ಬೆಂಗಳೂರು ಫೆ 09 : ಕಳೆದ ವರ್ಷದ ಅತಿಥಿ ಉಪನ್ಯಾಸಕರನ್ನು ಮುಂದುವರೆಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸ್ವಲ್ಪ ಮಟ್ಟಿಗೆ ಅತಿಥಿ ಉಪನ್ಯಾಸಕರಿಗೆ ಇದು ಸಮಾಧಾನಕರ ಸುದ್ಧಿಯಾಗಿದೆ.
ಈ ಕುರಿತು ಫೆ 08, 2020 ರಂದು ಕಾಲೇಜು ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಖಾಯಂ ಉಪನ್ಯಾಸಕರನ್ನು ಹೊರತು ಪಡಿಸಿ 14,183 ಅತಿಥಿ ಉಪನ್ಯಾಸಕರಿಗೆ ಕಾರ್ಯಭಾರವನ್ನು ವಿಭಾಗಿಸಬೇಕಾಗಿದೆ. ಆದರೆ ಆರ್ಥಿಕ ಇಲಾಖೆಯು 7091 ಅಂದರೆ 50% ಉಪನ್ಯಾಸಕರ ನೇಮಕಕ್ಕೆ ಅವಕಾಶವನ್ನು ನೀಡಿದೆ. ಆ ಕುರಿತು ಕಾಲೇಜಿನ ಪ್ರಾಂಶಿಪಾಲರಿಗೆ ಸುತ್ತೋಲೆಯನ್ನು ರವಾನಿಸಿದೆ.
ಕಾಲೇಜುಗಳಲ್ಲಿ ಮಾರ್ಚ್ 2020 ರಲ್ಲಿ ಕೆಲಸ ಮಾಡಿದ ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರೆಸತಕ್ಕದ್ದು, ಹಾಗೂ ಅತಿಥಿ ಉಪನ್ಯಾಸಕರ ಸಂಖ್ಯೆಯನ್ನು ಕಡಿಮೆ ಮಾಡಬೇಕಾದ ಸಂದರ್ಭದಲ್ಲಿ ಉಲ್ಲೇಖ 1 ರ ಸುತ್ತೋಲೆಯಲ್ಲಿ ತಿಳಿಸಿರುವಂತೆ ಮೆರಿಸ್ಟ್ ಲಿಸ್ಟ್ ತಯಾರಿಸಿ ಸದರಿ ಮೆರಿಟ್ ಲಿಸ್ಟ್ ನಲ್ಲಿ ಅತ್ಯಂತ ಕಡಿಮೆ ಅಂಕ ಪಡೆದವರನ್ನು ಕೈ ಬಿಡುವಂತೆ ಸೂಚಿಸಿದ್ದು, ಸದರಿ ಮೆರಿಟ್ ಲಿಸ್ಟ್ ತಯಾರಿಸುವಾಗ ಹಿಂದಿನ ವರ್ಷಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವಧಿಗೆ ಸಂಬಂಧಪಟ್ಟ ಹಾಗೆ ಅತಿಥಿ ಉಪನ್ಯಾಸಕರು ಈ ಹಿಂದೆ ಯಾವುದೇ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಲ್ಲಿಸಿರುವ ಒಟ್ಟು ಸೇವೆಯನ್ನು ಪರಿಗಣಿಸುವಂತೆ ಸುತ್ತೋಲೆಯಲ್ಲಿ ಸ್ಪಷ್ಟನೆ ನೀಡಲಾಗಿದೆ.