ಚೆನ್ನೈ: ತಮಿಳು ನಾಡು ವಿಧಾನಸಭಾ ಚುನಾವಣೆಯ ಪ್ರಚಾರ ಮುಗಿಸಿ ಹೋಟೆಲ್ ಗೆ ತೆರಳುತ್ತಿದ್ದ ನಟ, ರಾಜಕಾರಣಿ ಕಮಲ್ ಹಾಸನ್ ಮೇಲೆ ದಾಳಿ ನಡೆಸಿದ ಪ್ರಕರಣ ರವಿವಾರ ತಡರಾತ್ರಿ ನಡೆದಿದೆ.
ತಮಿಳುನಾಡಿನ ಕಾಂಚಿಪುರಂನಲ್ಲಿ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಮೇಲೆ ದಾಳಿ ನಡೆಲಾಗಿದೆ. ಹೋಟೆಲ್ ಕಡೆ ತೆರಳುತ್ತಿದ್ದ ವೇಳೆ ಯುವಕನೋರ್ವ ಕಮಲ್ ಹಾಸನ್ ಅವರ ಕಾರಿನ ಮೇಲೆ ದಾಳಿ ಮಾಡಿದ್ದಾನೆ. ಘಟನೆಯಲ್ಲಿ ಕಾರಿನ ವಿಂಡ್ ಸ್ಕ್ರೀನ್ ಗೆ ಹಾನಿಯಾಗಿದ್ದು, ಕಮಲ್ ಹಾಸನ್ ಗೆ ಯಾವುದೇ ಗಾಯಗಳಾಗಿಲ್ಲ.
ಈ ವೇಳೆ ಯುವಕ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ. ಎಂಎನ್ ಎಂ ಪಕ್ಷದ ಕಾರ್ಯಕರ್ತರು ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
காஞ்சிபுரத்தில் எங்கள் தலைவரின் கார் கண்ணாடியை உடைத்து தாக்க முயன்றவர் காவல்துறையிடம் ஒப்படைக்கப்பட்டுள்ளார்.
நேர்மையின் பயணத்தை குள்ளநரித்தனத்தால் எதிர்கொள்பவர்களைக் கண்டு அஞ்சமாட்டோம்.
தலைவரின் இடிமுழக்கம் நாளை கோவையில்.
விரைவில் கோட்டையில்.#KamalHaasan @maiamofficial pic.twitter.com/XJfYlCcZ6A
— A.G. Mourya IPS (Rtd) 🔦 (@MouryaMNM) March 14, 2021
ಈ ಬಗ್ಗೆ ಮಕ್ಕಳ ನೀಧಿ ಮಯ್ಯಂ ಪಕ್ಷದ ಕಾರ್ಯದರ್ಶಿ ಎ.ಜಿ.ಮೌರ್ಯ ಪ್ರತಿಕ್ರಿಯೆ ನೀಡಿದ್ದು, ಇಂತಹ ದಾಳಿಗೆ, ಕುತಂತ್ರ ರಾಜಕಾರಣಕ್ಕೆ ಪಕ್ಷ ಹೆದರುವುದಿಲ್ಲ ಎಂದಿದ್ದಾರೆ. ಅದಲ್ಲದೆ ಸೋಮವಾರ ಕಮಲ್ ಹಾಸನ್ ಕೊಯಮತ್ತೂರಿನಲ್ಲಿ ಪ್ರಚಾರ ಮಾಡಲಿದ್ದಾರೆ ಎಂದಿದ್ದಾರೆ.
ಕಮಲ್ ಹಾಸನ್ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಏಪ್ರಿಲ್ 06 ಕ್ಕೆ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಮೇ 02ಕ್ಕೆ ಫಲಿತಾಂಶ ಪ್ರಕಟವಾಗಲಿದೆ.