ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಇದೆ. ನಿನ್ನೆ ಸಂಜೆ ಹಾಗೂ ರಾತ್ರಿ ಕೊಡಗು ಜಿಲ್ಲೆಯ ಎರಡು ಕಡೆ ನಡೆದ ಪ್ರತ್ಯೇಕ ಆನೆ ದಾಳಿ ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ಮಡಿಕೇರಿ ತಾಲ್ಲೂಕು ನಾಪೋಕ್ಲು ಸಮೀಪದ ಪೆರೂರು ಗ್ರಾಮದಲ್ಲಿ ನಡೆದಿದೆ. ಪೇರೂರು ಗ್ರಾಮದ 48 ವರ್ಷದ ಅಪ್ಪಣ್ಣ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಭಾನುವಾರ ಸಂಜೆ ಸಮಾರಂಭವೊಂದನ್ನು ಮುಗಿಸಿ ಮನೆಗೆ ತೆರಳುವ ಸಂದರ್ಭ ಕಾಡಾನೆ ದಾಳಿ ನಡೆಸಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡು ಅಪ್ಪಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನ ಕೂಗೂರಿನಲ್ಲೂ ಭಾನುವಾರ ಸಂಜೆ ಕಾಡಾನೆ ದಾಳಿ ನಡೆಸಿದ ಮತ್ತೊದು ಪ್ರದೇಶಾಗಿದೆ. ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಗಾಯಗೊಂಡಿದ್ದಾರೆ. ಕೂಗೂರಿನ ಮೋಹನ್ ಎಂಬುವವರ ಕಾಫಿ ತೋಟದಲ್ಲಿ ಈ ಕಾರ್ಮಿಕರು ಕಾಫಿ ಹಣ್ಣು ಬಿಡಿಸುತ್ತಿದ್ದ ವೇಳೆ ಕಾಡಾನೆ ಹಠತ್ತಾನೆ ದಾಳಿ ನಡೆಸಿದೆ. ತಕ್ಷಣವೇ ಹೆಚ್ಚುಕೊಂಡ ಕಾರ್ಮಿಕರು ಸ್ಥಳಿಂದ ಓಡಿದ್ದಾರೆ. ಅಷ್ಟರಲ್ಲೇ ಸುಕೂರ್ ಮತ್ತು ಓಮೇಜ್ ಎಂಬಿಬ್ಬರು ದಾಳಿಯಿಂದ ಗಾಯಗೊಂಡಿದ್ದಾರೆ. ಪಕ್ಕದಲ್ಲೇ ಇದ್ದ ಕಾರ್ಮಿಕ ಮಹಿಳೆ ಎರಡು ವರ್ಷದ ರುಕ್ಮಿಯಾ ಎಂಬ ತನ್ನ ಮಗುವನ್ನು ಎತ್ತಿಕೊಂಡು ಓಡುವ ವೇಳೆ ಬಿದ್ದಿದ್ದಾರೆ. ಪರಿಣಾಮ ಮಗುವಿನ ಕೈ ಮುರಿದಿದೆ. ಎರಡು ಪ್ರಕರಣಗಳಲ್ಲೂ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳನ್ನು ಸ್ಥಳೀಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಡಾನೆ ಹಾವಳಿ ಹೆಚ್ಚಾಗುತ್ತಿದ್ದು ಜಾಗೃತರಾಗಿರುವಂತೆ ಸೂಚಿಸಿದ್ದಾರೆ. ಜನರಿಗೆ ಭದ್ರತೆಯನ್ನು ನೀಡಲಾಗುವುದು ಎಂದು ಅಧಿಕಾರಿಗಳು ಇದೇ ವೇಳೆ ಸ್ಪಷ್ಟ ಪಡಿಸಿದ್ದಾರೆ.