ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಕೆ.ವಿನೋದರ್ ಚಂದ್ರನ್ ಅವರು ಇಂದು (ಜನವರಿ 16) ಪ್ರಮಾಣವಚನ ಸ್ವೀಕರಿಸಿದ್ದಾರೆ. ಸುಪ್ರೀಂ ಕೋರ್ಟ್ ನ ನೂತನ ನ್ಯಾಯಾಧೀಶರಿಗೆ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಪ್ರಮಾಣ ವಚನ ಬೋಧಿಸಿದರು.
ಸುಪ್ರೀಂಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿ ವಿನೋದ್ ಚಂದ್ರ ಅವರನ್ನು ಜನವರಿ 7ರಂದು ಸುಪ್ರಿಂಕೋರ್ಟ್ ನ್ಯಾಯಾಧೀಶ ಹುದ್ದೆಗೇರಲು ಶಿಫಾರಸ್ಸು ಮಾಡಿತ್ತು. ಜನವರಿ 14ರಂದು ಕೇಂದ್ರ ಸರ್ಕಾರ ಅವರ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಅದರಂತೆಯೇ ಅವರು ಇಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನೂ ಓದಿ : ಕಾಂಗ್ರೆಸ್: ದೆಹಲಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ನವೆಂಬರ್ 8, 2011ರಂದು ಕೇರಳ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು, ಮಾರ್ಚ್ 23, 2023ರಂದು ಪಾಟ್ನಾದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಇನ್ನು ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಿಗೆ ಶಿಫಾರಸು ಮಾಡಲಾಯಿತು.
ವಿನೋದ್ ಚಂದ್ರನ್ ಸುಪ್ರೀಂ ಕೋರ್ಟ್‌ನಲ್ಲಿ ಏಪ್ರಿಲ್ 25, 2028ರ ವರೆಗೆ ನ್ಯಾಯಾಧೀಶರಾಗಿ ಮುಂದುವರೆಯಲಿದ್ದಾರೆ. ಸುಪ್ರೀಂಕೋರ್ಟ್ ಈಗ 33 ನ್ಯಾಯಾಧೀಶರನ್ನು ಹೊಂದಿದ್ದು, ಇದೀಗ ವಿನೋದ್ ಚಂದ್ರನ್ ಸೇರಿದಂತೆ ಈ ಸಂಖ್ಯೆ 34 ಆಗಿದೆ.
ಇದನ್ನೂ ನೋಡಿ : ಹೆಚ್ಚು ಗಂಟೆ ದುಡಿಮೆ : ಬಂಡವಾಳಿಗರ ಲಾಭಕ್ಕಾಗಿ ಕಾರ್ಮಿಕರ ಶೋಷಣೆ : ಸುಹಾಸ್ ಅಡಿಗ ಮತ್ತು ಗುರುರಾಜ ದೇಸಾಯಿ ಮಾತುಕತೆ