ವೇದರಾಜ್ ಎನ್.ಕೆ
ಕಣ್ತಪ್ಪು, ಕಣ್ಕಟ್ಟು, ಮಂದದೃಷ್ಟಿ, ದೂರದೃಷ್ಟಿ, ಎಪ್ರಿಲ್ ಫೂಲ್, ಅಥವ ಶುದ್ಧ ದಡ್ಡತನ?- ಇವು ವ್ಯಂಗ್ಯಚಿತ್ರಕಾರರನ್ನು ಈ ವಾರ ಬಾಧಿಸಿದ ಪ್ರಶ್ನೆಗಳು.
ಮಾರ್ಚ್ 31 ರಂದು ಕೇಂದ್ರ ಹಣಕಾಸು ಮಂತ್ರಾಲಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳ ಪರಿಷ್ಕರಣೆಯ ಆದೇಶವನ್ನು ಪ್ರಕಟಿಸಿತು. ಮರುದಿನ, ಅಂದರೆ ಎಪ್ರಿಲ್ 1ರ ಮುಂಜಾನೆ ಸುಮಾರು 7.50ಕ್ಕೆ ಹಣಕಾಸು ಮಂತ್ರಿಗಳು ತಮ್ಮ ವೈಯಕ್ತಿಕ ಟ್ವಟರ್ ನಲ್ಲಿ ಈ ಸಂದೇಶ ಹಾಕಿದರು: “ಭಾರತ ಸರಕಾರದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು 2020-2021ರ ಕೊನೆಯ ತ್ರೈಮಾಸಿಕದಲ್ಲಿ ಇದ್ದಂತೆ, ಅಂದರೆ ಮಾರ್ಚ್ 2021ರಲ್ಲಿ ಇದ್ದಂತೆ ಮುಂದುವರೆಯುತ್ತವೆ. ಕಣ್ತಪ್ಪಿನಿಂದ ಹೊರಡಿಸಿದ ಆದೇಶವನ್ನು ಹಿಂತೆಗೆದು ಕೊಳ್ಳಲಾಗುವುದು”.
ವಾಸ್ತವವಾಗಿ, ಇಲ್ಲಿ ಕಣ್ತಪ್ಪು ಏನೂ ಇರಲಿಲ್ಲ ಎಂಬುದು ಕಳೆದ ವರ್ಷದ ಇದೇ ದಿನದ ಆದೇಶವನ್ನು ನೋಡಿದರೆ ಕಾಣುತ್ತದೆ.
ಮತ್ತು ತ್ರೈಮಾಸಿಕ ದರಗಳನ್ನು ಪರಿಷ್ಕರಿಸುವ ಇಂತಹ ಆದೇಶಗಳನ್ನು ಇದ್ದಕ್ಕಿದ್ದಂತೆ ಹೊರಡಿಸುವುದಿಲ್ಲ. ಕನಿಷ್ಟ 15 ದಿನಗಳ ಕಾಲ ಹಣಕಾಸು ಮಂತ್ರಾಲಯ, ಅಂಚೆ ಇಲಾಖೆ ಮತ್ತು ರಿಝರ್ವ್ ಬ್ಯಾಂಕಿನ ವಿವಿಧ ವಿಭಾಗಗಳ ನಡುವೆ ಸಮಾಲೋಚನೆಗಳ ನಂತರವೇ ಬಡ್ಡಿದರಗಳನ್ನು ನಿಗದಿ ಮಾಡುವ ಆದೇಶವನ್ನು ಅಂತಿಮವಾಗಿ ಹಣಕಾಸು ಮಂತ್ರಿಗಳು ಮಂಜೂರು ಮಾಡುತ್ತಾರೆ. ಈ ಬಾರಿಯೂ ಅಂತಹ ಎಲ್ಲ ಕ್ರಮಗಳನ್ನೂ ಅನುಸರಿಸ ಲಾಗಿತ್ತು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ ಎಂಧು ಬಿಸಿನೆಸ್ ಟುಡೇ (ಎಪ್ರಿಲ್ 2) ಹೇಳಿದೆ.
