ಕನ್ನಡ ಭಾಷೆ ಬಗ್ಗೆ ಕಮಲ್‌ ಹಾಸನ್‌ಗೆ ಗೌರವ ಇಲ್ಲ: ಪ್ರವೀಣ್ ಶೆಟ್ಟಿ

ಬೆಂಗಳೂರು: ರಾಜ್ಯದಲ್ಲಿ ಕಮಲ್ ಹಾಸನ್ ರ ʻಥಗ್‌ ಲೈಫ್‌ʼ ಚಿತ್ರವನ್ನು ರಿಲೀಸ್‌ ಮಾಡಬೇಕೆಂದು ಜೂನ್‌ 18 ಬುಧವಾರದಂದು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ. ಭಾಷೆ

ಕನ್ನಡದ ಬಗ್ಗೆ ಕಮಲ್‌ ಹಾಸನ್‌ ನೀಡಿದ್ದ ಹೇಳಿಕೆಯಿಂದ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ರವಾಗಿತ್ತು. ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿತ್ತು. ಕನ್ನಡ ಪರ ಸಂಘಟನೆಗಳ ಅಧ್ಯಕ್ಷ ನಾರಾಯಣಗೌಡ ಸಿನಿಮಾ ಬಿಡುಗಡೆ ಆದರೆ ಚಿತ್ರಮಂದಿರಗಳಿಗೆ ಬೆಂಕಿ ಇಡುತ್ತೇವೆ ಎಂದಿದ್ದರು. ಭಾಷೆ

ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಭದ್ರತೆ ನೀಡಿ ಚಿತ್ರವನ್ನು ರಿಲೀಸ್‌ ಮಾಡಬೇಕಿದೆ. ಆದರೆ ಚಿತ್ರ ರಿಲೀಸ್‌ ಆದೇಶದ ಬಗ್ಗೆ ಕನ್ನಡಪರ ಸಂಘಟನೆ ಮುಖಂಡ ಪ್ರವೀಣ್ ಶೆಟ್ಟಿ ವಿಡಿಯೋ ಮಾಡಿದ್ದು, ಚಿತ್ರ ರಿಲೀಸ್‌ ಆದರೆ ಏನಾಗುತ್ತದೆ ಎನ್ನುವುದನ್ನು ಹೇಳಿದ್ದಾರೆ.

ಇದನ್ನೂ ಓದಿ: ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

“ಇವತ್ತು ಕನ್ನಡ ಚಿತ್ರರಂಗ ಹಾಗೂ ಕನ್ನಡ ಹೋರಾಟಗಾರರ ಅಳಿವು – ಉಳಿವಿನ ಪ್ರಶ್ನೆ ಉದ್ಭವವಾಗಿದೆ ಎಂದರೆ ತಪ್ಪಾಗದು. ʻಥಗ್‌ ಲೈಫ್‌ʼ ಸಿನಿಮಾ ಬಿಡುಗಡೆಗೆ ಸುಪ್ರೀಂ ಅನುಮತಿ ನೀಡಿದೆ. ಆದರೆ ಆ ಸಿನಿಮಾವನ್ನು ನೋಡಬೇಕೋ – ಬೇಡ್ವೋ ಎನ್ನುವ ನಿರ್ಧಾರವನ್ನು ನಾವಿನ್ನೂ ಮಾಡಿಲ್ಲ. ಅದಕ್ಕೂ ಮುಂಚೆಯೇ ರಾತ್ರೋರಾತ್ರಿ ಪೊಲೀಸರು ನಮ್ಮ ಮನೆಯ ಬಳಿ ಬಂದಿದ್ದಾರೆ. ಇದೆಲ್ಲ ಬೆಳವಣಿಗೆ ನೋಡಿದ್ರೆ, ಮುಂದೆ ಹೋರಾಟ ಮಾಡೋದು ತುಂಬಾ ಕಷ್ಟವಿದೆ ಅನ್ನಿಸುತ್ತದೆ. ಪೊಲೀಸರು ನಮ್ಮ ಮನೆ ಬಳಿ ಬಂದು ಏನು ಮಾಡ್ತೀರಿ, ಎಲ್ಲಿಗೆ ಹೋಗ್ತೀರಿ ಅಂತ ಕೇಳುವುದು. ಕಾನೂನಿನಲ್ಲಿ ಸ್ವಾತಂತ್ರ್ಯ ಇಲ್ವಾ ಅಂಥ ಪ್ರಶ್ನೆಯನ್ನು ನಾವು ಕೇಳುವಂತೆ ಆಗಿದೆ” ಎಂದಿದ್ದಾರೆ.

ʻಥಗ್‌ ಲೈಫ್‌ʼ ಸಿನಿಮಾವನ್ನು ಎಲ್ಲರೂ ಬಹಿಷ್ಕಾರ ಮಾಡಿದ್ದಾರೆ. ಒಂದು ಪಕ್ಷ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಆದರೆ ಟಿಕೆಟ್‌ ಪಡೆದು ನಾವು ಸಿನಿಮಾವನ್ನು ನೋಡುತ್ತೇವೆ ಎನ್ನುವ ಸ್ಪಷ್ಟ ಸಂದೇಶವನ್ನು ನೀಡುತ್ತೇವೆ. ಕನ್ನಡ ಚಿತ್ರರಂಗ ಸೊರಗಿದೆ. ನಮ್ಮ ಚಿತ್ರಗಳನ್ನು ಎತ್ತಂಗಡಿ ಮಾಡಿ ಪರಭಾಷಾ ಸಿನಿಮಾಗಳಿಗೆ ರತ್ನಕಂಬಳಿ ಹಾಕಿ, ಹಣವನ್ನು ಲೂಟಿ ಮಾಡೋಕೆ ಅವಕಾಶ ಕೊಡುತ್ತಿದ್ದೇವೆ. ಕನ್ನಡ ತಾಯಿಯ ಬಗ್ಗೆ, ಕನ್ನಡ ಭಾಷೆಯ ಬಗ್ಗೆ ಕಮಲ್‌ ಹಾಸನ್‌ಗೆ ಕನಿಷ್ಠ ಗೌರವ ಇಲ್ಲ. ಅವರನ್ನು ನಾವು ತೀವ್ರವಾಗಿ ವಿರೋಧಿಸಬೇಕಾಗುತ್ತದೆ ಎಂದಿದ್ದಾರೆ.

ಕನ್ನಡಪರ ಸಂಘಟನೆಗಳ ಸದಸ್ಯರು ಟಿಕೆಟ್ ಖರೀದಿ ಮಾಡಿ ಚಿತ್ರಮಂದಿರಕ್ಕೆ ಹೋಗುತ್ತೇವೆ ಎಂದಿದ್ದು, ಆ ಮೂಲಕ ಸಿನಿಮಾ ಬಿಡುಗಡೆ ಆದರೆ ಏನಾಗುತ್ತದೆ ಎನ್ನುವುದನ್ನು ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಜೂನ್‌ 5 ರಂದು ʼಥಗ್‌ ಲೈಫ್‌ʼ ರಿಲೀಸ್‌ ಆಗಿದ್ದು, ನೀರಸದಾಯಕವಾಗಿ ಪ್ರದರ್ಶನ ಕಾಣುತ್ತಿದೆ. 300 ಕೋಟಿ ರೂ. ಬಜೆಟ್‌ನಲ್ಲಿ ಬಂದ ಚಿತ್ರ ಇದುವರೆಗೆ 50 ಕೋಟಿ ರೂ. ಗಳಿಕೆಗೂ ಪರದಾಡುತ್ತಿದೆ.

ಇದನ್ನೂ ನೋಡಿ: ಭಾರತದ ರಾಜಕೀಯ ಮತ್ತು ಹಣಕಾಸು ಒಕ್ಕೂಟದ ಆಳ ಅಗಲ ಎತ್ತಿ ತೋರಿಸುವ ಪುಸ್ತಕ Janashakthi Media

Donate Janashakthi Media

Leave a Reply

Your email address will not be published. Required fields are marked *