ಕಾರ್ಮಿಕರು ವೈಜ್ಞಾನಿಕ ಅರಿವು ರೂಢಿಸಿಕೊಳ್ಳಬೇಕು

ಬೆಂಗಳೂರು: ದುಡಿಯುವ ಕಾರ್ಮಿಕ ವರ್ಗದ ಮಧ್ಯೆ ವೈಜ್ಞಾನಿಕ ಅರಿವಿನ ಮೂಲಕ ಜಾಗೃತಿಯನ್ನು ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 20ರಂದು ವಿಚಾರವಾದಿ ದಾಬೋಲ್ಕರ್ ಹತ್ಯೆಯಾದ ದಿನದ ಅಂಗವಾಗಿ ಮೌಢ್ಯವಿರೋಧಿ ಹಾಗೂ ವೈಜ್ಞಾನಿಕ ಮನೋವೃತ್ತಿ ದಿನವನ್ನಾಗಿ ದೇಶದೆಲ್ಲೆಡೆ ಪ್ರಗತಿಪರರು ವಿಚಾರವಾದಿಗಳು ಆಚರಿಸುತ್ತಿದ್ದಾರೆ.

ಅದರ ಅಂಗವಾಗಿ ಬೆಂಗಳೂರಿನಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್(ಸಿಡಬ್ಲ್ಯೂಎಫ್‌ಐ) ಉತ್ತರ ಮತ್ತು ರಾಜಾಜಿನಗರ ವಲಯಗಳು ಜಂಟಿಯಾಗಿ ವಿಜ್ಞಾನ ಮತ್ತು ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಲು ಶ್ರಮಿಸಿದ ಹೆಚ್. ನರಸಿಂಹಯ್ಯ ಹಾಗೂ ಪುರುಷೋತ್ತಮ್ ಕಲಾಲಬಂಡಿ ನೆನಪಿನಲ್ಲಿ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಿಗೆ ವೈಜ್ಞಾನಿಕ ಚಿಂತನೆ ಮತ್ತು ಪವಾಡಗಳ ಹಿಂದಿರುವ ರಹಸ್ಯ ಕುರಿತಾಗಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಇಎಂಎಸ್ ಭವನದಲ್ಲಿ ಆಯೋಜಿಸಿತ್ತು.

ಪವಾಡ ರಹಸ್ಯ ಬಯಲು ಕಾರ್ಯಕ್ರಮವನ್ನು ವೈಜ್ಞಾನಿಕ ಚಳವಳಿಯ ಕಾರ್ಯಕರ್ತ ಕೆ.ಎಸ್.ಲವಕುಮಾರ್ ಹಾಗೂ ರಂಗನಾಥ ರಾವ್ ನಡೆಸಿಕೊಟ್ಟರು. ಕಾರ್ಮಿಕರು ವಿಜ್ಞಾನ ಮತ್ತು ವೈಜ್ಞಾನಿಕ ಪ್ರಜ್ಞೆ ಹೇಗೆ ಮತ್ತು ಏಕೆ ಬೆಳೆಸಿಕೊಳ್ಳಬೇಕು ಎನ್ನುವ ಕುರಿತಾಗಿ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಮಾತನಾಡಿದರು. ವಿಜ್ಞಾನ ಹಾಗೂ ವೈಚಾರಿಕತೆ ಗೀತೆಗಳನ್ನು ವಿಜ್ಞಾನ ಚಳವಳಿಯ ನಾಯಕರಾದ ಈ ಬಸವರಾಜು ಹಾಡಿದರು.

ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರಾದ ಹರೀಶ ಕುಮಾರ್,  ಎನ್‌.ಪಾರ್ಥಿಬನ್, ಎನ್.ನೀಲಕಂಠ ಮೇಸ್ತ್ತೀ, ರವಿಕುಮಾರ್, ಮಹಿಳಾ ಸಂಘಟನೆಯ ಗೀತಾ ರವಿಕುಮಾರ್, ಎಸ್.ಎಫ್.ಐ. ಮುಖಂಡರಾದ ಭೀಮನಗೌಡ, ಜನಶಕ್ತಿ ಪತ್ರಿಕೆಯ ನಾಗರಾಜ್, ಇಎಂಎಸ್ ಭವನದ ಮೋನಪ್ಪ ಹಾಗೂ ಸುಮಾರು ಐವತ್ತಕ್ಕಿಂತ ಅಧಿಕ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.

Donate Janashakthi Media

One thought on “ಕಾರ್ಮಿಕರು ವೈಜ್ಞಾನಿಕ ಅರಿವು ರೂಢಿಸಿಕೊಳ್ಳಬೇಕು

Leave a Reply

Your email address will not be published. Required fields are marked *