ಕನ್ನಡದ ಸಾಹಿತಿ ಬಾನು ಮುಷ್ತಾಕ್ ಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ

ಬೆಂಗಳೂರು: ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಕನ್ನಡದ ಸಾಹಿತಿ ಬಾನು ಮುಷ್ತಾಕ್ ರಿಗೆ ಲಭಿಸಿದ್ದೂ, ಇದೇ ಮೊದಲ ಬಾರಿಗೆ ಕನ್ನಡತಿಯೊಬ್ಬರಿಗೆ ಈ ಪ್ರಶಸ್ತಿ ದೊರೆಯುತ್ತಿದೆ. ಈ ಮೂಲಕ ಕನ್ನಡ ಸಾಹಿತ್ಯಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಸಾಹಿತಿ

ಬಾನು ಮುಷ್ತಾಕ್ ರ ಕನ್ನಡದ ಕತೆಗಳ ಅನುವಾದ ʼಹಾರ್ಟ್ ಲ್ಯಾಂಪ್ʼ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಬೂಕರ್‌ ಪ್ರಶಸ್ತಿ 57.34 ಲಕ್ಷ ನಗದನ್ನು ಒಳಗೊಂಡಿದೆ.  ಈಗ ಬುಕರ್ ಪ್ರಶಸ್ತಿ ಪಡೆದಿರುವ ಇಂಗ್ಲಿಷ್ ಕೃತಿ ಅವರ ಕಥಾ ಸಂಕಲನಗಳಿಂದ ಆಯ್ದ 12 ಕತೆಗಳ ಅನುವಾದದ ಸಂಕಲನ.ಸಾಹಿತಿ 

ಮೇ 21ರಂದು ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಈ ಕುರಿತ ಅಧಿಕೃತ ಘೋಷಣೆ ಹೊರಬಿದ್ದಿದೆ. ವಿಜೇತರಿಗೆ 50,000 ಪೌಂಡ್‌ ಬಹುಮಾನ ಅಂದರೆ, 57.28ಲಕ್ಷ ಸಿಗಲಿದೆ. ಇದನ್ನು ಲೇಖಕರು ಹಾಗೂ ಅನುವಾದಕರ ನಡುವೆ ಹಂಚಲಾಗುತ್ತದೆ.

ಇದನ್ನೂ ಓದಿ: ಲೋಕೋ ಪೈಲಟ್‌ಗಳ ಜಾಗರೂಕತೆಯಿಂದ ತಪ್ಪಿದ ಅನಾಹುತ

ಶಾರ್ಟ್ ಲಿಸ್ಟ್‌ನಲ್ಲಿ ಆಯ್ಕೆಯಾಗಿದ್ದ ಎಲ್ಲರನ್ನೂ ಲಂಡನ್‌ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಮೇ 2024 ಮತ್ತು ಏಪ್ರಿಲ್ 2025 ರ ನಡುವೆ UK ಮತ್ತು ಐರ್ಲೆಂಡ್‌ನಲ್ಲಿ ಪ್ರಕಟವಾದ ಇಂಗ್ಲಿಷ್‌ಗೆ ಅನುವಾದಿಸಲಾದ ಅತ್ಯುತ್ತಮ ಕಾದಂಬರಿ ಅಥವಾ ಸಣ್ಣ ಕಥೆಗಳ ಸಂಗ್ರಹಕ್ಕೆ ಈ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ಬಾನು ಮುಷ್ತಾಕ್ ಅವರು ತಮ್ಮ ಅನುವಾದಕಿ ದೀಪಾ ಭಸ್ತಿ ಅವರೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಾಹಿತಿ 

