ಬೆಂಗಳೂರು : ಕಾರ್ಮಿಕ ನಾಯಕ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎನ್ ಶಿವಣ್ಣ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಕಾರ್ಮಿಕ ಸಂಘಟನೆಗಳು, ಜನಪರ ಸಂಘಟನೆಗಳು ಸಂತಾಪ ಸೂಚಿಸಿವೆ.
ಎನ್. ಶಿವಣ್ಣ ಅವರು ತುಮುಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಮತ್ತು ಹತ್ತಾರು ಕಾರ್ಖಾನೆಯ ನಾಯಕರಾಗಿ ಸೇವೆಸಲ್ಲಿಸಿದ್ದರು. ಇವರು ಸಿಪಿಐ ಪಕ್ಷದ ಮುಂದಾಳು ಕೂಡ ಆಗಿದ್ದರು. ಅಸಂಘಟಿತ ಕ್ಷೇತ್ರಗಳಾದ ಕಟ್ಟಡ,ಆಂಗನವಾಡಿ, ಬಿಸಿಯೂಟ. ಮತ್ತಿತರ ಕಾರ್ಮಿಕರ ಹಕ್ಕು ,ಮೂಲ ಸೌಲಭ್ಯಗಳಿಗಾಗಿ ದುಡಿಯುತ್ತಿದ್ದರು.
ಶಿವಣ್ಣನವರ ಸಾವು ಕಾರ್ಮಿಕರ ಚಳುವಳಿಗೆ ದೊಡ್ಡ ನಷ್ಟವನ್ನು ಉಂಟುಮಾಡಿದೆ.ತಮ್ಮ ಜೀವನದ ಹೆಚ್ಚುಸಮಯವನ್ನು ಕಮ್ಯೂನಿಸ್ಟ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದು ಹಾಗೂ ರೈತ- ಕಾರ್ಮಿಕರ ಹಕ್ಕುಗಳಿಗೆ, ಮತ್ತು ಕೋಮು ಸೌರ್ಹಾಧತೆಗಾಗಿ, ಸಮಾನತೆ, ಸಮಾಜದ ಸಮತೋಲನಕ್ಕಾಗಿ ಪ್ರತಿ ದಿನವು ದುಡಿಯುತ್ತಿದ್ದರು ಎಂದು ಸಿಐಟಿಯು ರಾಜ್ಯ ಸಮತಿ ಶ್ರದ್ಧಾಂಜಲಿ ಅರ್ಪಿಸಿದೆ.