ರಾಯಚೂರು : ಕಾರ್ಮಿಕರ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಿಂಗಸ್ಗೂರು ಕ್ಷೇತ್ರದ ಶಾಸಕರು ಡಿ.ಎಸ್. ಹುಲಿಗೇರಿ ಯವರ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಸಿಐಟಿಯು ನಿಂದ 30 ಬೇಡಿಕೆಗಳುಳ್ಳ ಮನವಿ ಪತ್ರವನ್ನು ಸಲ್ಲಿಸಿದರು.
ರಾಜ್ಯ ವಿಧಾನ ಸಭೆಯ ಬಜೆಟ್ ನಲ್ಲಿ ರೈತ-ಕಾರ್ಮಿಕ ವಿರೋಧಿ ಮಸೂದೆಗಳ ವಿರುದ್ಧ ಧ್ವನಿ ಎತ್ತಲು ಹಾಗೂ ಸಂಘಟಿತ-ಅಸಂಘಟಿತ ಕಾರ್ಮಿಕರ ಸಮಸ್ಯೆ ಕುರಿತು ಧ್ವನಿ ಎತ್ತುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಸಿಐಟಿಯು ಜಿಲ್ಲಾ ಸಹ ಕಾರ್ಯದರ್ಶಿ ಮಹ್ಮದ್ ಹನೀಫ್, ಜಿಲ್ಲಾ ಸಮಿತಿ ಸದಸ್ಯೆ ನಾಗರತ್ನ ಸಂತೆಕೆಲ್ಲೂರು, ಮುಖಂಡರಾದ ಶೈನಾಜ್ ಬಾನು, ಮಲ್ಲಮ್ಮ ಯಲಗಲದಿನ್ನಿ, ಸುಮಂಗಲಾ, ಶಿವು ಕಪಗಲ್, ಮಮತಾಜ್, ಪಂಚಾಯತ್ ನೌಕರರ ಸಂಘಟನೆಯ ಮುಖಂಡ ಚೆನ್ನಬಸವ ಕೋಠಾ , ಶರಣಬಸವ ಹೊನ್ನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.