ರಾಮನಗರ : ಟೊಯೋಟಾ ಆಡಳಿತಾಧಿಕಾರಿಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ , ಕಾರ್ಮಿಕರ ಮೇಲಿನ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ, ಇಂದು ಟೊಯೋಟಾ ಕಾರ್ಮಿಕರ ಸಂಘಟನೆ ವತಿಯಿಂದ ಅಧ್ಯಕ್ಷರಾದ ಪ್ರಸನ್ನ ರವರ ನೇತೃತ್ವದಲ್ಲಿ 40ನೇ ದಿನದ ಹೋರಾಟದ ಭಾಗವಾಗಿ ರಾಮನಗರ ಜಿಲ್ಲಾಧಿಕಾರಿಗೆ ಕಛೇರಿ ಮುತ್ತಿಗೆ ಹಾಕಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಪ್ರಮುಖ ರೈತ ಸಂಘಟನೆಗಳು, ಹಿರಿಯ ರೈತ ನಾಯಕರುಗಳು, ಕನ್ನಡ ಪರ ಸಂಘಟನೆಗಳು, ಸಿಐಟಿಯು ಒಳಗೊಂಡಂತೆ ರಾಜ್ಯದ ವಿವಿಧ ಕಾರ್ಮಿಕ ಸಂಘಟನೆಗಳು, ಬಿಡದಿ ಕೈಗಾರಿಕಾ ಪ್ರದೇಶದ ಅನೇಕ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, BSP ಮುಖಂಡರು, ಇನ್ನೂ ಅನೇಕ ಸಂಘಟನೆಗಳು TKMEU ಕಾರ್ಮಿಕರ ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ.
ಬಿಎಸ್ಪಿ ರಾಜ್ಯಾಧ್ಯಕ್ಷರಾದ ಕೃಷ್ಣಮೂರ್ತಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಆದಷ್ಟು ಬೇಗ ಸಮಸ್ಯೆ ಬಗೆಹರಿಸದಿದ್ದರೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು ಹಾಗೂ ಕಾರ್ಮಿಕರು ರಕ್ತ ಚಳುವಳಿ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುವುದಾಗಿ ಎಚ್ಚರಿಸಿದರು. ರಾಜ್ಯ ಸರ್ಕಾರ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವ ಕಾರ್ಮಿಕ ಸಂಘವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದರು.
ಇನ್ನು ಮಾರಸಂದ್ರ ಮುನಿಯಪ್ಪ ಮಾತನಾಡಿ 80 ಪರ್ಸೆಂಟ್ ರಾಜಕಾರಣಿಗಳು ಮತಪಡೆದು ಈಗ ನಿದ್ರಿಸುತ್ತಿದ್ದಾರೆ ಎಚ್ಚೆತ್ತು ರೈತರ ದಲಿತರ ಕಾರ್ಮಿಕರ ಸಮಸ್ಯೆ ಬಗೆಹರಿಸದಿದ್ದರೆ ಯಾವುದೇ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು. ಕೇಂದ್ರ ಸರ್ಕಾರದ ಖಾಸಗೀಕರಣವೇ ಇದಕ್ಕೆ ಕಾರಣ ಸರ್ಕಾರ ಖಾಸಗೀಕರಣವನ್ನು ಕೈಬಿಟ್ಟು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಬಾರದು ಎಐಟಿಯುಸಿ ರಾಜ್ಯಾಧ್ಯಕ್ಷ ಅಪ್ಪಣ್ಣ ಮಾತನಾಡಿ 44 ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ 4 ಸಂಹಿತೆ ಗಳಾಗಿ ಮಾಡಿರುವುದು ದುರಾದೃಷ್ಟ ಈ ಕಾಯ್ದೆ ವಾಪಸ್ ಆಗಲೇಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು. ವಿದೇಶಿ ಕಂಪನಿಗಳು ಭಾರತದ ಕಾನೂನುಗಳಿಗೆ ಬೆಲೆಕೊಟ್ಟು ಗೌರವಿಸಬೇಕು ಇಲ್ಲವಾದರೆ ನಮ್ಮ ನೆಲ, ಜಲ, ವಿದ್ಯುತ್ ವಾಪಸ್ ಪಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಮನಗರ ರೈತ ಸಂಘದ ಜಿಲ್ಲಾಧ್ಯಕ್ಷರಾದ ಬೈರೇಗೌಡರು ಮಾತನಾಡಿ ದುಡಿಯುವ ಕೈಗಳು ದೇಶಕ್ಕೆ ಆಧಾರ ರೈತರ ಕಾರ್ಮಿಕರ ಸಮದಿಂದ ದೇಶ ನಡೆಯುತ್ತಿದೆ ಅವರಿಗೆ ಅನ್ಯಾಯವಾದರೆ ರೈತ ಸಂಘ ಸದಾ ಅವರ ಬೆಂಬಲಕ್ಕೆ ನಿಲ್ಲುತ್ತದೆ ಶೀಘ್ರವಾಗಿ ಸಮಸ್ಯೆ ಬಗೆಹರಿಯದಿದ್ದರೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ರಾಜ್ಯದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ ಕಾರ್ಮಿಕರ ಸಮಸ್ಯೆ ಬಗೆಹರಿಯದಿದ್ದರೆ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಜಿಗಣೆ ಕಾರ್ಮಿಕ ಸಂಘದ ಒಕ್ಕೂಟ ಸಂಪೂರ್ಣ ಬೆಂಬಲ ನೀಡಿತು federal-mogul ಕಾರ್ಮಿಕ ಸಂಘಟನೆ ತನ್ನ ಸಂಪೂರ್ಣ ಬೆಂಬಲ ನೀಡಿತು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಉಮೇಶ್ ಮಾತನಾಡಿ ಜಿಲ್ಲಾಧಿಕಾರಿಗಳು ನಿದ್ದೆಯಿಂದ ಎದ್ದು ತಮ್ಮ ಕಾರ್ಯದಲ್ಲಿ ತೊಡಗಬೇಕು ಕಂಪನಿಯ ಆಡಳಿತ ವರ್ಗಕ್ಕೆ ಬುದ್ಧಿ ಹೇಳಬೇಕು ಎಂದು ಎಚ್ಚರಿಸಿದರು.
ಟೊಯೋಟೊ ಕಾರ್ಮಿಕ ಸಂಘದ ಅಧ್ಯಕ್ಷರಾದ ಪ್ರಸನ್ನಕುಮಾರ್ ಚಕ್ಕೆರೆ ಅವರು ಮಾತನಾಡಿ ಶೀಘ್ರವಾಗಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು ಇದು ಕೇವಲ ನಮ್ಮ ಸಮಸ್ಯೆ ಮಾತ್ರ ಅಲ್ಲ ದೇಶದ ಎಲ್ಲಾ ಬಹುರಾಷ್ಟ್ರೀಯ ಕಂಪನಿಗಳ ಸಮಸ್ಯೆ ಕಾರ್ಮಿಕರನ್ನು ಯಂತ್ರದಂತೆ ದುಡಿಸಿ ಐದತ್ತು ವರ್ಷಗಳಲ್ಲಿ ಮನೆಗೆ ಕಳುಹಿಸುತ್ತಿದ್ದಾರೆ. ಈ ಶೋಷಣೆ ನಿಲ್ಲಬೇಕಿದೆ ದೇಶದ ಕಾನೂನುಗಳು ಬಲಿಷ್ಠವಾಗಿದ್ದರೆ ನಮ್ಮ ಕಂಪನಿಯ ಆಡಳಿತ ವರ್ಗ ಯಾವುದೇ ಕಾನೂನುಗಳಿಗೆ ಬೆಲೆ ಕೊಡದೆ ಸರ್ಕಾರದ ಮಾತಿಗೂ ಬೆಲೆ ಕೊಡದೆ ಕಾರ್ಮಿಕರನ್ನು ಬೀದಿಗೆ ತಳ್ಳಿವೆ. ಜಿಲ್ಲಾಧಿಕಾರಿಗಳು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಜಿಲ್ಲಾ ಅಪಾರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಮನವಿ ಸ್ವೀಕಾರ ಮಾಡಿದ ಅಪಾರ ಜಿಲ್ಲಾಧಿಕಾರಿ ಜವರೇಗೌಡರು ಶೀಘ್ರದಲ್ಲೇ ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.