ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಒಂದಲ್ಲ ಒಂದು ಗೊಂದಲದಿಂದ ಹೆಸರಾಗಿದೆ. ಸದ್ಯ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದು, ಪದವಿ ವಿದ್ಯಾರ್ಥಿಗಳ ಪರೀಕ್ಷೆ ಮೌಲ್ಯಮಾಪನ ಮಾಡಿದ ಅಂಕಪಟ್ಟಿಗಳನ್ನು ಸಂಬಂಧಪಟ್ಟ ಕಾಲೇಜುಗಳಿಗೆ ಕಳುಹಿಸದೇ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ವಿದ್ಯಾರ್ಥಿಗಳ
2019-20 -2020-21, ನೇ ಸಾಲಿನ ಪದವಿ ವಿದ್ಯಾರ್ಥಿಗಳ ಪ್ರವೇಶಾತಿ ಸಂದರ್ಭದಲ್ಲಿ PUC ಅಂಕಪಟ್ಟಿಗಳನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿತ್ತು. ಒಂದು ವರ್ಷದೊಳಗೆ PUC ಮೂಲ ಅಂಕಪಟ್ಟಿಗಳು ಪರಿಶೀಲನೆ ಮಾಡಿ ಮರಳಿ ಕಾಲೇಜುಗೆ ಕಳುಹಿಸಬೇಕಿದ್ದ ವಿಶ್ವವಿದ್ಯಾಲಯ ಅಂಕಪಟ್ಟಿಗಳನ್ನು ಕಾಲೇಜುಗಳಿಗೆ ಕಳುಹಿಸದೇ ನಿರ್ಲಕ್ಷ್ಯವಹಿಸಿದೆ.
ಮತ್ತೊಂದೆಡೆ ವಿವಿ ಅಂತಿಮ ಸೆಮಿಸ್ಟರ್ ಫಲಿತಾಂಶ ಪ್ರಕಟ ಮಾಡದೇ ವಿದ್ಯಾರ್ಥಿಗಳ ಭವಿಷ್ಯದ ಜತೆ ಚಲ್ಲಾಟವಾಡುತ್ತಿರುವ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ. ವಿದ್ಯಾರ್ಥಿಗಳ
ಇದನ್ನೂ ಓದಿ:ಎಸ್ಎಫ್ಐ ಪ್ರತಿಭಟನೆಗೆ ಮಣಿದ ಗುಲಬರ್ಗಾ ವಿವಿ: ಫಲಿತಾಂಶ ಪ್ರಕಟ
ಯಾದಗಿರಿ ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಅಂಕಪಟ್ಟಿಗಳು ಮಿಸ್ಸಿಂಗ್ ಅಗಿದ್ದು, ಬಹುತೇಕ ವಿದ್ಯಾರ್ಥಿಗಳ ಅಂಕಪಟ್ಟಿಗಳು ಕಳೆದು ಹೋಗಿವೆ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ.
BA,Bsc,Bcom ಪದವಿ ಪ್ರವೇಶ ಪಡೆಯಲು, ವಿದ್ಯಾರ್ಥಿಗಳು PUC ಮೂಲ ಅಂಕಪಟ್ಟಿಯನ್ನು ಕಾಲೇಜುಗಳಿಗೆ ಸಲ್ಲಿಕೆ ಮಾಡುತ್ತಾರೆ. ಕಾಲೇಜು ಆಡಳಿತ ಮಂಡಳಿಗಳು ವಿದ್ಯಾರ್ಥಿಗಳ PUC ಅಂಕಪಟ್ಟಿಗಳ ವೆರಿಫಿಕೇಷನ್ ಗಾಗಿ ವಿಶ್ವವಿದ್ಯಾಲಯಕ್ಕೆ ಕಳುಹಿಸಿಕೊಡುತ್ತಾರೆ.
2019-20 ಹಾಗೂ 2020- 21 ನೇ ಸಾಲಿನಲ್ಲಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗಳು ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು ತೊಂದರೆ ಅನುಭವಿಸುವಂತಾಗಿದೆ. ಪದವಿ ಪೂರ್ಣಗೊಳಿಸಿದ್ರೂ ವಿದ್ಯಾರ್ಥಿಗಳ ಕೈಯಲ್ಲಿ ಪಿಯು ಅಂಕಪಟ್ಟಿ ಇಲ್ಲದಂತಹ ಸ್ಥಿತಿಯನ್ನು ಕಲಬುರ್ಗಿ ವಿವಿ ಸೃಷ್ಟಿಸಿದೆ.