ಹಣಕಾಸು ಮಂತ್ರಿಗಳ ಎಪ್ರಿಲ್ 1ರ ಟ್ವಟರ್ ಸಂದೇಶಕ್ಕೆ ಕಾರಣ ಅಂದು ಮುಂಜಾನೆ ಪ್ರಧಾನ ಮಂತ್ರಿಗ ಳಕಚೇರಿಯಿಂದ ಬಂದ ಮಧ್ಯಪ್ರವೇಶ ಕಾರಣ ಎನ್ನಲಾಗಿದೆ. ಅಲ್ಲಿಂದ ಸಂದೇಶ ಬಂದು ಒಂದು ಗಂಟೆಯೊಳಗೆ, ಅಸ್ಸಾಂ ಮತ್ತು ಪಶ್ಚಿಮ ಬಂಗಾಲದಲ್ಲಿ ಎರಡನೇ ಸುತ್ತಿ ನಮತದಾನ ಿನ್ನೇನು ಆರಂಭವಾಗಲಿದೆ ಎನ್ನುವಾಗ ಬಡ್ಡಿದ ರಕಡಿತಗಳನ್ನು ಹಿಂತೆಗೆದುಕೊಳ್ಳುವ ಸಂದೇಶವನ್ನು ಪಸರಿಸಲಾಯಿತು!
***
“ಇದನ್ನು ಓದಿ…” “ಚುನಾವಣೆಗಳು ನಡೆಯುತ್ತಿವೆ.!!”
ಸಾರಿ, ತಪ್ಪು ಸುತ್ತೋಲೆ! ತಪ್ಪಾಗಿ ನಿಮಗೆ ಕೊಟ್ಟೆ..
(ಅಲೋಕ್ ನಿರಂತರ್)
***
ಕಣ್ತಪ್ಪಿನ ಈ ಪರಿ!
(ಪಿ.ಮಹಮ್ಮದ್, ಆಂದೋಲನ)
***
ಹೊಸದೇನೂ ಅಲ್ಲವಲ್ಲ!
ನೋಟುರದ್ಧತಿ, ಜಿಎಸ್‍ಟಿ, ಲಾಕ್ ಡೌನ್. ಈಗ …
ಬೇಸರಿಸಬೇಡಿ. ಈ ಪೆಟ್ಟು ಕೇವಲ ಕಣ್ತಪ್ಪಿನಿಂದ!
( ಸತೀಶ ಆಚಾರ್ಯ, ಸಿಫಿ.ಕಾಂ)
***
ಎಪ್ರಿಲ್ ಫೂಲ್ ಕೀಟಲೆಯೇ?
ಖಂಡಿತಾ ಅಲ್ಲ. ನಮಗೆ ಮೂರ್ಖರ ದಿನ ನವಂಬರ್ 8!
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
***
ಆದರೆ ಈ ವ್ಯಂಗ್ಯಚಿತ್ರಕಾರರಿಗೆ ಹಾಗನಿಸುವುದಿಲ್ಲ
ಪ್ರತಿಯೊಂದು ದಿನವೂ ಮೂರ್ಖರ ದಿನ (2014ರಿಂದ ಬಿಜೆಪಿ ಕ್ಯಾಲಂಡರಿನಲ್ಲಿ)
(ಅಭಿಜಿತ್ ಬಿಎಲ್ ಗೌಡ)
ಮೇಲೆ ಕೊಟ್ಟಿರುವ ಇತ್ತೀಚಿನ ಎರಡು ವರ್ಷಗಳ ಆದೇಶಗಳೇ ಇದನ್ನುಸಾಬೀತು ಮಾಡುವಂತಿವೆ.
