ಬೆಂಗಳೂರು: ‘ಕಾಂಗ್ರೆಸ್ ಇಲ್ಲದೇ ದೇಶ ಉಳಿಯಲು ಸಾಧ್ಯವಿಲ್ಲ’ ಎಂದ ಕನ್ಹಯ್ಯ ಕುಮಾರ್ ಹೇಳಿಕೆಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ನಟ ಚೇತನ್ ಕುಮಾರ್ ಅಹಿಂಸಾ ಇದು ಅಸತ್ಯ ಮತ್ತು ಭಟ್ಟಂಗಿತನ ಎಂದಿದ್ದಾರೆ.
ವೈಯಕ್ತಿಕ ಅಧಿಕಾರದ ಸಲುವಾಗಿ, ಕನ್ಹಯ್ಯ ಕುಮಾರ್ ಅವರು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ನಟ ಚೇತನ್ ಕುಮಾರ್ ʻಹೊಸದಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ಕನ್ಹಯ್ಯ ಕುಮಾರ್ ಅವರು ಹೇಳಿಕೆ ಅಸತ್ಯ ಮತ್ತು ಭಟ್ಟಂಗಿತನ. ಕಾಂಗ್ರೆಸ್ ಮತ್ತು ಬಿಜೆಪಿಯ ಅವಕಾಶವಾದ ಮತ್ತು ಬೂಟಾಟಿಕೆಗಳಿಲ್ಲದೆಯೇ ಕರ್ನಾಟಕ ಮತ್ತು ಭಾರತವು ಉತ್ತಮವಾಗಿರುತ್ತದೆ ಎಂದಿದ್ದಾರೆ.