ಕಲ್ಯಾಣ ಮಂಡಳಿಯ ಭ್ರಷ್ಟಾಚಾರ ವಿರೋಧಿಸಿ ಕಟ್ಟಡ ನಿರ್ಮಾಣ ಕಾರ್ಮಿಕರ ‌ರಾಜ್ಯವ್ಯಾಪಿ ಪ್ರತಿಭಟನೆ

ಬೆಂಗಳೂರು : ಕಲ್ಯಾಣ ಮಂಡಳಿಯ ಭ್ರಷ್ಟಾಚಾರ ವಿರೋಧಿಸಿ ಕಟ್ಟಡ ನಿರ್ಮಾಣ ಕಾರ್ಮಿಕರು ‌ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ CITU, AITUC, INTUC, NCL, HMS, AICCTU,AIUTUC ಹಾಗು TUCC ಸಂಯೋಜಿತ ಸಂಘಗಳು ಹಾಗೂ ಹಲವು ಸ್ವತಂತ್ರ ಸಂಘಗಳು ಇಂದಿನಿಂದ ಜುಲೈ 3 ರವರೆಗೆ ನಡೆಯಲಿದೆ.

ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಸೌಲಭ್ಯಗಳನ್ನು ನೀಡುವಲ್ಲಿ, ವಿದ್ಯಾರ್ಥಿ ವೇತನ ವಿತರಣೆಯಲ್ಲಿ ,ವಿವಿಧ ಬಗೆಗೆ ಟೆಂಡರ್ ಗಳನ್ನು ನೀಡುವಲ್ಲಿ,ನೇಮಕಾತಿಗಳಲ್ಲಿ ವ್ಯಾಪಕ ಭ್ರಷ್ಟಾಚಾರಗಳು ನಡೆಯುತ್ತಿದ್ದು ಅದರಲ್ಲಿ ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದಾರೆ ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತು ಎಲ್ಲಾ ಖರೀದಿ ಟೆಂಡರ್ ಗಳನ್ನು ನಿಲ್ಲಿಸಬೇಕು ಎಂಬುದು ಪ್ರತಿಭಟನೆಕಾರರ ಬೇಡಿಕೆಯಾಗಿದೆ.

ಹೈಕೋರ್ಟ್ ಆದೇಶದಂತೆ 2021 ಅಧಿಸೂಚನೆಯಂತೆ ಎಲ್ಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನ ಸಹಾಯ ಬಿಡುಗಡೆ ಮಾಡಬೇಕು, ಸೌಲಭ್ಯಗಳ ಅರ್ಜಿ ಸಲ್ಲಿಸಲು ಆಗುತ್ತಿರುವ ತೊಂದರೆ ಹಾಗೂ‌ ಪಿಂಚಣಿ, ವೈದ್ಯಕೀಯ ಧನಸಹಾಯ ಇತ್ಯಾಧಿಗಳ ಧನ ಸಹಾಯ ನೀಡುವಲ್ಲಿ ಆಗುತ್ತಿರುವ ವಿಳಂಬ ‌ಧೋರಣೆಗಳ ವಿರುದ್ದ ಈ ಹೋರಾಟ‌ ನಡೆಸಲಾಗುತ್ತಿದೆ ಎಂದು ಸಂಘಟನೆ ಸಮನ್ವಯ ಸಮಿತಿಯ ನಾಯಕರು ತಿಳಿಸಿದಾರೆ.

ಇಂದು ಹೋರಾಟದ‌‌ ಮೊದಲ ದಿನ ರಾಯಚೂರು, ತುಮಕೂರು,ಪಾವಗಡ ಉಡುಪಿ ಕುಂದಾಪುರ, ಬೈಂದೂರು, ದಾವಣಗೆರೆ,ಧಾರವಾಡ, ಕೋಲಾರ ವಿಜಯನಗರ ಜಿಲ್ಲೆಗಳಲ್ಲಿ ಜಂಟಿ ಹೋರಾಟಗಳು ಯಶಸ್ವಿಯಾಗಿ ಜರುಗಿವೆ ಮತ್ತು ನಾಳೆಯಿಂದ ಜುಲೈ 2 ರವರೆಗೆ ಮುಂದುವರೆಯಲಿದೆ. ಜುಲೈ 3ರಂದು ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶದ ಕಾರ್ಮಿಕರು ಕಲ್ಯಾಣ ಮಂಡಳಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *