ಕಾರ್ಮಿಕ ಚಳುವಳಿಗೆ ಎಂಗಲ್ಸ್ ಕೊಡುಗೆ ಅಗಾಧ – ಡಾ. ಕೆ.ಪ್ರಕಾಶ್

ಬಳ್ಳಾರಿ :ಜಗತ್ತಿನ ಕಾರ್ಮಿಕ ಚಳುವಳಿಗೆ ಫೆಡರಿಕ್ ಎಂಗಲ್ಸ್ ಕೊಡುಗೆ ಅಗಾಧವಾಗಿದೆ ಎಂದು  ಸಿಐಟಿಯು ರಾಜ್ಯ ಉಪಾಧ್ಯಕ್ಷ ಡಾ. ಕೆ.ಪ್ರಕಾಶ್ ಬಣ್ಣಿಸಿದ್ದಾರೆ. ಇವರು ಇಂದು ಗಾಂಧಿ ಭವನದಲ್ಲಿ ನಡೆದ  ಕಾರ್ಮಿಕ ಮುಖಂಡ ಪ್ರಸನ್ನ ಕುಮಾರ್ ಸ್ಮರಣಾರ್ಥ ” ಜಗತ್ತಿನ ಕಾರ್ಮಿಕ ಚಳವಳಿಗೆ ಫೆಡರಿಕ್ ಏಂಗಲ್ಸ ರವರ ಕೊಡುಗೆ” ಕುರಿತು  ಸಿಐಟಿಯು ಏರ್ಪಡಿಸಿದ್ದ ವಿಚಾರ ಸಂಕಿರ್ಣದಲ್ಲಿ ಭಾಗವಹಿಸಿ ಮಾತನಾಡಿದರು.

“ಜರ್ಮನ್ ತತ್ವಜ್ಙಾನಿ ಹೆಗಲ್ ರ ದ್ವಂದ್ವಮಾನ ತಾರ್ಕಿಕತೆಯಿಂದ ಪ್ರಭಾವಗೊಂಡು ಏಂಗಲ್ಸರು ನಂತರ ಹೆಗಲ್ ಚಿಂತನೆಯಿಂದ ಹೊರಬಂದು ಜಗತ್ತಿಗೆ ವಿಶಿಷ್ಟವಾದ ವೈಜ್ಞಾನಿಕ ಸಮಾಜವಾದವನ್ನು ಎತ್ತಿಹಿಡಿದರು. ಅವರು ಅಪಾರ ಸಂಪತ್ತುಹೊಂದಿದ ಕಾರ್ಖಾನೆಯ ಮಾಲಕರಾಗಿದ್ದರೂ ಅವರ ಚಿಂತನೆ ಮತ್ತು ಬದುಕು ಕಾರ್ಮಿಕ ವರ್ಗದ ವಿಮೋಚನೆಗೆ ಮೀಸಲಾಗಿತ್ತು. ಮಹಿಳೆಯರ ಕುರಿತಾದ ಅವರ ಬರಹ ಇಂದಿನ ಮಹಿಳಾ ವಿಮೋಚನೆಗೆ ದಾರಿದೀಪವಿಗಿದೆ. ಅವರ ಆಪ್ತತೆಯ ಸ್ನೇಹದಲ್ಲಿ ಕಾರ್ಲಮಾರ್ಕ್ಸ್ ರವರ ಚಿಂತನೆ ಹಾಗೂ ಬರಹಗಳು ಅರಳಿದವು. ಈ ಇಬ್ಬರು ಮಹಾನ್ ಚಿಂತಕರ ಬರಹಗಳು ಜಗತ್ತಿನ ಮೂಲೆಮೂಲೆಯಲ್ಲಿ ನಡೆಯುತ್ತಿರುವ ಕಾರ್ಮಿಕ ವರ್ಗದ ಚಳುವಳಿಗೆ ಹಾಗೂ ಈ ಸಿದ್ಧಾಂತದ ಅಡಿಪಾಯದಲ್ಲಿ ರೂಪಗೊಂಡ ರಾಜಕೀಯ ಸಿದ್ಧಾಂತಕ್ಕೆ ಸ್ಪೂರ್ತಿಯ ಚಿಲುಮೆಯಾಗಿದೆ ಎಂದು  ಡಾ. ಪ್ರಕಾಶ್ ತಿಳಿಸಿದರು.

ಪ್ರಾರಂಭದಲ್ಲಿ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ಕಾರ್ಮಿಕ ಮುಖಂಡ ಪ್ರಸನ್ನ ಕುಮಾರ್ ರವರ ಬದುಕು ಮತ್ತು ಹೋರಾಟಗಳ ಕುರಿತು ಮಾತನಾಡಿ ರಾಜ್ಯದ ಕಾರ್ಮಿಕ ಚಳವಳಿಗೆ ಅವರು ನೀಡಿದ ಕೊಡುಗೆಯನ್ನು ಮೆಲುಕು ಹಾಕಿದರು.

ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ನಾಗರತ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಕಾರ್ಯದರ್ಶಿ ಸತ್ಯಬಾಬು ಹಾಗೂ ಮಲ್ಲಮ್ಮ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಟಿಜಿ.ವಿಠಲ್ ದುರುಗಪ್ಪ ಸಿಐಟಿಯು ಜಿಲ್ಲಾ ಅಧ್ಯಕ್ಷ ಆರ್.ಎಸ್.ಬಸವರಾಜ್ ಸೇರಿದಂತೆ ಇತತರು ವಿಚಾರ ಸಂಕೀರಣದಲ್ಲಿ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *