SSLC ಪರೀಕ್ಷೆ : ಮಾದರಿ ಪ್ರಶ್ನೆ ಪತ್ರಿಕೆ ರಿಲೀಸ್ – ಹೇಗಿರಲಿದೆ ಪರೀಕ್ಷೆ?

ಬೆಂಗಳೂರು: ಈ ತಿಂಗಳ ಕೊನೆಯ ವಾರದಲ್ಲಿ ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು ವೆಬ್​ಸೈಟ್​ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯನ್ನೂ ಬಿಡುಗಡೆ ಮಾಡಲಾಗಿದೆ.  http://www.sslc.Karnataka.gov.in  ಈ ಲಿಂಕ್​​ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಲಭ್ಯವಾಗಲಿದೆ.

ಎಲ್ಲ ಅಂದುಕೊಂಡಂತೆ ಆದರೆ ಜುಲೈ 3ನೇ ವಾರ ಪರೀಕ್ಷೆ ಫಿಕ್ಸ್ ಆಗಲಿದೆ ಎನ್ನಲಾಗಿದೆ..ಇನ್ನು ಈ ಹಿಂದೆಯೇ ಸಚಿವ ಸುರೇಶ್ ಕುಮಾರ್ 20 ದಿನಗಳ ಮುಂಚೆ ಪರೀಕ್ಷೆ ದಿನಾಂಕ ಘೋಷಿಸುವುದಾಗಿ ಹೇಳಿದ್ದ್ದಾರೆ.

ಹೇಗಿರಲಿದೆ ಪರೀಕ್ಷೆ..? : ಬಹು ಆಯ್ಕೆಯ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯದ ಮೊದಲ ಪ್ರಶ್ನೆಪತ್ರಿಕೆ ಪ್ರಕಟವಾಗಿದ್ದು ತಲಾ 40 ಅಂಕಗಳ ಒಟ್ಟು 120 ಅಂಕದ ಪ್ರಶ್ನೆಗಳನ್ನ ಹೊಂದಿದೆ. ಮೂರು ಗಂಟೆಗಳ ಕಾಲ ಪರೀಕ್ಷೆ ಜರುಗಲಿದ್ದು ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳು ಬಹುಆಯ್ಕೆಯ ಪ್ರಶ್ನೆಗಳೇ ಆಗಿವೆ. ಉತ್ತರಗಳನ್ನು ಓ ಎಂ ಆರ್ ಶೀಟ್ ನಲ್ಲಿ ನಮೂದಿಸಬೇಕು ಎಂದು ಶಿಕ್ಷಣ ಇಲಾಖೆ ಹೇಳಿದ್ದು ಓ ಎಂ ಆರ್ ಶೀಟ್ ಮಾದರಿಯನ್ನೂ ಸಹ ಪ್ರಕಟಿಸಲಾಗಿದೆ.

ಇನ್ನೆರಡು ದಿನದಲ್ಲಿ ಮಾತೃಭಾಷೆ ಸೇರಿ ಮೂರು ವಿಷಯಗಳ ಪ್ರಶ್ನೆಪತ್ರಿಕೆ ಪ್ರಕಟವಾಗಲಿದ್ದು ಪ್ರಶ್ನೆಪತ್ರಿಕೆಗಳನ್ನ ವೆಬ್ ಸೈಟ್​ನಲ್ಲಿ ಡೌನ್​ಲೋಡ್ ಮಾಡಿ ಅಭ್ಯಾಸ ಮಾಡಲು ಸೂಚನೆ ನೀಡಲಾಗಿದೆ. ಶಿಕ್ಷಕರಿಗೂ ಈ ಕುರಿತು ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಲಾಗಿದೆ. ಮಾದರಿ ಪ್ರಶ್ನೆ ಪತ್ರಿಕೆ ರಿಲೀಸ್ ಮಾಡಿರೋದು ನೋಡಿದ್ರೆ ಎಸ್‌ಎಸ್‌ಎಲ್​ಸಿ ಪರೀಕ್ಷೆ ಬಹುತೇಕ ಶೀಘ್ರವೇ ಫಿಕ್ಸ್ ಆಗಲಿದೆ ಎನ್ನಲಾಗಿದೆ.

Donate Janashakthi Media

Leave a Reply

Your email address will not be published. Required fields are marked *