗೆ ವಿವಿಧ ಬಗೆಯ ತಿಂಡಿಗಳನ್ನು ಚಪ್ಪರಿಸುತ್ತಿದ್ದರು…

ಸರಿ ಎಂದು ಮೇಲೆದ್ದು ಕೈತೊಳೆದು ಬಂದು ಇಡ್ಲಿಯ ಸುತ್ತ ಅಲಂಕರಿಸಿದ್ದ‌ ವಿವಿಧ ಬಗೆಯ ವಿವಿಧ ಬಣ್ಣದ ಚಟ್ನಿಗಳಲ್ಲಿ ಇಡ್ಲಿ ಸವಿಯಲು ಪ್ರಾರಂಭಿಸಿದೆ. 5 ಬಗೆಯ ಚಟ್ನಿ ಮತ್ತು ಸಾಂಬರ್ ಒಂದು ಸುತ್ತು ಬರುವುದರಲ್ಲಿ ಎರಡೂ ಇಡ್ಲಿ ಖಾಲಿ. ಎದುರಿದ್ದ ಸಂಗಾತಿಯ ಮುಖ ನೋಡಿದರೆ ಅವರು ಮುಗುಳ್ ನಕ್ಕು ಸಪ್ಲೆಯರ್ ನನ್ನ ಕರೆದು ಉಪ್ಪಿಟ್ಟು ತರಲು ಹೇಳಿದರು. ತರಕಾರಿಗಳಿಂದ ಮಾಡಿದ್ದ ಉಪ್ಪಿಟ್ಟಿಗೂ ಚಟ್ನಿ, ಸಾಂಬರ್ ಹಾಕಿದರು. ಎರಡನ್ನು ಮಿಶ್ರಣಮಾಡಿ ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ನಾನು ಸೇರಿದಂತೆ ಅಲ್ಲಿದ್ದ ಬಹುತೇಕರು ತಮ್ಮ ಕೈಗಳ ಮೂಲಕ ಸವಿದ ತಿಂಡಿಯನ್ನು ಹೇಗೆ ಸವಿದ್ದದ್ದರು, ಎಷ್ಟು ರುಚಿಯಾಗಿತ್ತು ಎನ್ನುವುದಕ್ಕೆ ಅವರ ತಟ್ಟೆಯಲ್ಲಿದ್ದ ಬಾಳೆ ಎಲೆಯ ಶುಭ್ರತೆಯೇ ಸಾಕ್ಷಿ….

ದಿಂಡಿಗಲ್ ನಿಂದ ಕೊಡೈಕೆನಾಲ್ ಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು… ಬಯಲು ಸೀಮೆಯಿಂದ ಪಶ್ಚಿಮಘಟ್ಟಕ್ಕೆ ಪಯಣಿಸುವುದು, ಸುತ್ತಲೂ ಅಚ್ಚ ಹಸಿರಾದ ಕಾಡು, ಬೆಟ್ಟಗುಡ್ಡ, ಅತ್ಯಂತ ತಿರುವಿನ ರಸ್ತೆಗಳು… ಇವುಗಳನ್ನ ಹೇಳಿದರೆ ಸಾಲದು ಒಮ್ಮೆ ಅನುಭವಿಸಲೇಬೇಕು.

ಕೊಡೈಕೆನಾಲ್ ತಲುಪಿ ಕಾಫಿ ರೈತರ ಸಮ್ಮೇಳನದಲ್ಲಿ ಭಾಗವಹಿಸಲು ಸಭಾಂಗಣವನ್ನ ಪ್ರವೇಶಿಸಿದರೆ ಅಲ್ಲಿಯೂ ಬೆಳಗ್ಗೆ ಆದ ಅನುಭವವೇ ಮತ್ತೆ… ಮೊದಲಿಗೆ ನಮಗೆ ಸಿಕ್ಕವರು ಎಐಕೆಸ್‌ನ ನ ರಾಷ್ಟ್ರೀಯ ಹಣಕಾಸು ಕಾರ್ಯದರ್ಶಿ ಪಿ.ಕೃಷ್ಣಪ್ರಸಾದ್. ಇವರು ಮೂಲತಃ ಕೇರಳದವರು ಈಗ ದೆಹಲಿಯಲ್ಲಿ ವಾಸವಾಗಿದ್ದಾರೆ ಇವರು ಅತ್ಯಂತ ಖುಷಿಯಿಂದ ಶುಭಾಶಯಗಳನ್ನು ತಿಳಿಸಿದರು… ಇಡೀ ದೇಶದ ದುಡಿಯುವ ವರ್ಗದ ಪರವಾಗಿ ಬಿಜೆಪಿ ಯನ್ನು ಸೋಲಿಸಿದ ಕನ್ನಡಿಗರಿಗೆ ಅಭಿನಂದನೆಗಳು ಎಂದರು. ಅಲ್ಲಿದ್ದ ತಮಿಳುನಾಡಿನ ವಿವಿಧ ಜಿಲ್ಲೆಯ ರೈತರು ತಮ್ಮ ಖಿಷಿಯನ್ನು ಹಂಚಿಕೊಂಡರು. ಆಗ ನನಗನಿಸಿದ್ದು ಕನ್ನಡಿಗರು ತೆಗೆದುಕೊಂಡ ಅತ್ಯಂತ ಗಂಬೀರವಾದ ರಾಜಕೀಯ ನಿಲುಮೆಗೆ ವ್ಯಕ್ತವಾಗುತ್ತಿರುವ ಪ್ರಶಂಸೆ ಆಶ್ಚರ್ಯವನ್ನು ಉಂಟುಮಾಡಿತು. ಮತ್ತು ಜಾಗೃತ ಕನ್ನಡದ ಮತದಾರ ಮನಸುಗಳಿಗೆ ಮನಸ್ಸಿನಲ್ಲೆ ಅಭಿನಂದನೆ ಸಲ್ಲಿಸಿದೆ.

Donate Janashakthi Media

Leave a Reply

Your email address will not be published. Required fields are marked *