ಬಾನು ಮುಷ್ತಾಕ್ ಅವರ ಈ ಸಾಧನೆಗೆ ಕನ್ನಡದ ಬರಹಗಾರರು ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಕನ್ನಡ ಸಾಹಿತ್ಯಕ್ಕೆ ಸಂದ ಗೌರವ ಎಂದು ಬಣ್ಣಿಸಿದ್ದಾರೆ. ಈ ಪ್ರಶಸ್ತಿಯು ಕನ್ನಡ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಹಾಸನ ಪಟ್ಟಣದಲ್ಲಿ 1948ರಲ್ಲಿ ಜನಿಸಿದ ಮುಷ್ತಾಕ್, ಅವಿಭಕ್ತ ಮುಸ್ಲಿಂ ಕುಟುಂಬದಲ್ಲಿ ಬೆಳೆದವರು. ಆರಂಭದಲ್ಲಿ ಉರ್ದು ಮಾಧ್ಯಮ ಶಾಲೆ ನಂತರ ಎಂಟನೇ ವಯಸ್ಸಿನಲ್ಲಿ ಕನ್ನಡ ಶಾಲೆಯಲ್ಲಿ ಕಲಿತವರು. ಹಿಂದಿನ ಮೈಸೂರು ರಾಜ್ಯದಲ್ಲಿ ಸರ್ಕಾರಿ ಆರೋಗ್ಯ ನಿರೀಕ್ಷಕರಾಗಿದ್ದ ಅವರ ತಂದೆ, ಅವರ ಸೂಕ್ಷ್ಮ ಆರ್ಥಿಕ ಪರಿಸ್ಥಿತಿಯ ಹೊರತಾಗಿಯೂ, ಬಾನು ಅವರ ಬರವಣಿಗೆಯನ್ನು ಪ್ರೋತ್ಸಾಹಿಸಿದರು. ಅವರಿಗಾಗಿ ಕನ್ನಡ ಪುಸ್ತಕಗಳನ್ನು ಖರೀದಿಸಿದರು. ಶಾಲೆಯಲ್ಲಿದ್ದಾಗ ಅವರ ಬರವಣಿಗೆ ಪ್ರಾರಂಭವಾಯಿತು. ಅವರು 26 ನೇ ವಯಸ್ಸಿನಲ್ಲಿ ಮದುವೆಯಾದ ನಂತರ, ಅವರ ಮೊದಲ ಸಣ್ಣ ಕಥೆ ಜನಪ್ರಿಯ ಕನ್ನಡ ನಿಯತಕಾಲಿಕೆ ಪ್ರಜಾಮತದಲ್ಲಿ ಪ್ರಕಟವಾಯಿತು. ಸಂದರ್ಶನಗಳಲ್ಲಿ ಬಾನು ತಮ್ಮ ತಂದೆಯ ಅಳಿಸಲಾಗದ ಪ್ರಭಾವ, ಅವರ ಶಾಲೆಯ ಸರ್ವಾಧಿಕಾರಿ ವಾತಾವರಣದ ವಿರುದ್ಧದ ಹೋರಾಟದಲ್ಲಿ ಅವರ ನಿರಂತರ ಬೆಂಬಲದ ಬಗ್ಗೆ ಮಾತನಾಡಿದ್ದಾರೆ.

ಬಾನು ಮುಷ್ತಾಕ್ ಅವರು. ಲಂಕೇಶ್ ಪತ್ರಿಕೆ ಮೂಲಕ ಬರವಣಿಗೆ ಆರಂಭಿಸಿ 5 ಕಥಾ ಸಂಕಲನಗಳು (ಹೆಜ್ಜೆ ಮೂಡಿದ ಹಾದಿ, ಬೆಂಕಿ ಮಳೆ, ಎದೆಯ ಹಣತೆ, ಸಫೀರಾ, ಬಡವರ ಮಗಳು ಹೆಣ್ಣಲ್ಲ), ತಲಾ ಒಂದು ಕಾದಂಬರಿ (ಕುಬ್ರ), ಲೇಖನ ಸಂಕಲನ (ಇಬ್ಬನಿಯ ಕಾವು) ಕವನ ಸಂಕಲನ (ಒದ್ದೆ ಕಣ್ಣಿನ ಬಾಗಿನ). ಕಾನೂನು ಶಿಕ್ಷಣ ವಾಚಿಕೆ (ಕೌಟುಂಬಿಕ ದೌರ್ಜನ್ಯ ಕಾಯಿದೆ) – ಗಳನ್ನು ಬರೆದು ಪ್ರಕಟಿಸಿದ್ದಾರೆ.  ಖ್ಯಾತ ವಕೀಲರೂ, ಸಕ್ರಿಯ ಸಾಮಾಜಿಕ ಹೋರಾಟಗಾರರೂ, ಕಾರ್ಯಕರ್ತರೂ ಆಗಿರುವ ಬಾನು ಮುಷ್ತಾಕ್ ಅವರು ಹಾಸನದ ಜಿಲ್ಲಾ ಸಮತಾ ವೇದಿಕೆಯ ಮತ್ತು ಮಹಿಳಾ ವಿಕಾಸ ವೇದಿಕೆ ಯ ಅಧ್ಯಕ್ಷೆಯಾಗಿ ಸೇವೆಸಲ್ಲಿಸಿದ್ದಾರೆ. ಹಲವು ಸಾಮಾಜಿಕ, ಅದರಲ್ಲೂ ವಿಶೇಷವಾಗಿ ಮಹಿಳಾ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಹಾಗೂ ಇತರ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಚರ್ಚೆ, ಚಳುವಳಿಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಬಂದಿದ್ದಾರೆ.

