ಬೆಂಗಳೂರು : ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ನಡೆದಂತ ಮತದಾನ ಮತಎಣಿಕೆ ಕಾರ್ಯ ಮುಕ್ತಾಯವಾಗಿದ್ದು. ಕಾಂಗ್ರೆಸ್ ಸ್ಪಷ್ಟ ಬಹುಮತದ ಮೂಲಕ ಸರ್ಕಾರ ರಚನೆಯತ್ತ ದಾಪುಗಾಲು ಇಟ್ಟಿದೆ. 224 ಕ್ಷೇತ್ರಗಳಲ್ಲಿ ಮ್ಯಾಜಿಕ್ ನಂಬರ್ 113ರ ಗಡಿದಾಟಿ 135 ಸೀಟುಗಳನ್ನು ಗೆದ್ದಿದೆ.
ಚುನಾವಣಾ ಆಯೋಗದ ಮಾಹಿತಿಯಂತೆ ಬಿಜೆಪಿ 66 ಕ್ಷೇತ್ರಗಳಲ್ಲಿ ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ, ಜೆಡಿಎಸ್ 19 ಕ್ಷೇತ್ರಗಳಲ್ಲಿ ಪಕ್ಷೇತರರು ಎರಡು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಒಬ್ಬರು, ಸರ್ವೋದಯ ಪಕ್ಷದಿಂದ ಒಬ್ಬರು ಗೆಲುವು ಸಾಧಿಸಿದ್ದಾರೆ. ಈ ಮೂಲಕ 224 ಕ್ಷೇತ್ರಗಳಲ್ಲಿ 223 ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಿದಿದೆ.
ಬಿಜೆಪಿಗೆ ದೊಡ್ಡ ಹೊಡೆತ : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹೊಡೆತ ಬಿದ್ದಿದೆ. ಬೆಂಗಳೂರು ನಗರ ಹಾಗೂ ಕರಾವಳಿ ಭಾಗ ಕೈ ಹಿಡಿಯದೇ ಇದ್ದಿದ್ದರೆ ಬಿಜೆಪಿ ಮತ್ತಷ್ಟು ಹೀನಾಯವಾಗಿ ಸೋಲುತ್ತಿತ್ತು. ಸುಮಾರು ಒಂಬತ್ತು ಜಿಲ್ಲೆಗಳಲ್ಲಿ ಬಿಜೆಪಿ ಒಂದೂ ಸ್ಥಾನವನ್ನೂ ಗೆದ್ದಿಲ್ಲ.
ಎಂಟು ಜಿಲ್ಲೆಗಳಲ್ಲಿ ಕೇವಲ ತಾಲ ಒಂದು ಸ್ಥಾನದಲ್ಲಿ ಗೆದ್ದಿದೆ. ಏಳು ಜಿಲ್ಲೆಗಳಲ್ಲಿ ತಲಾ ಎರಡು ಸ್ಥಾನಗಳಲ್ಲಿ ಗೆಲ್ಲಿದೆ.
ಬಿಜೆಪಿ ಒಂದೂ ಸ್ಥಾನ ಗೆಲ್ಲದ ಜಿಲ್ಲೆಗಳು
ಚಿಕ್ಕಮಗಳೂರು
ಯಾದಗಿರಿ
ಬಳ್ಳಾರಿ
ಚಿಕ್ಕಬಳ್ಳಾಪುರ
ಕೋಲಾರ
ಕೊಡಗು
ರಾಮನಗರ
ಮಂಡ್ಯ
ಚಾಮರಾನಗರ
ಬಿಜೆಪಿ ಕಳಪೆ ಪ್ರದರ್ಶನದ ಜಿಲ್ಲೆಗಳು
ಒಂದೂ ಕ್ಷೇತ್ರ ಗೆಲ್ಲದ ಜಿಲ್ಲೆಗಳು – 09
ತಲಾ ಒಂದು ಕ್ಷೇತ್ರ ಗೆದ್ದ ಜಿಲ್ಲೆಗಳು – 08
ತಲಾ ಎರಡು ಕ್ಷೇತ್ರ ಗೆದ್ದ ಜಿಲ್ಲೆಗಳು – 07
ವಲಯವಾರು ಬಿಜೆಪಿ ಗೆದ್ದ ಕ್ಷೇತ್ರಗಳೆಷ್ಟು..?
ಹಳೇ ಮೈಸೂರು ಭಾಗ – 61 ರಲ್ಲಿ 6 ಗೆಲುವು
ಉತ್ತರ ಕರ್ನಾಟಕ ಭಾಗ – 50 ರಲ್ಲಿ 16 ಗೆಲುವು
ಕರಾವಳಿ ಕರ್ನಾಟಕ – 19 ರಲ್ಲಿ 12 ಗೆಲುವು
ಮಧ್ಯ ಕರ್ನಾಟಕ – 25 ರಲ್ಲಿ 5 ಗೆಲುವು
ಬೆಂಗಳೂರು ನಗರ – 28 ರಲ್ಲಿ 15 ಗೆಲುವು
ಹೊಸಬರಲ್ಲಿ ಗೆದ್ದವರು ಯಾರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ( Congress Party ) ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ. ಅದರಲ್ಲೂ ದಾಖಲೆ ಎನ್ನುವಂತೆ 42 ಹೊಸಬರಿಗೆ ನೀಡಿದ್ದಂತ ಕ್ಷೇತ್ರಗಳಲ್ಲಿ 35 ಮಂದಿ ಗೆಲುವು ಸಾಧಿಸಿದ್ದಾರೆ.
ಇನ್ನೂ ಬಿಜೆಪಿಯಿಂದ ಗುಜರಾತ್ ಮಾಡಲ್ ಎನ್ನುವಂತೆ 75 ಮಂದಿ ಹೊಸಬರಿಗೆ ಟಿಕೆಟ್ ನೀಡಲಾಗಿತ್ತು. ಇವರಲ್ಲಿ 19 ಜನರು ಸೋಲನ್ನು ಕಂಡಿದ್ದಾರೆ.
14 ಸಚಿವರು ಮನೆ ಕಡೆ : ಇನ್ನೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಾಲಿ 14 ಸಚಿವರು ಸೋಲು ಕಂಡಿದ್ದಾರೆ. ಬಳ್ಳಾರಿ ಗ್ರಾಮೀಣದಿಂದ ಸ್ಪರ್ಧಿಸಿದ್ದಂತ ಬಿ.ಶ್ರೀರಾಮುಲು ಸೋಲು ಕಂಡಿದ್ದರೇ, ಮುಧೋಳ ಕ್ಷೇತ್ರದಿಂದ ಸ್ಪರ್ಧಿಸಿದ್ದಂತ ಗೋವಿಂದ ಕಾರಜೋಳ ಸೋತಿದ್ದಾರೆ.
ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಜೆಸಿ ಮಾಧುಸ್ವಾಮಿ, ಹಿರೆಕೆರೂರು ಕ್ಷೇತ್ರದಲ್ಲಿ ಬಿ.ಸಿ ಪಾಟೀಲ್, ನವಲಗುಂದದಲ್ಲಿ ಶಂಕರ್ ಪಾಟೀಲ್ ಮುನೇನಕೊಪ್ಪ ಹಾಲಪ್ಪ ಆಚಾರ್, ವಿ.ಸೋಮಣ್ಣ, ಡಾ. ಸುಧಾಕರ್, ಮುರಗೇಶ್ ನಿರಾಣಿ, ಕೆ.ಸಿ. ನಾರಾಯಣಗೌಡ ಸೇರಿದಂತೆ 14 ಸಚಿವರನ್ನು ಮತದಾರ ಮನೆಗೆ ಕಳುಹಿಸಿದ್ದಾನೆ.