ಉಳಿತಾಯ ಯೋಜನೆ ಬಡ್ಡಿದರ | ಎಪ್ರಿಲ್ 2020ರ ಮೊದಲು | ಎಪ್ರಿಲ್ 2020 | ಎಪ್ರಿಲ್ 2021 |
ಹಿರಿಯ ನಾಗರಿಕರ ಠೇವಣಿ | 8.6 | 7.4 | 6.5 |
ಸುಕನ್ಯಾ ಸಮೃದ್ಧಿ | 8.4 | 7.6 | 6.9 |
ಸಾರ್ವಜನಿಕ ಭವಿಷ್ಯ ನಿಧಿ | 7.9 | 7.1 | 6.4 |
ರಾಷ್ಟ್ರೀಯ ಉಳಿತಾಯ ಪತ್ರ | 7.9 | 6.8 | 5.9 |
ಕಿಸಾನ್ ವಿಕಾಸ್ ಪತ್ರ | 7.6 | 6.9 | 6.2 |
5 ವರ್ಷಗಳ ಠೇವಣಿ | 7.7 | 6.7 | 5.8 |
***
ಮೇ 2 ರ ನಂತರ….
“ನಮ್ಮ ದೃಷ್ಟಿದೋಷ ದೂರದೃಷ್ಟಿಯೋ ಅಥವ ಮಂದದೃಷ್ಟಿಯೋ ಎಂಬುದು
ಮೇ 2ರ ಫಲಿತಾಂಶಗಳ ನಂತದ ಹಿನ್ನೋಟದಿಂದಷ್ಟೇ ನಮಗೆ ತಿಳಿಯುತ್ತದೆ”
(ಸಂದೀಪ ಅಧ್ವರ್ಯು, ಟೈಂಸ್ ಆಫ್ ಇಂಡಿಯ)
***
ಮತದಾನದ ಗುರುತಿನಂತೆ ಅಳಿಸಲಾಗದ್ದೇ?
ಬಡ್ಡಿದರ ಕಡಿತವನ್ನು ಹಿಂತೆಗೆದುಕೊಂಡ ಆದೇಶಕ್ಕೆ
ಸಹಿಯ ಶಾಯಿ ಅಳಿಸಲಾಗದಂತದ್ದೇ?
(ಇ.ಪಿ.ಉನ್ನಿ, ಇಂಡಿಯನ್ ಎಕ್ಸ್ ಪ್ರೆಸ್)
ಮೇ 2ರ ನಂತರ ಈ ಕಣ್ತಪ್ಪು ನಿಜವಾಗಿಯೂ ಕಣ್ತಪ್ಪು ಆಗಿರಲಿಲ್ಲ ಎಂದು ಹೊಸ ಟ್ವೀಟ್ ಬರಬಹುದೇ? ಬರಲಿಕ್ಕಿಲ್ಲ, ಆದರೆ ಬಡ್ಡಿದರದ ‘ ಪರಿಷ್ಕರಣೆ’ (ಕಡಿತ) ನಂತರದ ತ್ರೈಮಾಸಿಕದಿಂದ, ಅಂದರೆ ಜುಲೈ 1 ರಿಂದ ಬರುತ್ತದೆ ಎಂಬ ಸಹಜ ಭೀತಿ ಹಲವರಿಗೆ ಇದೆ.
***
ಏನೇ ಇರಲಿ, ಶಿಕ್ಷಣ ರಂಗದಲ್ಲಿ ಖಾಸಗಿಯವರ ಉತ್ಕೃಷ್ಟತಾ ಕೇಂದ್ರಗಳು ಇನ್ನೂ ಆರಂಭವಾಗದಿದ್ದರೂ, “ಕಣ್ತಪ್ಪುಗಳು ಮತ್ತು ಟೊಳ್ಳು ಘೋಷಣೆಗಳ ಉತ್ಕೃಷ್ಟತಾ ಕೇಂದ್ರ’ವಂತೂ ಬೆಳೆದು ನಿಂತಿದೆ !
“ಸರಕಾರೀ ಕರ್ತವ್ಯದ ಮೇಲೆ”
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)