ಬೆಂಗಳೂರು: 2011ರಿಂದ ಜನಸಂಸ್ಕೃತಿ ಮತ್ತು ಕಾವ್ಯಮಂಡಲ ಸಂಯುಕ್ತ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ ಕಾಡುವ ಕಿರಂ ಕಾರ್ಯಕ್ರಮ ಈ ಬಾರಿ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ.
ಎಂದಿನಂತೆ ಈ ಬಾರಿ ಕೂಡ ಕಾರ್ಯಕ್ರಮದಲ್ಲಿ ಕವಿಗಳಿಂದ ಕವಿತೆ ವಾಚನ ಆಯೋಜಿಸಲಾಗುತ್ತಿದೆ. ಕರ್ನಾಟಕ ಮತ್ತು ಹೊರ ರಾಜ್ಯ, ದೇಶಗಳಲ್ಲಿರುವ ಕವಿಗಳು ಕವಿತೆಗಳನ್ನು ಕಳಿಸಬಹುದು ಎಂದು ‘ಕಾಡುವ ಕಿರಂ’ ಬಳಗ ತಿಳಿಸಿದೆ.
ಆಯ್ಕೆಯಾದ ಕವಿತೆಗಳನ್ನು ಕಿರಂ ಪ್ರಕಾಶನದಿಂದ ಕೃತಿರೂಪದಲ್ಲಿ ಪ್ರಕಟಿಸಲಾಗುವುದು. ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಕಾಡುವ ಕಿರಂ ಕಾರ್ಯಕ್ರಮದಲ್ಲಿ ಕವಿಗಳು ಖುದ್ದಾಗಿ ಆಗಮಿಸಿ ಕವಿತೆಯನ್ನು ವಾಚಿಸಬೇಕು. ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದ ಕವಿಗಳು ಕವಿತೆಗಳನ್ನು ಕಳುಹಿಸಬಾರದು ಎಂದು ಪ್ರಕಟಣೆ ನೀಡಲಾಗಿದೆ.
ವಿಶೇಷ ಸೂಚನೆಗಳು
1) ಒಬ್ಬರು ಒಂದು ಕವಿತೆಯನ್ನು ಮಾತ್ರ ಕಳಿಸಬೇಕು
2) ಸ್ವರಚಿತ ಕನ್ನಡ ಕವಿತೆಯಾಗಿರಬೇಕು
3) ಭಾವಾನುವಾದ ಅಥವಾ ಭಾಷಾಂತರ ಕವಿತೆಯಾಗಿರಬಾರದು
4) ಆಯ್ಕೆಯಾದ ಕವಿತೆಗಳನ್ನು ಕಿರಂ ಪ್ರಕಾಶನದಿಂದ ಹೊರ ತರುವ ರಾಜ್ಯ ಮಟ್ಟದ ಕವಿತೆಗಳ ಸಂಕಲನದಲ್ಲಿ ಪ್ರಕಟಿಸಲಾಗುವುದು ಮತ್ತು ಬೆಂಗಳೂರಿನಲ್ಲಿ ನಡೆಯುವ ಅಹೋರಾತ್ರಿ ಕಾಡುವ ಕಿರಂ ಕಾರ್ಯಕ್ರಮದ ಕವಿಗೋಷ್ಠಿಗೆ ಕವಿಗಳನ್ನು ಆಹ್ವಾನಿಸಲಾಗುವುದು
5) ಕವಿಗಳು ಕವಿತೆಗಳನ್ನು ಕಳುಹಿಸುವಾಗ ಕಡ್ಡಾಯವಾಗಿ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ತಪ್ಪದೆ ನಮೂದಿಸಬೇಕು
6) ಕವಿತೆಗಳನ್ನು ಈ ಕೆಳಗಿನ ಮಿಂಚಂಚೆಯ ಮೂಲಕ ನವೆಂಬರ್ 15, 2021ರ ಒಳಗೆ ನಮಗೆ ಕಳುಹಿಸಬೇಕು. ([email protected])
7) ಕವಿತೆಯ ಆಯ್ಕೆ ಆಯ್ಕೆ ಸಮಿತಿ ಮತ್ತು ಸಂಪಾದಕರ ವಿವೇಚನೆಗೆ ಬಿಟ್ಟದ್ದು, ಈ ಕುರಿತು ಯಾವುದೇ ಪತ್ರ, ದೂರವಾಣಿ ವ್ಯವಹಾರಕ್ಕೆ ಅವಕಾಶವಿಲ್ಲ
8) ಕವಿತೆಗಳನ್ನು ತಿರಸ್ಕರಿಸುವ ಅಥವಾ ಆಯ್ಕೆ ಮಾಡುವ ಪೂರ್ಣ ಸ್ವಾತಂತ್ರ್ಯ ಆಯ್ಕೆ ಸಮಿತಿ ಮತ್ತು ಸಂಪಾದಕರ ವಿವೇಚನೆಗೆ ಸೇರಿದೆ