ಕನ್ನಡದ ಕೋಟಿ ನಿರ್ಮಾಪಕ ರಾಮು ಕೋವಿಡ್‌ನಿಂದ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ 39ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದ ಕೋಟಿ ನಿರ್ಮಾಪಕರಾಗಿಯೇ ಹೆಸರು ಪಡೆದಿದ್ದ ರಾಮು ಕೋವಿಡ್‌ನಿಂದ ನಿಧನರಾಗಿದ್ದಾರೆ.

ನಟಿ ಮಾಲಾಶ್ರೀ ಅವರ ಪತಿ ರಾಮು ಅವರು ಕನ್ನಡದಲ್ಲಿ ಅತ್ಯಂತ ದುಬಾರಿ ಚಿತ್ರಗಳ ನಿರ್ಮಾಣಕ್ಕೆ ಮೊಟ್ಟ ಮೊದಲ ಬಾರಿಗೆ ಕೈ ಹಾಕಿದ್ದವರು.

52 ವರ್ಷದ ರಾಮು ಅವರಿಗೆ ಒಂದು ವಾರದ ಹಿಂದೆ ಕೊರೊನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದರು. ರಾಮು ಅವರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ.

ಲಾಕಪ್ ಡೆತ್, ಎಕೆ 47, ಕಲಾಸಿಪಾಳ್ಯ, ಸಿಂಹದ ಮರಿ, ಚಾಮುಂಡಿ, ಕಿಚ್ಚ, ಗುಲಾಮಾ ಸೇರಿದಂತೆ ಕನ್ನಡ ಅನೇಕ ಚಲನಚಿತ್ರಗಳ ನಿರ್ಮಾಪಕರು.  ಅವರ ಕೊನೆಯ ಚಿತ್ರ ಗಣೇಶ್ ಮತ್ತು ಭಾವನ ಅಭಿನಯದ 99.

ಸೂಪರ್ ಹಿಟ್ ಚಲನಚಿತ್ರಗಳ ನಿರ್ಮಾಣ ಮಾಡಿದ್ದ ರಾಮು ಅವರು ಕನ್ನಡಕ್ಕೆ ಹೊಸ ರೀತಿಯ ಚಿತ್ರಗಳು ನೀಡಿದ್ದರು. ಗೋಲಿಬಾರ್ ಚಲನಚಿತ್ರಕ್ಕೆ ಬಂಡವಾಳ ಹಾಕುವ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶ ಪಡೆದರು. ನಿರ್ಮಾಪಕರಾಗಿ, ವಿತರಕರಾಗೂ ದೊಡ್ಡ ಯೋಜನೆಗಳು ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಿದ ಖ್ಯಾತ ರಾಮು ಅವರಿಗೆ ಇತ್ತು.

ಖ್ಯಾತ ನಟಿ ಮಾಲಾಶ್ರೀ ಅವರನ್ನ ವರಿಸಿ ಅವರನ್ನೇ ಮುಖ್ಯಭೂಮಿಕೆಯಲ್ಲಿ ಇಟ್ಟುಕೊಂಡು ಅನೇಕ ಚಿತ್ರಗಳನ್ನು ಕೊಟ್ಟಿದ್ದರು.

ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಸಂಜೆ ನಿಧನರಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *