ಕಾರ್ಮಿಕರ ಹಕ್ಕುಗಳನ್ನು ದಮನಿಸಲಾಗುತ್ತಿದೆ – ಲಿಂಗರಾಜು

ಬೆಂಗಳೂರು :  ಸಿಐಟಿಯುನ 17 ನೇ ಅಖಿಲ ಭಾರತ ಸಮ್ಮೇಳನದ ಭಾಗವಾಗಿ ಜನವರಿ 07 ರಿಂದ ಕಲಾ ಜಾಥಾ ಆರಂಭಗೊಂಡಿದೆ. ಇಂದು ಬಸವನಗುಡಿಯ ಎನ್ ಆರ್ ಕಾಲೋನಿಯ ಬಸ್ ನಿಲ್ದಾಣದ ಮುಂಭಾಗ ಕಾರ್ಮಿಕರು ಜಾಥಾವನ್ನು ಸ್ವಾಗತಿಸಿದರು. ಕ್ರಾಂತಿಗೀತೆಗಳ ಮೂಲಕ ಜಾಥಾದ ಮಹತ್ವವನ್ನು ಸಾರಲಾಯಿತು.

ಜಾಥಾ ಉದ್ದೇಶಿಸಿ, ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಲಿಂಗರಾಜು ಮಳವಳ್ಳಿ ಮಾತನಾಡಿ,  ಕೇಂದ್ರ ರಾಜ್ಯ ಸರಕಾರಗಳು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ. ಕೇಂದ್ರ ಸರಕಾರ 29 ಕಾರ್ಮಿಕರ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಮಿಕ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಇದರಿಂದಾಗಿ ಕಡಿಮೆ ಕೆಲಸ ಮಾಡುವ ಕಾರ್ಮಿಕರಿರುವ ಕಾರ್ಖಾನೆಗಳು ಮುಚ್ಚಬಹುದು. ಮನಸೋ ಇಚ್ಛೆ ದುಡಿಸಿಕೊಳ್ಳಬಹುದು ಕೆಲಸದಿಂದ ತೆಗೆದುಹಾಕಬಹುದು. ಅಸಂಘಟಿತ ವಲಯದ ಕಾರ್ಮಿಕರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ, ಹಸಿವು, ಅಪೌಷ್ಟಿಕತೆಯಿಂದ ದೇಶದ ಜನ ನರಳುತ್ತಿದ್ದಾರೆ ಎಂದರು.

ಜಿಲ್ಲಾ ಮುಖಂಡ ಎ.ಎಂ. ರವಿಚಂದ್ರ ಮಾತನಾಡಿ, ಸಿಐಟಿಯುನ 17 ನೇ ರಾಜ್ಯ ಸಮ್ಮೇಳನ ಜನವರಿ 18 ರಿಂದ 22 ರವರೆಗೆ ನಡೆಯಲಿದೆ. ಕಾರ್ಮಿಕರ ಹಕ್ಕುಗಳ ರಕ್ಷಣೆ ಹಾಗೂ ಸಂಘಟನೆ ಬಲಪಡಿಸುವ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ.  22 ರಂದು ನ್ಯಾಶನಲ್‌ ಕಾಲೇಜಿನಲ್ಲಿ ಬಹಿರಂಗ ಸಭೆ ನಡೆಯಲಿದ್ದು 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿಜನಪರ ನೀತಿಗಳಿಗಾಗಿ ಆಗ್ರಹಿಸಿ ಕಾರ್ಮಿಕರ ಅಖಿಲ ಭಾರತ ಸಮ್ಮೇಳನ

 

ಇದೇ ವೇಳೆ “ಮೂರು ಮಗ್ಗುಲ ಮುಳ್ಳು” ಎಂಬ ಬೀದಿ ನಾಟಕವನ್ನು ಬೆಂಗಳೂರು ಸಮುದಾಯದವರು ಅಭಿನಯಿಸಿದರು. ಬೀದಿ ನಾಟಕದ ಉದ್ದೇಶವನ್ನು ನಾಟಕ ರಚನೆಕಾರರಾದ ಬಿ.ಆರ್‌. ಮಂಜುನಾಥ್‌ ವಿವರಿಸಿದರು. ಬೆಂಗಳೂರು ಸಮುದಾಯ ಕಾರ್ಯದರ್ಶಿ ಕಾವ್ಯಾ ಅಚ್ಯುತ್ ನಾಟಕಕ್ಕೆ ಜನರಿಂದ ಬರುತ್ತಿರುವ ಸ್ಪಂದನೆಯ ಕುರಿತು ವಿವರಿಸಿದರು.

ಈ ವೇಳೆ ರಂಗ ನಿರ್ದೇಶಕ ಶಶಿಧರ್ ಬಾರಿಘಾಟ್‌, ಸಿಐಟಿಯು ಮುಖಂಡರಾದ ಬಸಮ್ಮ, ಲತಾ, ಶ್ರೀನಿವಾಸ, ಪಾರ್ವತಿ, ಉಮಾ, ಸುನೀಲ್‌ ಕುಮಾರ್‌, ದೇವಿಕಾ, ಮಾದೇವಿ, ಎಸ್‌ಎಫ್‌ಐ ಮುಖಂಡರಾದ ದಿಲಿಪ್‌ ಶೆಟ್ಟಿ, ಅಭಿಷೇಕ್‌, ಭೀಮನಗೌಡ, ಸಮುದಾಯ ಬೆಂಗಳೂರು ಖಜಾಂಚಿ ಲವನಿಕಾ ಇದ್ದರು.

 

 

Donate Janashakthi Media

Leave a Reply

Your email address will not be published. Required fields are marked *