ಕಾರ್ಮಿಕ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದ ಕಟ್ಟಡ ಕಾರ್ಮಿಕರು

ಹುಬ್ಬಳ್ಳಿ: ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಿತರಿಸಲಾಗುತ್ತಿರುವ ರೇಷನ್ ಕಿಟ್‌ಗಳನ್ನು ಬಳಸಿಕೊಂಡು ಸ್ಥಳೀಯ ಶಾಸಕರು ತಮ್ಮ ಬೆಂಬಲಿಗರ ಮುಖಾಂತರ ತಮಗೆ ಬೇಕಾದವರಿಗೆ ವಿತರಿಸಲಾಗುತ್ತಿದ್ದು ಖಂಡಿಸಿ ಕಟ್ಟಡ ಕಾರ್ಮಿಕರು ನ್ಯೂ ಕಾಟನ್ ಮಾರುಕಟ್ಟೆಯಲ್ಲಿರುವ ಸಹಾಯಕ ಕಾರ್ಮಿಕರ ಕಛೇರಿ ಮತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಇದನ್ನು ಓದಿ: ಆಹಾರ ಕಿಟ್ ಅವ್ಯವಹಾರ ತನಿಖೆಗೆ ಕಟ್ಟಡ ಕಾರ್ಮಿಕರ ಆಗ್ರಹ: ಪ್ರತಿಭಟನಾಕಾರರ ಬಂಧನ

ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರೇಷನ್ ಕಿಟ್ ಅನ್ನು ಎಲ್ಲಾ ನೋಂದಾಯಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯೇ ವಿತರಣೆ ಮಾಡಬೇಕು. ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಎಲ್ಲಾ ಕಾರ್ಮಿಕರಿಗೆ ಕೂಡಲೇ ಕೋವಿಡ್ ಆರ್ಥಿಕ ಪರಿಹಾರ ಪಾವತಿಸಬೇಕು ಎಂಬ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಕಾರ್ಮಿಕಾಧಿಕಾರಿ ಶ್ರೀಮತಿ ಮಾರಿಕಾಂಭಾ ಸ್ಥಳೀಯ ಬೇಡಿಕೆಗಳನ್ನು ಬಗೆಹರಿಸಲಾಗುವುದು. ಸರಕಾರ ಮತ್ತು ಮಂಡಳಿ ವ್ಯಾಪ್ತಿಗೆ ಬರುವ ಬೇಡಿಕೆಗಳನ್ನು ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಮನವಿಯನ್ನು ಶಿವರಾಮ್‌ ಹೆಬ್ಬಾರ್, ಕಾರ್ಮಿಕ ಸಚಿವರು ಹಾಗು ಅಧ್ಯಕ್ಷರು, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅವರಿಗೆ ಸಲ್ಲಿಕೆ ಮಾಡಲಾಗಿದೆ.

ಇದನ್ನು ಓದಿ: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು: ಸಿಐಟಿಯು ಒತ್ತಾಯ

ಪ್ರತಿಭಟನೆಯ ನೇತೃತ್ವವನ್ನು ಎಐಟಿಯುಸಿ ಮುಖಂಡ ಎ.ಎಸ್.ಪೀರಜಾದೆ, ಸಿಐಟಿಯು ಮುಖಂಡ ಮಹೇಶ ಪತ್ತಾರ, ಮುಖಂಡರಾದ ಬಸೀರ ಮುದೋಳ, ರಫೀಕ್ ಬಡೇಮಿಯಾ, ಎಂ.ಎಚ್.ಮುಲ್ಲಾ, ಜಿ.ಎಚ್.ಕರಿಯಣ್ಣವರ, ಬಾಬಾಜಾನ ಮುಧೋಳ, ನಭೀಸಾಬ ನದಾಫ್, ಮಂಜುನಾಥ ಹುಜರಾತಿ, ಎಂ.ಎಂ.ಶೇಖ, ರಬ್ಬಾನಿ ಮೇಸ್ತ್ರಿ, ಜಿ.ಎಚ್.ಕರಿ, ಖಾಸೀಂ ಕೂಡಲಗಿ, ಸಂಜು ಗಾಯಕವಾಡ, ಮೊಹ್ಮದಲಿ ಜಾನೆಕರ್, ಹಜರತ ವಿಜಾಪೂರ ಮತ್ತು ನೂರಾರು ಕಾರ್ಮಿಕರು ಭಾಗವಹಿಸಿದ್ದರು.

ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು, ಎಐಟಿಯುಸಿ, ಎಐಯುಟಿಯುಸಿ, ಐಎನ್‌ಟಿಯುಸಿ, ಎನ್‌ಸಿಎಲ್‌, ಎಐಸಿಸಿಟಿಯು, ಹೆಚ್‌ಎಂಎಸ್‌, ಟಿಯುಸಿಸಿ ಸಂಘಟನೆಗಳು ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *