Belagavi Winter Session| ವೇತನ ಆಯೋಗದ ವರದಿ ಬಗ್ಗೆ ಅತೃಪ್ತಿ; ಸಭಾತ್ಯಾಗ ಮಾಡಿದ ಕಮಲ, ದಳ ಸದಸ್ಯರು

ಬೆಳಗಾವಿ: ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿರುವ 7ನೇ ವೇತನ ಆಯೋಗದ ವರದಿ ಜಾರಿ ವಿಚಾರಕ್ಕೆ  ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು, ಸಭಾತ್ಯಾಗ ಮಾಡಿದ ಘಟನೆ ಡಿ-5 ಮಂಗಳವಾರ ನಡೆಯಿತು. ವರದಿ ಜಾರಿ ಸಂಬಂಧ ಸಭಾನಾಯಕ ಎನ್‌.ಎಸ್‌. ಭೋಸರಾಜು ನೀಡಿದ ಉತ್ತರ ತೃಪ್ತಿಕರವಾಗಿಲ್ಲ, ಸಿಎಂ ಸಿದ್ದರಾಮಯ್ಯನವರೇ ಬಂದು ಉತ್ತರಿಸಬೇಕು ಎಂದು ಪಟ್ಟು ಹಿಡಿದ ಸದಸ್ಯರು, ಬಳಿಕ ಸಭಾತ್ಯಾಗ ಮಾಡಿದರು.Session  ವ

ನಿಯಮ 330ರಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ‘ಆಯೋಗದ ವರದಿ ಸಿದ್ಧವಾಗಿದ್ದರೂ, ವಿನಾ ಕಾರಣ ಆಯೋಗದ ಅವಧಿ ವಿಸ್ತರಿಸಲಾಗಿದೆ. ಸರ್ಕಾರದಲ್ಲಿ ದುಡ್ಡಿಲ್ಲ. ವೇತನ ಪರಿಷ್ಕರಿಸಲು ಮನಸ್ಸಿಲ್ಲ’ ಎಂದು ಆರೋಪಿಸಿದರು. ಅವರ ಮಾತುಗಳಿಗೆ ಬಿಜೆಪಿ, ಜೆಡಿಎಸ್ ಸದಸ್ಯರು ದನಿಗೂಡಿಸಿದರು. ಸಭಾತ್ಯಾಗ 

ಇದನ್ನೂ ಓದಿ:ಬೆಳಗಾವಿ ಅಧಿವೇಶನ| ಇಂದಿನಿಂದ 10 ದಿನಗಳ ಚಳಿಗಾಲ ಅಧಿವೇಶನ

ಈ ವೇಳೆ ಉತ್ತರ ನೀಡಿದ ಎನ್.ಎಸ್. ಬೋಸರಾಜು ಅವರು, ‘ವೇತನ ಆಯೋಗದ ಅವಧಿಯನ್ನು 2024ರ ಮಾರ್ಚ್ 15ರವರೆಗೆ ವಿಸ್ತರಿಸಲಾಗಿದೆ. ಸರ್ಕಾರ ಆಯೋಗದ ಅಂತಿಮ ವರದಿಯ ನಿರೀಕ್ಷೆಯಲ್ಲಿದೆ. ಆದಷ್ಟು ಬೇಗ ವರದಿ ಪಡೆದು ಸಾಧಕ- ಬಾಧಕಗಳನ್ನು ನೋಡಿಕೊಂಡು ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು. Session

ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, ಜೆಡಿಎಸ್ ಸದಸ್ಯರು, ಸಭಾಪತಿ ಪೀಠದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ‘ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಮೋಸ ಮಾಡುತ್ತಿದೆ’ ಎಂದು ಘೋಷಣೆ ಕೂಗಿದರು. ಬಿಜೆಪಿಯ ಎಸ್.ವಿ. ಸಂಕನೂರ, ಚಿದಾನಂದಗೌಡ, ತೇಜಸ್ವಿನಿಗೌಡ, ಶಶಿಲ್ ಜಿ. ನಮೋಶಿ, ಜೆಡಿಎಸ್‌ನ ಎಸ್.ಎಲ್. ಬೋಜೇಗೌಡ ದನಿಗೂಡಿಸಿದರು. ನಂತರ ಅವರು ಸಭಾತ್ಯಾಗ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಚ್. ವಿಶ್ವನಾಥ್ ಅವರು, ‘ವೇತನ ಪರಿಷ್ಕರಣೆ ಬಗ್ಗೆ ಒಂದು ವಾರಗಳ ಕಾಲ ಸುದೀರ್ಘ ಚರ್ಚೆ ಆಗಬೇಕು’ ಎಂದು ಸಲಹೆ ನೀಡಿದರು.

ವಿಡಿಯೋ ನೋಡಿ:ಚಳಿಗಾಲದ ಅಧಿವೇಶನ ಬೆಳಗಾವಿ 2023| ಡಿಸೆಂಬರ್‌ 05 | ಭಾಗ 02 Live #wintersession2023

Donate Janashakthi Media

Leave a Reply

Your email address will not be published. Required fields are marked *