ಅವರು ಹಾಸನ ನಗರ ಸಭೆಗೆ 1983ರಿಂದ ಎರಡು ಅವಧಿಗೆ ನಗರಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಹಾಸನ ನಗರ ಗ್ರಂಥಾಲಯ ಸಮಿತಿಯ ಮತ್ತು ಆಕಾಶವಾಣಿ ಬೆಂಗಳೂರು ಕೇಂದ್ರದ ಸಲಹಾ ಮಂಡಳಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ.

ಬಾನು ಮುಷ್ತಾಕ್ ಅವರ ‘ಕರಿ ನಾಗರಗಳು’ ಕಥೆಯನ್ನು ಆಧರಿಸಿದ ಗಿರೀಶ್ ಕಾಸರವಳ್ಳಿ ನಿರ್ದೇಶನದ ಚಿತ್ರ ‘ಹಸೀನಾ’ (2004)ದ ನಾಯಕಿ ನಟಿ ತಾರಾ ಅವರಿಗೆ, ಪತಿಯಿಂದ ಪರಿತ್ಯಕ್ತಳಾದ ಮುಸ್ಲಿಂ ಮಹಿಳೆ ಹಸೀನಾ ಪಾತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿತ್ತು.

ಮೂಲಕ ಬರವಣಿಗೆ ಆರಂಭಿಸಿ 5 ಕಥಾ ಸಂಕಲನಗಳು (ಹೆಜ್ಜೆ ಮೂಡಿದ ಹಾದಿ, ಬೆಂಕಿ ಮಳೆ, ಎದೆಯ ಹಣತೆ, ಸಫೀರಾ, ಬಡವರ ಮಗಳು ಹೆಣ್ಣಲ್ಲ), ತಲಾ ಒಂದು ಕಾದಂಬರಿ  (ಕುಬ್ರ_), ಲೇಖನ ಸಂಕಲನ (ಇಬ್ಬನಿಯ ಕಾವು) ಕವನ ಸಂಕಲನ  (ಒದ್ದೆ ಕಣ್ಣಿನ ಬಾಗಿನ). ಕಾನೂನು ಶಿಕ್ಷಣ ವಾಚಿಕೆ  (ಕೌಟುಂಬಿಕ ದೌರ್ಜನ್ಯ ಕಾಯಿದೆ) – ಗಳನ್ನು ಬರೆದು ಪ್ರಕಟಿಸಿದ್ದಾರೆ.  ಈಗ ಬುಕರ್ ಪ್ರಶಸ್ತಿ ಪಡೆದಿರುವ ಇಂಗ್ಲಿಷ್ ಕೃತಿ ಅವರ ಕಥಾ ಸಂಕಲನಗಳಿಂದ ಆಯ್ದ 12 ಕತೆಗಳ ಅನುವಾದದ ಸಂಕಲನ.

ಖ್ಯಾತ ವಕೀಲರೂ, ಸಕ್ರಿಯ ಸಾಮಾಜಿಕ ಹೋರಾಟಗಾರರೂ, ಕಾರ್ಯಕರ್ತರೂ ಆಗಿರುವ ಬಾನು ಮುಷ್ತಾಕ್ ಅವರು ಹಾಸನದ ಜಿಲ್ಲಾ ಸಮತಾ ವೇದಿಕೆಯ ಮತ್ತು ಮಹಿಳಾ ವಿಕಾಸ ವೇದಿಕೆ ಯ ಅಧ್ಯಕ್ಷೆಯಾಗಿ ಸೇವೆಸಲ್ಲಿಸಿದ್ದಾರೆ. ಹಲವು ಸಾಮಾಜಿಕ, ಅದರಲ್ಲೂ ವಿಶೇಷವಾಗಿ ಮಹಿಳಾ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಹಾಗೂ ಇತರ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಚರ್ಚೆ, ಚಳುವಳಿಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಾ ಬಂದಿದ್ದಾರೆ.

ಅವರು ಹಾಸನ ನಗರ ಸಭೆಗೆ 1983ರಿಂದ ಎರಡು ಅವಧಿಗೆ ನಗರಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದರು.  ಹಾಸನ ನಗರ ಗ್ರಂಥಾಲಯ ಸಮಿತಿಯ ಮತ್ತು ಆಕಾಶವಾಣಿ ಬೆಂಗಳೂರು ಕೇಂದ್ರದ ಸಲಹಾ ಮಂಡಳಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ.

ಬಾನು ಮುಷ್ತಾಕ್ ಅವರ ಕರಿ ನಾಗರಗಳು’ ಕಥೆಯನ್ನು ಆಧರಿಸಿದ ಗಿರೀಶ್ ಕಾಸರವಳ್ಳಿ ನಿರ್ದೇಶನದ ಚಿತ್ರ ‘ಹಸೀನಾ’ (2004)ದ  ನಾಯಕಿ ನಟಿತಾರಾ  ಅವರಿಗೆ, ಪತಿಯಿಂದ ಪರಿತ್ಯಕ್ತಳಾದ ಮುಸ್ಲಿಂ ಮಹಿಳೆ ಹಸೀನಾ ಪಾತ್ರಕ್ಕಾಗಿರಾಷ್ಟ್ರೀಯ ಚಲನಚಿತ್ರ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿತ್ತು.

2022 ರಲ್ಲಿ, ಗೀತಾಂಜಲಿ ಶ್ರೀ ಮತ್ತು ಅನುವಾದಕಿ ಡೈಸಿ ರಾಕ್‌ವೆಲ್ ಅವರು ಮೊದಲ ಹಿಂದಿ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ಗಾಗಿ ಪ್ರಶಸ್ತಿಯನ್ನು ಗೆದ್ದರು. 2023 ರಲ್ಲಿ ಪೆರುಮಾಳ್ ಮುರುಗನ್ ಅವರ ತಮಿಳು ಕಾದಂಬರಿ ‘ಪೈರ್’ ಅನ್ನು ಅನುವಾದಕ ಅನಿರುದ್ಧನ್ ವಾಸುದೇವನ್ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದರು. ಈ ಕೃತಿಯು ದೀರ್ಘ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.

ಬೂಕರ್‌ ಶಾರ್ಟ್‌ಲಿಸ್ಟ್‌ನಲ್ಲಿದ್ದ ಇತರ ಕೃತಿಗಳು:

ಸೋಲ್ವೆಜ್ ಬಲ್ಲೆ ಅವರ ‘ಆನ್ ದಿ ಕ್ಯಾಲ್ಕುಲೇಷನ್ ಆಫ್ ವಾಲ್ಯೂಮ್ I’ (ಡ್ಯಾನಿಶ್‌ನಿಂದ ಬಾರ್ಬರಾ ಜೆ. ಹ್ಯಾವೆಲ್ಯಾಂಡ್ ಅನುವಾದಿಸಿದ್ದಾರೆ); ವಿನ್ಸೆಂಟ್ ಡೆಲೆಕ್ರೊಯಿಕ್ಸ್ ಅವರ ‘ಸ್ಮಾಲ್ ಬೋಟ್’ (ಫ್ರೆಂಚ್‌ನಿಂದ ಹೆಲೆನ್ ಸ್ಟೀವನ್ಸನ್ ಅನುವಾದಿಸಿದ್ದಾರೆ); ಹಿರೊಮಿ ಕವಾಕಾಮಿ ಅವರ ‘ಅಂಡರ್ ದಿ ಐ ಆಫ್ ದಿ ಬಿಗ್ ಬರ್ಡ್’ (ಜಪಾನೀಸ್‌ನಿಂದ ಆಸಾ ಯೊನೆಡಾ ಅನುವಾದಿಸಿದ್ದಾರೆ); ವಿನ್ಸೆಂಜೊ ಲ್ಯಾಟ್ರೊನಿಕೊ ಅವರ ‘ಪರ್ಫೆಕ್ಷನ್’ (ಇಟಾಲಿಯನ್‌ನಿಂದ ಸೋಫಿ ಹ್ಯೂಸ್ ಅನುವಾದಿಸಿದ್ದಾರೆ); ಮತ್ತು ಅನ್ನೆ ಸೆರ್ರೆ ಅವರ ‘ಎ ಲೆಪರ್ಡ್-ಸ್ಕಿನ್ ಹ್ಯಾಟ್’ (ಫ್ರೆಂಚ್‌ನಿಂದ ಮಾರ್ಕ್ ಹಚಿನ್ಸನ್ ಅನುವಾದಿಸಿದ್ದಾರೆ).

ಇದನ್ನೂ ನೋಡಿ: ಆರೋಗ್ಯ ಹಕ್ಕು – ಸರಣಿ ಕಾರ್ಯಕ್ರಮ| ಅಲ್ಮಾ-ಅಟಾ ಘೋಷಣೆ ಏನು? ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲವರ್ಧನೆ ಸಂಚಿಕೆ 03

Donate Janashakthi Media

Leave a Reply

Your email address will not be published. Required fields are marked *