ಗಂಗಾವತಿ: ಕಾರಟಗಿ ನಗರದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ನೂತನ ಕಾರಟಗಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಮಿತಿಯನ್ನು ರಚನೆ ಮಾಡಲಾಯಿತು.
ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಅಡಿಯ ಸಮಿತಿಯ ಸಭೆಯಲ್ಲಿ ಪ್ರಮುಖವಾಗಿ ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಅನೇಕ ಸೌಲಭ್ಯಗಳು ಹಾಗೂ ಅವರಿಗೆ ಸೇವಾ ಭದ್ರತೆ ಲಾಕ್‌ಡೌನ್ ರಜೆ ವೇತನ ಹಾಗೂ ಮುಖ್ಯವಾಗಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಸಮಿತಿಯು ಆಗ್ರಹಿಸಿದೆ.
ಅಲ್ಲದೆ, ಅನೇಕ ಕುಂದುಕೊರತೆಗಳ ಬಗ್ಗೆಯೂ ಚರ್ಚಿಗಳು ನಡೆದಿವೆ. ಈ ಸಭೆಗೆ ಗಂಗಾವತಿ ತಾಲ್ಲೂಕಿನ ಗೌರವಾಧ್ಯಕ್ಷರಾದ ಗ್ಯಾನೇಶ್ ಕಡಗದ ಹಾಗೂ ಅಧ್ಯಕ್ಷರಾದ ದಾವಲ್ ಸಾಬ್ ಹಾಗೂ ಕಾರಟಗಿ ತಾಲ್ಲೂಕಿನ ವಿವಿಧ ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುವ ಎಲ್ಲಾ ತಾಯಂದಿರು ಅಕ್ಕಂದಿರು ಅಣ್ಣ ತಮ್ಮಂದಿರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಾರಟಗಿ ತಾಲ್ಲೂಕು ಸಮಿತಿಯ ಅಧ್ಯಕ್ಷರಾಗಿ ಮಹಮ್ಮದ್ ರಫಿ ಜಾಗಿರದಾರ, ಪ್ರಧಾನ ಕಾರ್ಯದರ್ಶಿಯಾಗಿ ಬಾಳೇಶ ಅಂಗಡಿ ಆಯ್ಕೆಯಾದರು. ಸಮಿತಿಯ ಉಪಾಧ್ಯಕ್ಷರುಗಳಾಗಿ ತಿಮ್ಮಣ್ಣ ಅಂಬಮ್ಮ ರೇವಣ್ಣ ನಾಗಮ್ಮ ಸಹ ಕಾರ್ಯದರ್ಶಿಗಳಾಗಿ ಹನುಮಂತ ಮುಕ್ಕುಂಪಿ ಬಂದೇನವಾಜ್ ಈರಮ್ಮ ಅನುಷಾ ಮತ್ತು ಖಜಾಂಚಿಯಾಗಿ ಹನುಮಂತ ಸಿದ್ಧಾಪುರ ಸೇರಿ ಒಟ್ಟು 11 ಜನರ ಸಮಿತಿ ರಚನೆಯಾಗಿದೆ. ಅದೇ ರೀತಿಯಲ್ಲಿ ಗೌರವ ಸಲಹೆಗಾರರಾಗಿ ಗ್ಯಾನೇಶ್ ಕಡಗದ್, ದಾವುಲ್ ಸಾಬ್ ಅವರನ್ನು ಆಯ್ಕೆ ಮಾಡಿದ್ದಾರೆ.
ಈ ಸಮಿತಿಯು ಸ್ಥಳದಲ್ಲಿ ಕೆಲಸ ಮಾಡುವ ಎಲ್ಲಾ ನೌಕರರ ಹಿತ ಕಾಪಾಡಬೇಕೆಂದು ಹಾಗೂ ಎಲ್ಲಾ ನೌಕರರಿಗೆ ವೇತನ ಪಿಎಫ್ ಇಎಸ್‌ಐ ಸೇರಿದಂತೆ ಸೇವಾಭದ್ರತೆಗಾಗಿ ಆಗ್ರಹಿಸಿದ್ದಾರೆ.