ಕೋವಿಡ್:‌ ರಾಜ್ಯದಲ್ಲಿ ದಾಖಲಾದ 50 ಸಾವಿರ ಹೊಸ ಪ್ರಕರಣಗಳು

ಬೆಂಗಳೂರು: ಕರ್ನಾಟಕದಲ್ಲಿ ಇಂದಿನ ವರದಿಯಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್‌–19 ದೃಢಪಟ್ಟ ಹೊಸ ಪ್ರಕರಣಗಳು 50 ಸಾವಿರದ ಗಡಿ ದಾಟಿದೆ. ಇದೇ ಸಂದರ್ಭದಲ್ಲಿ ಸೋಂಕಿನಿಂದ 346 ಮಂದಿ ನಿಧನರಾಗಿದ್ದಾರೆ.

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಅತ್ಯಧಿಕ ಅಂದರೆ 50,112 ಹೊಸ ಪ್ರಕರಣಗಳು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಹೊಸದಾಗಿ ಒಂದೇ ದಿನ ಕೊರೊನಾ ಸೋಂಕು 23,106 ಪ್ರಕರಣಗಳು  ವರದಿಯಾಗಿದೆ. 161 ಮಂದಿ ನಿಧನರಾಗಿದ್ದಾರೆ.

ಇದನ್ನು ಓದಿ: ಆಕ್ಸಿಜನ್‌ಗಾಗಿ ನಿಲ್ಲದ ಹಾಹಾಕಾರ – ಕರ್ನಾಟಕದಲ್ಲಿ ಆಕ್ಸಿಜನ್‌ ಉತ್ಪಾದನೆ ಹೇಗಿದೆ?

ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನ ಒಟ್ಟು ಪ್ರಕರಣಗಳಲ್ಲಿ ಶೇ 32.28ರಷ್ಟು ಪ್ರಕರಣಗಳು ಸಕ್ರಿಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೃಢಪಡಿಸಿದೆ.

24 ಗಂಟೆಯ ಅವಧಿಯಲ್ಲಿ 26,841 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 12,36,854 ಆಗಿದೆ. ಈಗ ಪ್ರಸಕ್ತ ಸಕ್ರಿಯ ಪ್ರಕರಣಗಳ ಸಂಖ್ಯೆ 4,87,288 ಆಗಿದೆ. ರಾಜ್ಯದಲ್ಲಿ ಒಟ್ಟು  16884 ಮಂದಿ ಕೋವಿಡ್‌ ಸೋಂಕಿನಿಂದ ನಿಧನರಾಗಿದ್ದಾರೆ. ಇದುವರೆಗೆ ರಾಜ್ಯದಲ್ಲಿ ದಾಖಲಾದ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 17,41,046 ಆಗಿದೆ.

ಕಳೆದ 24 ಗಂಟೆಯ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾದ ಜಿಲ್ಲೆಗಳ ವಿವರ : ಮೈಸೂರು-2,790,  ತುಮಕೂರು-2,335, ಉಡುಪಿ-1,655, ಹಾಸನ-1,604, ಮಂಡ್ಯ-1,621, ದಕ್ಷಿಣ ಕನ್ನಡ-1,529, ಬೆಂಗಳೂರು ಗ್ರಾಮಾಂತ-1,033, ಚಿಕ್ಕಮಗಳೂರು-1,009, ಧಾರವಾಡ-1,030, ಕಲಬುರಗಿ-1,097, ಕೋಲಾರ-1,115 ಪ್ರಕರಣಗಳು ದಾಖಲಾಗಿವೆ.

Donate Janashakthi Media

Leave a Reply

Your email address will not be published. Required fields are marked *