ಬೆಂಗಳೂರು : ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸಿ, ಜೈಶ್ರೀರಾಮ ಘೋಷಣೆ ಕೂಗಿರುವುದು ವಿವಾದಕ್ಕೆ ಕಾರಣವಾಗಿದೆ. ಬಜೆಟ್
ರಾಜ್ಯಪಾಲರ ಭಾಷಣದ ಮೂಲಕ ವಿಧಾನಸೌಧದಲ್ಲಿ ಅಧಿವೇಶನ ಆರಂಭವಾಗಿದ್ದು, ಸದನಕ್ಕೆ ಕೇಸರಿ ಶಾಲು ಧರಿಸಿ ಬಿಜೆಪಿ ನಾಯಕರು ಆಗಮಿಸಿದ್ದಾರೆ.
ಕೆಲವರು ಕೇಸರಿ ಶಾಲು ಧರಿಸಿ ಬಂದಿದ್ದರು, ಕೆಲವರು ಧರಿಸಿರಲಿಲ್ಲ,ರಾಜ್ಯಪಾಲರ ಭಾಷಣ ಮುಗಿಯುತ್ತಿದ್ದಂತೆ ಬಿಜೆಪಿ ನಾಯಕ ಮುನಿರತ್ನ ಉಳಿದವರಿಗೆ ಕೇಸರಿ ಶಾಲು ನೀಡಿದರು. ರಾಜ್ಯಪಾಲರು ಭಾಷಣ ಮುಗಿಸಿ ನಿರ್ಗಮಿಸುತ್ತಿರುವ ವೇಳೆ ಸದನದಲ್ಲಿ ಬಿಜೆಪಿ ಶಾಸಕರು ಜೈ ಶ್ರೀರಾಮ್ ಘೋಷಣೆ ಕೂಗಿದರು.
ಸದನದಲ್ಲಿ ಜೈಶ್ರೀರಾಮ್ ಘೋಷಣೆಯನ್ನು ಹಲವು ವರ್ಷಗಳಿಂದಿಲೂ ಬಿಜೆಪಿ ಕೂಗುತ್ತಲೆ ಬರುತ್ತಿದೆ. ಡಿಸೆಂಬರ್ 09, 2020ರಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದಾಗಲೂ ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸಿ, ಜೈಶ್ರೀರಾಮ್ ಘೋಷಣೆ ಕೂಗಿದ್ದರು. ಮಾರ್ಚ್ 08, 2021 ರ ಬಜೆಟ್ ಸಂದರ್ಭದಲ್ಲಿಯೂ ಬಿಜೆಪಿ ಶಾಸಕರು ಸದನದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿದ್ದರು. ಇಂದು ಮತ್ತೆ ಕೂಗುವ ಮೂಲಕ ವಿವಾಧ ಸೃಷ್ಟಿಸಿದ್ದಾರೆ. ಬಜೆಟ್
ಇದನ್ನೂ ಓದಿ : ಫೆ 12ರಿಂದ ಬಜೆಟ್ ಅಧಿವೇಶನ| ಬೆಳಗ್ಗೆ 9ರಿಂದಲೇ ಕಲಾಪಕ್ಕೆ ಚಿಂತನೆ – ಸ್ಪೀಕರ್ ಯು.ಟಿ. ಖಾದರ್
ಸಾಂವಿಧಾನಿಕ ಸಂಸ್ಥೆಗಳ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ, ಸದನದ ಗೌರವವನ್ನು ಹಾಳು ಮಾಡುತ್ತಲೇ ಬರುತ್ತಿದ್ದಾರೆ. ಜೈಶ್ರೀರಾಮ್ ಘೋಷಣೆ ಕೂಗಲು ವಿಧಾನಸೌಧವೇನು ರಾಮನ ದೇವಸ್ಥಾನವಲ್ಲ, ಬಿಜೆಪಿ ಶ್ರೀರಾಮನ ಹೆಸರಿನಲ್ಲಿ ಹೆದರಿಸುವ ಕೆಲಸ ಮಾಡುತ್ತಿದೆ. ಹಾಗೂ ಸದನದ ಚರ್ಚೆಯ ದಿಕ್ಕು ತಪ್ಪಿಸಿ, ಜನರನ್ನು ಭಾವನಾತ್ಮಕವಾಗಿ ಮೂರ್ಖರನ್ನಾಗಿಸವ ಕೆಲಸ ಮಾಡುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಬಿಜೆಪಿ ಶಾಸಕರ ನಡೆಯ ಬಗ್ಗೆ ವಿರೋಧ ವ್ಯಕ್ತವಾಗಿದೆ. ಬಜೆಟ್
ವಿಡಿಯೋ ನೋಡಿ : Live ಕರ್ನಾಟಕ ವಿಧಾನಸಭೆ ಅಧಿವೇಶನ ನೇರಪ್ರಸಾರ ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರ ಭಾಷಣ