ಲಾಕ್ಡೌನ್ ಮಾಡಿ ಎಂದ ರಾಜ್ಯಪಾಲರು & ಕುಮಾರಸ್ವಾಮಿ, ಸೆಕ್ಷನ್ 144 ಅಷ್ಟೇ ಸಾಕು ಲಾಕ್ಡೌನ್ ಬೇಡ ಎಂದ ಸಿದ್ಧರಾಮಯ್ಯ
ಬೆಂಗಳೂರು: ಸರ್ವ ಪಕ್ಷ ಸಭೆಯ ನಂತರ ಮಾತನಾಡಿದ ಸಚಿವ ಆರ್. ಅಶೋಕ್.. ಹೆಚ್ಡಿ ಕುಮಾರಸ್ವಾಮಿ ಲಾಕ್ಡೌನ್ ಮಾಡಬೇಕು ಎಂದಿದ್ದಾರೆ. ಕಾಂಗ್ರೆಸ್ನವರು ಲಕ್ಡೌನ್ ಅಷ್ಟೇ ಪರಿಹಾರವಲ್ಲ ಎಂದಿದ್ದಾರೆ. ರಾಜ್ಯಪಾಲರು ತೀರ್ಮಾನವನ್ನ ತಕ್ಷಣವೇ ತೆಗೆದುಕೊಳ್ಳಿ ಎಂದಿದ್ದಾರೆ.
ನಾವೆಲ್ಲರೂ ಸಿಎಂ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇವೆ. ಏನು ಮಾಡಬೇಕು ಮಾಡಬಾರದೆಂದು ನಿರ್ಧರಿಸಿದ್ದೇವೆ. ಕೊರೊನಾದಿಂದ ಜನರು ತೊಂದರೆಗೆ ಸಿಲುಕಬಾರದೆಂದು ಕಠಿಣ ನಿಲುವುಗಳನ್ನು ತೆಗೆದುಕೊಳ್ಳಬೇಕಿದೆ. ಸಿಎಂ ಅನುಮೋದನೆ ಪಡೆದು ಮುಖ್ಯ ಕಾರ್ಯದರ್ಶಿ ಕ್ರಮಗಳನ್ನು ಹೊರಡಿಸಲಿದ್ದಾರೆ.
ಎಲ್ಲರೂ ಜೊತೆಯಲ್ಲಿರ್ತೇವೆ ಎಂದಿದ್ದಾರೆ. ನಾವು ಕಠಿಣ ಕ್ರಮಗಳಿಗೆ ಜನರ ಸಹಕಾರವನ್ನು ಕೇಳುತ್ತೇವೆ. ಅವರ ಸಲಹೆಗಳನ್ನ ಚರ್ಚೆ ಮಾಡಿ ಇಂಪ್ಲಿಮಂಟ್ ಮಾಡ್ತೇವೆ ಎಂದಿದ್ದಾರೆ.
ಲಾಕ್ಡೌನ್ ಮಾಡೋದಾದ್ರೆ ಮಾಡಿ : ಸರ್ವ ಪಕ್ಷ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲ ವಜೂಭಾಯ್ ವಾಲಾ ಯಾವುದೇ ರೀತಿಯ ಕಠಿಣ ಕ್ರಮವಾದರೂ ಕ್ರೈಗೊಳ್ಳಿ.. ಲಾಕ್ಡೌನ್ ಮಾಡುವುದಾದರೆ ಮಾಡಿ ಎಂದಿದ್ದಾರೆ.
ಸವಾಲುಗಳನ್ನು ನಾವು ಎದುರಿಸಬೇಕು. ಜನರು ಸಹ ಸಹಕಾರ ಮಾಡಬೇಕು. ಕಾರ್ಮಿಕರ ಬಗ್ಗೆ ಯೋಚನೆ ಮಾಡಬೇಕು. ಯಾವುದೇ ಜನರು ಹಸಿವಿನಿಂದ ಸಾಯಲ್ಲ ಅನ್ನೋ ವಿಶ್ಚಾಸ ಇದೆ. ಯಾವುದೇ ರೀತಿಯ ಕಠಿಣ ಕ್ರಮವಾದರೂ ಕ್ರೈಗೊಳ್ಳಿ. ನಮಗೆ ಬೇಕಾಗಿರುವುದು ಆರೋಗ್ಯ ಪೂರ್ಣ ಕರ್ನಾಟಕ..ಲಾಕ್ ಡೌನ್ ಮಾಡೋದಾದ್ರೆ ಮಾಡಿ ಎಂದು ವಜೂಭಾಯ್ ವಾಲಾ ಹೇಳಿದ್ದಾರೆ.
ಲಾಕ್ಡೌನ್ ಮಾಡಿ : ಕೊರೊನಾ ನಿಯಂತ್ರಣ ಹಿನ್ನೆಲೆ ನಡೆಯುತ್ತಿರುವ ಸರ್ವಪಕ್ಷ ಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಲಾಕ್ಡೌನ್ ಅನಿವಾರ್ಯ ಎಂದಿದ್ದಾರೆ.
ಎರಡನೇ ಅಲೆ ವೇಗವಾಗಿ ಹರಡುತ್ತಿದೆ..ಇದರ ಬಗ್ಗೆ ನನಗೆ ನೋವಿದೆ. ಲಾಕ್ಡೌನ್ನಿಂದ ಕೊರೊನಾ ತಹಬದಿಗೆ ಬಂದಿದೆ. ಇಂತಹ ಸಂದರ್ಭದಲ್ಲಿ ನೀವು ಎಲ್ಲರ ಅಭಿಪ್ರಾಯ ಕೇಳಲು ಮುಂದಾಗಿರುವುದು ಸ್ವಾಗತಾರ್ಹ ಎಂದು ರಾಜ್ಯಪಾಲರಿಗೆ ಧನ್ಯವಾದ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಎರಡನೇ ಆಲೆ ವೇಗವಾಗಿ ಹರಡಲಾರಂಭಿಸಿದೆ. ನಾನು ಇಂದು ಸೋಂಕಿಗೆ ಒಳಗಾಗಿದ್ದೇನೆ. ನನಗೆ ಬಹಳ ನೋವಿದೆ. ಜನರನ್ನು ಈ ಸಂದರ್ಭದಲ್ಲಿ ಕಾಪಾಡಬೇಕು. ಇವತ್ತಿನಿಂದಲೇ ಲಾಕ್ ಡೌನ್ ಮಾಡುವಂತೆ ಹೆಚ್ಡಿಕೆ ಸಲಹೆ ನೀಡಿದ್ದಾರೆ.
ಸೆಕ್ಷನ್ 144 ಸಾಕು, ಲಾಕ್ಡೌನ್ ಬೇಡ : ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ.. ನಾನು ವೈಯಕ್ತಿಕವಾಗಿ ಲಾಕ್ ಡೌನ್ ಬೇಡ ಅಂತ ಹೇಳ್ತೀನಿ.. 144ಸೆಕ್ಷನ್ ಜಾರಿ ಮಾಡಬೇಕು ಎಂದಿದ್ದಾರೆ.
ಆಕ್ಸಿಜನ್, ಐಸಿಯು ಬೆಡ್ಗಳ ತಯಾರಿ ಬಗ್ಗೆ ಸರ್ಕಾರ ಸಂಪೂರ್ಣ ವಿಫಲವಾಗಿದೆ. ತಜ್ಞರ ವರದಿ ಬಂದು ಮೂರು ತಿಂಗಳಾಗಿತ್ತು.. ಆದ್ರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಕೊರೊನಾ ಕರ್ಫ್ಯೂದಿಂದ ಏನೂ ಪ್ರಯೋಜನ ಇಲ್ಲ. 144ಸೆಕ್ಷನ್ ಜಾರಿ ಮಾಡಬೇಕು. ಗುಂಪು ಸೇರಿದರೆ ಕೊರೊನಾ ಹರಡುತ್ತದೆ. ತಜ್ಞರು ಏನ್ ಶಿಫಾರಸು ಮಾಡ್ತಾರೋ ಅದನ್ನು ಸರ್ಕಾರ ಕಟ್ಟು ನಿಟ್ಟಾಗಿ ಮಾಡಬೇಕು. ನಾನು ವೈಯಕ್ತಿಕವಾಗಿ ಲಾಕ್ ಡೌನ್ ಬೇಡ ಅಂತ ಹೇಳ್ತೀನಿ. ರಾಜ್ಯದ ಬೀದರ್, ಕಲಬುರಗಿ, ಬೆಳಗಾವಿ, ತುಮಕೂರು, ಮೈಸೂರು ಕೊರೊನಾ ಕಂಟ್ರೋಲ್ಗೆ ಬರಲೇ ಇಲ್ಲ ಎಂದಿದ್ದಾರೆ.
ಸಚಿವ ಸಂಪುಟದಲ್ಲಿ ಅಂತಿಮ ತೀರ್ಮಾನ : ಸರ್ವಪಕ್ಷ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ,
ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಅನೇಕ ಸಲಹೆ ಕೊಟ್ಟಿದ್ದಾರೆ.. ನಿಮ್ಮ ಸಲಹೆ ಕಾರ್ಯರೂಪಕ್ಕೆ ತರುವ ವ್ಯವಸ್ಥೆ ಮಾಡುತ್ತೇವೆ. ಕೆಲವೇ ಗಂಟೆಗಳಲ್ಲಿ ಲಾಕ್ ಡೌನ್, ಜೊತೆಗೆ ಟಫ್ರೂಲ್ಸ್ ಸೇರಿದಂತೆ ತಜ್ಞರ ಸಲಹೆ ಮೇರೆಗೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಡಿ.ಕೆ ಶಿವಕುಮಾರ್ ,ಮುಖ್ಯಕಾರ್ಯದರ್ಶಿಗಳು, ತಾಂತ್ರಿಕ ಸಲಹಾ ಸಮಿತಿಯ ತಜ್ಞರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.