ಪಿಯು ಮಾರ್ಕ್ ಕಾರ್ಡ್ಸ್ ಬಾರದಕ್ಕೆ ಬಿಎಡ್ ವ್ಯಾಸಂಗ ಮಾಡಲು ಸಂಕಷ್ಟ:
ಬಿಎಡ್ ಪ್ರವೇಶ ಬಯಸಲು ಪದವಿ ಜೊತೆಗೆ ಪಿಯು ಅಂಕಪಟ್ಟಿ ಸಲ್ಲಿಸುವುದು ಕಡ್ಡಾಯ. ಅಂಕಪಟ್ಟಿ ಇಲ್ಲದ ಕಾರಣ ಬಿಎಡ್ ಪದವಿ ಪಡೆಯಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಪಿಯು ಅಂಕಪಟ್ಟಿಗಳನ್ನು ಕಳುಹಿಸಬೇಕೆಂದು ವಿಶ್ವವಿದ್ಯಾಲಯಕ್ಕೆ ನೂರಾರು ಬಾರಿ ಪ್ರಾಂಶುಪಾಲರು ಪತ್ರ ಬರೆದಿದ್ದಾರೆ. ಆದರೂ ಕೂಡ ಯಾವುದೇ ರೀತಿಯ ಪ್ರಯೋಜವಾಗಿರುವುದಿಲ್ಲ. ಇದರಿಂದ ಬೇಸತ್ತ ಸಾವಿರಾರು ವಿದ್ಯಾರ್ಥಿಗಳು ನಿತ್ಯವೂ ಮಾರ್ಕ್ಸ್ ಕಾರ್ಡ್ಸಗಾಗಿ ಕಾಲೇಜುಗಳಿಗೆ ಅಲೆದಾಡುತ್ತಿದ್ದಾರೆ.
ವಿಸಿ ಆಡಳಿತ ಮಂಡಳಿಯಲ್ಲಿಯೇ ಮಾರ್ಕ್ಸ್ ಕಾರ್ಡ್ ತಿಪ್ಪೆ ಗುಂಡಿಯಂತಾಗಿದೆ.ಅಲ್ಲಿ ಬಿದ್ದಿರುವ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳೇ ಹೋಗಿ ಆಯ್ದುಕೊಂಡು ಬರುವಂತ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಅಂಕಪಟ್ಟಿ ಬೇಕು ಅಂದ್ರೆ ವಿದ್ಯಾರ್ಥಿಗಳೇ ಹೋಗಿ ಹುಡುಕಬೇಕಾದ ದುಸ್ಥಿತಿ, ವಿದ್ಯಾರ್ಥಿಗಳೇ ತೆರಳಿ ಅಂಕಪಟ್ಟಿ ಹುಡುಕಾಟ ಮಾಡಿದ್ರು ಅಂಕಪಟ್ಟಿಗಳು ಸಿಗುತ್ತಿಲ್ಲ. ಇದರಿಂದಾಗಿ ಸಂಕಷ್ಟಕ್ಕೆ ಸಿಲಿಕಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವವರು ಯಾರು ಎಂಬ ಯಕ್ಷ ಪ್ರಶ್ನೆ ತೊಂದರೆಗೆ ಸಿಲುಕಿರುವ ವಿದ್ಯಾರ್ಥಿಗಳಿಗೆ ಕಾಡುತ್ತಿದೆ.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮೌಲ್ಯಮಾಪನ ಮಾಡಿ ಅಂಕಪಟ್ಟಿ ನೀಡದ ವಿಶ್ವವಿದ್ಯಾಲಯದ ನಡೆಯನ್ನು ವಿದ್ಯಾರ್ಥಿಗಳು ಖಂಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದಕ್ಕೆ ಸರ್ಕಾರ ಮತ್ತು ಸಂಬಂಧಪಟ್ಟ ಸಚಿವರು ಮುಂದಾಗಬೇಕು ಗುಲಬರ್ಗಾ ವಿವಿಯ ಕುಲಪತಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳ ಒತ್ತಾಯವಾಗಿದೆ. ವಿದ್ಯಾರ್ಥಿಗಳ
ಅನೇಕ ಆರೋಪಗಳು ವಿವಿ ಮೇಲೆ ಕೇಳಿ ಬರುತ್ತಿದ್ದು, ಉನ್ನತ ಶಿಕ್ಷಣ ಸಚಿವರು ಇತ್ತ ಗಮನ ಹರಿಸಬೇಕಾಗಿದೆ. ವಿದ್ಯಾರ್ಥಿಗಳ ಮಾರ್ಕ್ಸ್ ಕಾರ್ಡ್ಗಳನ್ನ ಎಲ್ಲೆಂದರಲ್ಲಿ ತಿಪ್ಪೆಯಲ್ಲಿ ಬೀಸಾಕಿರುವಂತೆ ಬೀಸಾಕಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕಿದೆ.
ವಿಡಿಯೋ ನೋಡಿ:ನಿರುದ್ಯೋಗ । ವಿಶೇಷ ಉಪನ್ಯಾಸ । ಕೃತಿ ಲೋಕಾರ್ಪಣೆ