ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ ಸೆಪ್ಟೆಂಬರ್ 27 ಕ್ಕೆ ಕರ್ನಾಟಕ ಬಂದ್

ಬೆಂಗಳೂರು : ಸೆಪ್ಟೆಂಬರ್ 27 ರ ಕರ್ನಾಟಕ ಬಂದ್ ಕುರಿತ ರಾಜ್ಯ ಮಟ್ಟದ ಸಮಾಲೋಚನಾ ಸಭೆಯನ್ನು ಸಂಯುಕ್ತ ಹೋರಾಟ ಕರ್ನಾಟಕ ದಿಂದ ಬುಧವಾರ ದಂದು ನಡೆಸಲಾಯಿತು.

ಬೆಂಗಳೂರಿನ ಪ್ರೀಡಂ ಪಾರ್ಕ್ ಒಳಾವರಣದಲ್ಲಿ ನಡೆದ ಸಭೆಯಲ್ಲಿ ಬಂದ್ ಕುರಿತು ಚರ್ಚೆ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ರಾಜ್ಯದ ಎಲ್ಲಾ ಪ್ರಮುಖ ರೈತ ಸಂಘಟನೆಗಳು , ಕರ್ನಾಟಕ ರಕ್ಷಣಾ ವೇದಿಕೆ ,ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ, ಯುವಜನ ಮಹಿಳಾ ಸಂಘಟನೆಗಳು ಸೇರಿದಂತೆ 80 ಕ್ಕೂ ಹೆಚ್ಚು ಸಂಘಟನೆಗಳು ಸಭೆಯಲ್ಲು
ಭಾಗವಹಿಸಿದ್ದವು.

ಸೆಪ್ಟೆಂಬರ್ 27 ರ ದೆಹಲಿ ರೈತ ಹೋರಾಟ ಸಂಯುಕ್ತ ಕಿಸಾನ್ ಮೋರ್ಚಾ ದ ಕರೆಯನ್ನು ಕರ್ನಾಟಕ ದಲ್ಲೂ ಯಶಸ್ವಿ ಗೊಳಿಸಲು ಒಗ್ಗಟಿನ ತೀರ್ಮಾನ ತೆಗೆದುಕೊಳ್ಳಲಾಯಿತು.

ಸಭೆಯು ಕರ್ನಾಟಕ ಬಂದ್ ಗೆ ಪೂರ್ವ ತಯಾರಿಯಾಗಿ ದಿನಾಂಕ 19-9-21 ರ ಬೆಳಗ್ಗೆ ಎಲ್ಲಾ ಜಿಲ್ಲೆ/ತಾಲ್ಲೂಕು ಗಳಲ್ಲಿ ಜಂಟಿ ಸಭೆ ನಡೆಸಲು ಹಾಗೂ ಅದೇ ದಿನ ಆನ್ ಲೈನ್ ಮೂಲಕ ರಾಜ್ಯ ಮಟ್ಟದ ಬಹಿರಂಗ ಸಭೆ ಸಂಘಟಿಸಲು ಹಾಗೂ ದಿನಾಂಕ 21-9-21 ಮಂಗಳವಾರ ರಾಜ್ಯಾದ್ಯಂತ ಎಲ್ಲಾ ತಾಲ್ಲೂಕು/ಜಿಲ್ಲಾ ಕೇಂದ್ರಗಳಲ್ಲಿ ಬಂದ್ ಬೆಂಬಲಿಸಿ ಧರಣಿ/ಮೆರವಣಿಗೆ/ಬೈಕ್ ಜಾಥಾ ಮುಂತಾದ ಚಟುವಟಿಕೆಗಳನ್ನು ಸಂಘಟಿಸಲು ತೀರ್ಮಾನಿಸಿತು.

ಸಭೆಯಲ್ಲಿ ಎಸ್ ಕೆ ಎಂ ನ ನಾಯಕಿ ಕವಿತಾ ಕುರುಗಂಟಿ, ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಚಾಮರಸ ಮಾಲೀ ಪಾಟೀಲ್, ಮೈಕೆಲ್ ಫರ್ನಾಂಡೀಸ್, ಜಿಸಿ ಬಯ್ಯಾರೆಡ್ಡಿ, ಎಸ್ ಆರ್ ಹಿರೇಮಠ, ಬಡಗಲಪುರ ನಾಗೇಂದ್ರ, ಮಾಜಿ ಶಾಸಕರುಗಳಾದ ಬಿಆರ್ ಪಾಟೀಲ್ ,ಎಂಪಿ ನಾಡಗೌಡ , ಜಿಎನ್ ನಾಗರಾಜ್, ಮಾವಳ್ಳಿ ಶಂಕರ್ ನೂರ್ ಶ್ರೀಧರ್, ಎಸ್ ವರಲಕ್ಷ್ಮಿ , ಮೀನಾಕ್ಷಿ ಸುಂದರಂ, ಎಚ್ ವಿ ದಿವಾಕರ್ ,ದೇವಿ, ಪ್ರಮುಖರಾದ ಪ್ರವೀಣ್ ಕುಮಾರ್ ಶೆಟ್ಟಿ, ಸಾರಾ ಗೋವಿಂದ್ ,ಡಾ.ಪ್ರಕಾಶ್ ಕಮ್ನರಡಿ , ಹೆಚ್ ಆರ್ ಬಸವರಾಜಪ್ಪ, ಮಹದಾಯಿ ರೈತ ಹೋರಾಟದ ಶಂಕರ್ ಆರ್ ಅಂಬಲಿ ,ಜಿಜಿ ಹಳ್ಳಿ ನಾರಾಯಣಸ್ವಾಮಿ, ,ಡಿಹೆಚ್ ಪೂಜಾರ್, ಮುಂತಾದವರು ಸಭೆಯಲ್ಲಿ ಭಾಗವಹಿಸಿ ಮಾತಾನಾಡಿದರು.

ಕೋಲಾರ : ಕೋಲಾರ: ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 27 ರಂದು ಭಾರತ್ ಬಂದ್ ಗೆ ಕರೆ ನೀಡಿದ್ದು ಆದರ ಪೂರ್ವಭಾವಿಯಾಗಿ ಬಂದ್ ರೂಪರೇಷೆಗಳನ್ನು ಚರ್ಚಿಸಲು ನಗರದ ಸರಕಾರಿ ನೌಕರರ ಭವನದಲ್ಲಿ ಬುಧವಾರ ವಿವಿಧ ಪ್ರಗತಿಪರ ಸಂಘಟನೆಯ ನೇತೃತ್ವದಲ್ಲಿ ಸಭೆ ನಡೆಸಿದರು.

ದೇಶದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್‌ ಬಂದ್‌ಗೆ ಸುಮಾರು ಸಂಘಟನೆಗಳು ಬೆಂಬಲ ಘೋಷಣೆ ಮಾಡಿದ್ದು ಕೇಂದ್ರ ಸರಕಾರದ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ ಗಾಳಿ ಮಳೆ ಚಳಿ ಎನ್ನದೇ ಒಂದು ವರ್ಷ ಪೂರ್ಣಗೊಳಿಸುತ್ತಿದೆ. ಆದ್ದರಿಂದ ಸಂಘಟನೆಗಳು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಈ ತೀರ್ಮಾನ ಕೈಗೊಂಡಿವೆ.ಕೇಂದ್ರದ ನರೇಂದ್ರ ಸರಕಾರಕ್ಕೆ ರೈತರ ಶಕ್ತಿ ಏನೆಂದು ತೋರಿಸಬೇಕಾಗಿದೆ ಎಂದರು.

ದೆಹಲಿ ಹೊರವಲಯದಲ್ಲಿ ರೈತರ ಕೃಷಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿದ್ದಾರೆ.ಕೇಂದ್ರ ಸರಕಾರ ಬಹುತೇಕ ಸಚಿವರು ದೆಹಲಿಯಲ್ಲಿ ಇದ್ದರು ಹೋರಾಟ ಸ್ಥಳಕ್ಕೆ ಭೇಟಿ ಕೊಡುತ್ತಾ ಇಲ್ಲ ರೈತರ ಮೇಲೆ ದಾಳಿ ದಬ್ಬಾಳಿಕೆ ಮಾಡುವುದು ಸರಕಾರದ ಸಾಧನೆಯಾಗಿದೆ ಸರಕಾರ ಕೂಡಿ ಕಾಯ್ದೆಯಲ್ಲಿ ತಿದ್ದುಪಡಿ ತರುವುದು ಬೇಡ. ಸಂಪೂರ್ಣ ರದ್ದು ಮಾಡುವಂತೆ ರೈತ ಸಂಘಟನೆಗಳು ಒತ್ತಾಯವಾಗಿದೆ ಸರಕಾರವು ರೈತ ಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಜೊತೆ ನಡೆಸಿದ ಸಭೆಗಳು ವಿಫಲವಾಗಿವೆ ಬೇಡಿಕೆಗಳನ್ನು ಈಡೇರಿಸುವ ವರೆಗೂ ನಾವು ವಾಪಸ್ಸು ಹೋಗುವುದಿಲ್ಲ ಎಂದು ರೈತರು ನಿರ್ಣಯ ತೆಗೆದುಕೊಂಡಿದ್ದಾರೆ ಅವರ ಹೋರಾಟಕ್ಕೆ ನಾವು ಎಲ್ಲರೂ ಬೆಂಬಲಿಸಬೇಕಾಗಿದೆ ಎಂದರು.

ದೇಶದಲ್ಲಿ ನಡೆಯುತ್ತಾ ಇರುವ ಇಂತಹ ಚಾರಿತ್ರಿಕ ಹೋರಾಟದ ಭಾಗವಾಗಿ ರಾಷ್ಟ್ರವ್ಯಾಪಿ ಬಂದ್ ನ್ನು ಯಶಸ್ವಿಗೊಳಿಸಲು, ರೈತ ಸಂಘಟನೆಗಳು ಟ್ರೇಡ್ ಯೂನಿಯನ್, ಕನ್ನಡಪರ ಸಂಘಟನೆಗಳು,ಮಹಿಳಾ, ವಿಧ್ಯಾರ್ಥಿ, ಯುವಜನ ಸಂಘಟನೆಗಳು, ಸಾರಿಗೆ ನೌಕರರ ಸಂಘಟನೆಗಳು ಮತ್ತು ವ್ಯಾಪಾರಸ್ಥರು, ಪಕ್ಷಬೇಧ ಮರೆತು ರೈತರ ಬೇಡಿಕೆಗಳಿಗೆ ಧ್ವನಿಯಾಗುವಂತೆ ಒತ್ತಾಯಿಸಬೇಕಾಗಿದೆ ಎಂದು ಸಭೆಯಲ್ಲಿ ಚರ್ಚೆ ಮಾಡಿದರು.

ರೈತರ ಹೋರಾಟಕ್ಕೆ ಬೆಂಬಲವಾಗಿ ವ್ಯಾಪಕವಾಗಿ ಜನರ ರೈತರ ಮಧ್ಯೆ ಕರಪತ್ರಗಳನ್ನು ಹಂಚುವ ಮೂಲಕ ಪ್ರಚಾರ ಮಾಡಿ ರೈತರಿಗೆ ಈ ಕಾಯಿದೆಯಿಂದ ಆಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಜಿಲ್ಲೆಯಲ್ಲಿ ಬಂದ್ ಯಶಸ್ವಿಗೊಳಿಸಲು ತಾಲೂಕು ಮಟ್ಟದ ಸಮಾವೇಶ ಮಾಡಿ ಸೆಪ್ಟೆಂಬರ್ 18 ರಂದು ಜಿಲ್ಲಾ ಮಟ್ಟದ ಸಮಾವೇಶವನ್ನು ಕೋಲಾರದಲ್ಲಿ ನಡೆಸಲಾಗುತ್ತದೆ ಎಂದರು ದೇಶವನ್ನು ಉಳಿಸಿ ರೈತರನ್ನು ಉಳಿಸುವ ಸಲುವಾಗಿ ಪ್ರತಿಯೊಬ್ಬರೂ ಈ ಬಂದ್ ನಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು

ಈ ಸಭೆಯಲ್ಲಿ ಸಂಯುಕ್ತ ಹೋರಾಟದ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಊರುಬಾಗಿಲು ಶ್ರೀನಿವಾಸ್, ಪುಟ್ಟಣ್ಣಯ್ಯ ರೈತ ಸಂಘದ ಮರಗಲ್ ಶ್ರೀನಿವಾಸ್, ಕೋಟಿಗಾನಹಳ್ಳಿ ಗಣೇಶ್ ಗೌಡ, ಪಿ.ಆರ್ ಸೂರ್ಯನಾರಾಯಣ, ಟಿ.ಎಂ ವೆಂಕಟೇಶ್, ಸಲ್ಲಾವುದ್ದೀನ್ ಬಾಬು, ಹೂಹಳ್ಳಿ ನಾಗರಾಜ್, ಪಿ.ವಿ ರಮಣ್ ಸೇರಿದಂತೆ ಅನೇಕರಿದ್ದರು.

Donate Janashakthi Media

Leave a Reply

Your email address will not be published. Required fields are marked *